ಮೊದಲ ಭಾಗಕ್ಕಿಂತಲೂ ಹೆಚ್ಚು ಕಲೆಕ್ಷನ್‌ ಮಾಡಿವೆ ಈ ಚಿತ್ರಗಳ ಸೀಕ್ವೆಲ್ಸ್

Published : Dec 05, 2022, 04:28 PM IST

ಅಜಯ್ ದೇವಗನ್ (Ajay Devgn) ಅವರ ಚಿತ್ರ ದೃಶ್ಯಂ 2  (Dhrishyam 2) ಬಾಕ್ಸ್ ಆಫೀಸ್ ಅನ್ನು ಅಲುಗಾಡಿಸುತ್ತಿದೆ. ಅದರ ಕಲೆಕ್ಷನ್ ಶೀಘ್ರದಲ್ಲೇ 200 ಕೋಟಿ ರೂ. ದಾಟಲಿದೆ. ದೃಶ್ಯಂ 2 2015 ರ ದೃಶ್ಯಂ ಚಿತ್ರದ ಮುಂದುವರಿದ ಭಾಗ. ಆದರೆ ಎರಡನೇ ಭಾಗವು ಗಳಿಕೆಯಲ್ಲಿ ಮುಂದಿದೆ. ಅಂದಹಾಗೆ, ಅಂತಹ ಅನೇಕ ಬಾಲಿವುಡ್ ಚಲನಚಿತ್ರಗಳಿವೆ, ಅದರ ಮುಂದುವರಿದ ಭಾಗ ಮೊದಲ ಭಾಗಕ್ಕಿಂತಲೂ ಹೆಚ್ಚು ಗಳಿಸಿದೆ. ಮೊದಲ ಭಾಗಕ್ಕಿಂತ  ಮುಂದುವರಿದ ಭಾಗವು ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಗದ್ದಲ ಸೃಷ್ಟಿಸಿವೆ.  ಹಲವು ಕೋಟಿಗಳನ್ನು ಗಳಿಸಿದ ಸೀಕ್ವೇಲ್ಸ್ ಇವು.

PREV
18
ಮೊದಲ ಭಾಗಕ್ಕಿಂತಲೂ ಹೆಚ್ಚು ಕಲೆಕ್ಷನ್‌ ಮಾಡಿವೆ ಈ  ಚಿತ್ರಗಳ ಸೀಕ್ವೆಲ್ಸ್

ಸೌತ್ ಸ್ಟಾರ್ ಯಶ್ ಅಭಿನಯದ ಈ ವರ್ಷ ಬಿಡುಗಡೆಯಾದ ಕೆಜಿಎಫ್ 2  ಗಲ್ಲಾಪೆಟ್ಟಿಗೆಯಲ್ಲಿ ಎಷ್ಟು ಛಾಪು ಮೂಡಿಸಿತ್ತೆಂದರೆ ಇತರೆ ಚಿತ್ರಗಳು ಅದರ ಮುಂದೆ ಡಲ್‌ ಆದವು. ಈ ಚಿತ್ರ 1200 ಕೋಟಿ ಗಳಿಸಿದೆ. 2018ರಲ್ಲಿ ಬಿಡುಗಡೆಯಾದ ಇದರ ಮೊದಲ ಭಾಗ 250 ಕೋಟಿ ರೂ.ಗಳ ಕಲೆಕ್ಷನ್ ಮಾಡಲಾಗಿತ್ತು.

28

2017 ರಲ್ಲಿ ಬಂದ ಪ್ರಭಾಸ್-ಅನುಷ್ಕಾ ಶೆಟ್ಟಿ ಚಿತ್ರ ಬಾಹುಬಲಿ 2: ದಿ ಕನ್‌ಕ್ಲೂಷನ್ ಬಾಕ್ಸ್ ಆಫೀಸ್‌ನಲ್ಲಿ ಸಾಕಷ್ಟು ಹವಾ ಸೃಷ್ಟಿಸಿತು. ಚಿತ್ರ 1810 ಕೋಟಿ ವ್ಯವಹಾರ ಮಾಡಿದ್ದಯ  2015ರಲ್ಲಿ ಬಂದ ಬಾಹುಬಲಿ: ದಿ ಬಿಗಿನಿಂಗ್ ಮೊದಲ ಭಾಗ 650 ಕೋಟಿ ಗಳಿಸಿತ್ತು.

