ರಾಜಮೌಳಿಯವರ RRR ವಿಷುಯಲ್ ಎಫೆಕ್ಟ್ಸ್: ಆಸ್ಕರ್‌ಗೆ ನಾಮನಿರ್ದೇಶನ?

First Published Dec 5, 2022, 3:49 PM IST

ಎಸ್ಎಸ್ ರಾಜಮೌಳಿಯ (SS Rajamouli) ಆರ್‌ರ್‌ಆರ್‌ (RRR) ಮಾರ್ಚ್ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಇದು ಭಾರತದಾದ್ಯಂತ ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರೇಕ್ಷಕರ ಗಮನ ಸೆಳೆದ ಈ ಸಿನಿಮಾಗೆ ಅನೇಕ ವಿಮರ್ಶಕರು ವರ್ಷದ ಚಲನಚಿತ್ರ ಎಂದು ಕರೆದಿದ್ದಾರೆ. ಇದು ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶವೆಂದೂ ಅಂತರ್ಜಾಲದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಆದರೆ ಅದು ಸಂಭವಿಸಿಲ್ಲ. ಈ ನಡುವೆ ವಿಷುಯಲ್ ಎಫೆಕ್ಟ್ಸ್ ವಿಭಾಗದಲ್ಲಿ ಆರ್‌ಆರ್‌ಆರ್ ಐವರು ಆಸ್ಕರ್ ಸ್ಪರ್ಧಿಗಳಲ್ಲಿ ಒಬ್ಬರು ಎಂದು ಜನಪ್ರಿಯ ನಿಯತಕಾಲಿಕೆ ಭವಿಷ್ಯ ನುಡಿದಿದೆ.  

ಈ ಚಿತ್ರದ ಯಶಸ್ಸಿನಿಂದ ಉತ್ತೇಜಿತರಾದ ಎಸ್ಎಸ್ ರಾಜಮೌಳಿ ಅವರು ಆಸ್ಕರ್ ನಾಮನಿರ್ದೇಶನವನ್ನು ಪಡೆಯಲು ಆರ್‌ಆರ್‌ಆರ್‌ ಅನ್ನು ಪ್ರಚಾರ ಮಾಡುತ್ತಿದ್ದಾರೆ. ಅವರು ಇತ್ತೀಚೆಗೆ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದಿದ್ದಾರೆ, ಇದು ಈ ಚಿತ್ರದ ಸಾಧ್ಯತೆಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಇತ್ತೀಚಿನ ಅಪ್‌ಡೇಟ್‌ನಲ್ಲಿ, ಶ್ರೀನಿವಾಸ್ ಮೋಹನ್ RRR ನಲ್ಲಿನ ಕೆಲಸಕ್ಕಾಗಿ ವಿಷುಯಲ್ ಎಫೆಕ್ಟ್ ವಿಭಾಗದಲ್ಲಿ ನಾಮ ನಿರ್ದೇಶನಗೊಂಡ ಐದರಲ್ಲಿ ಒಂದು ಎಂದು ವೇರಿ ಭವಿಷ್ಯ ನುಡಿದಿದ್ದಾರೆ.

ಟಾಪ್ ಗನ್ 2, ಅವತಾರ್ 2, ಬ್ಲ್ಯಾಕ್ ಪ್ಯಾಂಥರ್ 2 ಮತ್ತು ದಿ ಬ್ಯಾಟ್‌ಮ್ಯಾನ್ ಈ ವರ್ಗದಲ್ಲಿ ಇತರೆ ನಾಮಿನಿಗಳಾಗಿರುತ್ತವೆ. RRR ದೃಶ್ಯ ವಿಭಾಗದಲ್ಲಿ ಈ 4 ಚಿತ್ರಗಳೊಂದಿಗೆ ಮಾತ್ರ ಸ್ಪರ್ಧಿಸಬಹುದು ಎನ್ನಲಾಗಿದೆ.

ಆರ್‌ಆರ್‌ಆರ್ ಒಂದು ಅವಧಿಯ ಸಾಹಸ ನಾಟಕವಾಗಿದ್ದು, ಜೂನಿಯರ್ ಎನ್‌ಟಿಆರ್ ಬುಡಕಟ್ಟು ನಾಯಕ ಕೊಮರಂ ಭೀಮ್ ಮತ್ತು ರಾಮ್ ಚರಣ್ ಕ್ರಾಂತಿಕಾರಿ ಅಲ್ಲೂರಿ ಸೀತಾ ರಾಮರಾಜು ಪಾತ್ರದಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವು ಸ್ವಾತಂತ್ರ್ಯಪೂರ್ವ ಭಾರತದ ಹಳ್ಳಿಯೊಂದರ ಕಾಲ್ಪನಿಕ ಕಥೆ ಇದೆ. ಚಿತ್ರದ ಎರಡೂ ಪಾತ್ರಗಳು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧದ ಹೋರಾಟವನ್ನು ತೋರಿಸುತ್ತವೆ.

ಆಲಿಯಾ ಭಟ್ ಈ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇದರಲ್ಲಿ ಅಜಯ್ ದೇವಗನ್, ಶ್ರಿಯಾ ಸರನ್, ಸಮುದ್ರಕನಿ, ಅಲಿಸನ್ ಡೂಡಿ, ರೇ ಸ್ಟೀವನ್ಸನ್, ಮಕರಂದ್ ದೇಶಪಾಂಡೆ ಮತ್ತು ಒಲಿವಿಯಾ ಮೋರಿಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರ ಸಂಗೀತವನ್ನು ಎಂಎಂ ಕೀರವಾಣಿ ಸಂಯೋಜಿಸಿದ್ದಾರೆ.

click me!