ಮದುವೆ ಬಳಿಕ ವಿದೇಶದಲ್ಲಿ ನೆಲೆಸಿರುವ ಪ್ರಿಯಾಂಕಾ ಪತಿ, ಮಗಳು, ಸಿನಿಮಾ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಆದರೂ ಆಗಾಗ ಪ್ರವಾಸ ಎಂಜಾಯ್ ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಪ್ರಿಯಾಂಕಾ ದುಬೈ ಪ್ರವಾಸಕ್ಕೆ ತೆರಳಿದ್ದರು. ದುಬೈನಲ್ಲಿ ವೀಕೆಂಡ್ ಎಂಜಾಯ್ ಮಾಡಿರುವ ಪ್ರಿಯಾಂಕಾ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.