 

38

2017 ರಲ್ಲಿ ಬಂದ ಸಲ್ಮಾನ್ ಖಾನ್ ಅವರ ಟೈಗರ್ ಜಿಂದಾ ಹೈ ಚಿತ್ರ ಗಳಿಕೆಯ ವಿಷಯದಲ್ಲಿ ತನ್ನ ಮೊದಲ ಭಾಗವನ್ನು ಹಿಂದಿಕ್ಕಿದೆ. ಕತ್ರಿನಾ ಕೈಫ್ ಜೊತೆಗಿನ ಈ ಚಿತ್ರ 565 ಕೋಟಿ ವ್ಯವಹಾರ ಮಾಡಿದೆ.ಅದೇ ಸಮಯದಲ್ಲಿ, ಅದರ ಮೊದಲ ಭಾಗ  2012 ರಲ್ಲಿ ಬಂದ ಏಕ್ ಥಾ ಟೈಗರ್ 334.39 ಕೋಟಿ ಗಳಿಸಿತ್ತು.

48

2014ರಲ್ಲಿ ಬಂದ ಅಜಯ್ ದೇವಗನ್ ಮತ್ತು ಕರೀನಾ ಕಪೂರ್ ಅಭಿನಯದ ಸಿಂಘಂ ರಿಟರ್ನ್ಸ್ ಚಿತ್ರವೂ ಅದ್ಭುತವಾಗಿ ಪ್ರದರ್ಶನಗೊಂಡಿತು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 219 ಕೋಟಿ ವ್ಯವಹಾರ ಮಾಡಿದೆ. ಅದೇ ಸಮಯದಲ್ಲಿ, ಅದರ ಮೊದಲ ಭಾಗವಾದ  2011ರ ಸಿಂಗಂ 157 ಕೋಟಿ ಗಳಿಸಿತ್ತು.  

58

2022 ರಲ್ಲಿ ಕಾರ್ತಿಕ್ ಆರ್ಯನ್, ಕಿಯಾರಾ ಅಡ್ವಾಣಿ ಮತ್ತು ಟಬು ಅವರ ಚಿತ್ರ ಭೂಲ್ ಭುಲೈಯಾ 2 ಭಾರಿ ಗಳಿಸಿತು. ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ 266.88 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ. ಅದರ ಮೊದಲ ಭಾಗ ಅಂದರೆ 2007 ರಲ್ಲಿ ಬಂದ ಭೂಲ್ ಭುಲಯ್ಯ ಕೇವಲ 82.8 ಕೋಟಿ ವ್ಯವಹಾರ ಮಾಡಿದೆ.


 

68

2015ರಲ್ಲಿ ಬಂದಿದ್ದ ಕಂಗನಾ ರಣಾವತ್ ಮತ್ತು ಆರ್ ಮಾಧವನ್ ಅಭಿನಯದ ತನು ವೆಡ್ಸ್ ಮನು ರಿಟರ್ನ್ಸ್ ಚಿತ್ರವೂ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಚಿತ್ರ 255.3 ಕೋಟಿ ಗಳಿಸಿತ್ತು. ಅದೇ ಸಮಯದಲ್ಲಿ, 2011 ರಲ್ಲಿ ಬಂದ ಅದರ ಮೊದಲ ಭಾಗ ತನು ವೆಡ್ಸ್ ಮನು 56 ಕೋಟಿ ವ್ಯವಹಾರ ಮಾಡಿದೆ.
 

78

2013ರಲ್ಲಿ ಬಂದ ಆದಿತ್ಯ ರಾಯ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅವರ ಚಿತ್ರ ಆಶಿಕಿ 2 ಬಾಕ್ಸ್ ಆಫೀಸ್‌ನಲ್ಲಿ ಸಾಕಷ್ಟು ಗಳಿಸಿತು. ಈ ಚಿತ್ರ 109 ಕೋಟಿ ಗಳಿಸಿದರೆ, 1990 ರಲ್ಲಿ ಬಂದ ಅದರ ಮೊದಲ ಭಾಗ ಆಶಿಕಿ 5 ಕೋಟಿ ಕಲೆಕ್ಷನ್ ಮಾಡಿದೆ.

88

ಹೃತಿಕ್ ರೋಷನ್, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಚಿತ್ರ ಧೂಮ್ 2 ಕೂಡ ಬಾಕ್ಸ್ ಆಫೀಸ್ ಸಖತ್‌ ಕಲೆಕ್ಷನ್‌ ಮಾಡಿದೆ. 2006ರಲ್ಲಿ ಬಂದ ಈ ಚಿತ್ರ 151 ಕೋಟಿ ಬ್ಯುಸಿನೆಸ್ ಮಾಡಿದೆ. ಅದೇ ಸಮಯದಲ್ಲಿ, ಅದರ ಮೊದಲ ಭಾಗ ಧೂಮ್ 72.47 ಕೋಟಿ ಗಳಿಸಿತು. ಈ ಚಿತ್ರ 2004 ರಲ್ಲಿ ಬಿಡುಗಡೆಯಾಗಿತ್ತು.

Read more Photos on
click me!

Recommended Stories