180 flop movies: ಚಿತ್ರರಂಗದ ಈ ಹಿರಿಯ ನಟ ತಮ್ಮ ವೃತ್ತಿಜೀವನದಲ್ಲಿ 180 ಫ್ಲಾಪ್ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲಿ 33 ಸತತ ಫ್ಲಾಪ್ ಸಿನಿಮಾಗಳಿವೆ. ಆದರೂ, ಅವರು ಇಂದು ಸೂಪರ್ ಸ್ಟಾರ್ ಆಗಿದ್ದಾರೆ.
ಸಿನಿಮಾ ಜಗತ್ತಿನಲ್ಲಿ ಸ್ಟಾರ್ ಆಗೋದು ಅಷ್ಟು ಸುಲಭದ ಮಾತ್ರವಲ್ಲ. ನಟನೆ ಬಂದ ಮಾತ್ರಕ್ಕೆ ಸ್ಟಾರ್‌ಗಿರಿ ಪಟ್ಟ ಸಿಗೋದಿಲ್ಲ. ಕೆಲ ನಟರ ಸತತ ಫ್ಲಾಪ್ ಸಿನಿಮಾಗಳನ್ನು ನೀಡಿ ನಂತರ ಸೂಪರ್ ಸ್ಟಾರ್ ಮಟ್ಟಕ್ಕೆ ಬೆಳೆದಿರುತ್ತಾರೆ. ಒಮ್ಮೆ ಅದೃಷ್ಟ ಇವರ ಕೈ ಹಿಡಿದ್ರೆ ಇವರನ್ನು ಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ.
27
Mithun Chakraborty starrer disco dancer is the first 100 crore movie in indian cinema
ಇಂದು ಸಿನಿಮಾ ಅಂಗಳದ ಸೂಪರ್ ಸ್ಟಾರ್ ಆಗಿರುವ ಈ ನಟ, ಆರಂಭದಲ್ಲಿ ಸೋಲು ಕಂಡಿದ್ದರು. ಈ ನಟ ತಮ್ಮ ವೃತ್ತಿ ಜೀವನದಲ್ಲಿ ಬರೋಬ್ಬರಿ 180 ಫ್ಲಾಪ್ ಚಿತ್ರಗಳನ್ನು ನೀಡಿದ್ದಾರೆ. ಅದರಲ್ಲಿ 33 ಸತತ ಫ್ಲಾಪ್ ಸಿನಿಮಾಗಳಿವೆ. ಇದರ ಹೊರತಾಗಿಯೂ ಇಂದು ದೇಶ ವಿದೇಶದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ವೃತ್ತಿ ಜೀವನದಲ್ಲಿ 180 ಚಿತ್ರಗಳು ಸೋತಿವೆ
37
ನಾವು ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಬಗ್ಗೆ ಹೇಳುತ್ತಿದ್ದೇವೆ. ಮಿಥುನ್ ಚಕ್ರವರ್ತಿ ತಮ್ಮ ವೃತ್ತಿಜೀವನದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 180 ಫ್ಲಾಪ್ ಸಿನಿಮಾಗಳನ್ನು ನೀಡಿದ್ದಾರೆ. ಇದುವರೆಗೂ ಮಿಥುನ್ ಚಕ್ರವರ್ತಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
47
1998 ರಲ್ಲಿ ಬಿಡುಗಡೆಯಾದ 'ಚಂದಾಲ್' ಚಿತ್ರವು ಪ್ರಮುಖ ಪಾತ್ರದಲ್ಲಿ ನಟಿಸಿದ ಮಿಥುನ್ ಚಕ್ರವರ್ತಿ ಅವರ ಕೊನೆಯ ಸೋಲೋ ಹಿಟ್ ಆಗಿತ್ತು. ಇದರ ನಂತರ ಮಿಥುನ್ ಚಕ್ರವರ್ತಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 1998 ರ ನಂತರ ಬಿಡುಗಡೆಯಾದ ಮಿಥುನ್ ಚಕ್ರವರ್ತಿ ಅವರ ಎಲ್ಲಾ ಚಿತ್ರಗಳು ವಿಫಲವಾದವು.
57
ಗುರು ಮತ್ತು ಗೋಲ್ಮಾಲ್ ಸಿನಿಮಾಗಳಲ್ಲಿ ಪೋಷಕ ನಟನಾಗಿ ನಟಿಸುವ ಮೂಲಕ ಮಿಥುನ್ ಚಕ್ರವರ್ತಿ ಕಮ್ ಬ್ಯಾಕ್ ಮಾಡಿದರು. ಬಾಲಿವುಡ್ ಅಂಗಳದಲ್ಲಿ ದಾದಾ (ಅಣ್ಣ) ಎಂದೇ ಇವರನ್ನು ಕರೆಯಲಾಗುತ್ತದೆ.
ಗುರು ಮತ್ತು ಗೋಲ್ಮಾಲ್ ಸಿನಿಮಾಗಳಲ್ಲಿ ಪೋಷಕ ನಟನಾಗಿ ನಟಿಸುವ ಮೂಲಕ ಮಿಥುನ್ ಚಕ್ರವರ್ತಿ ಕಮ್ ಬ್ಯಾಕ್ ಮಾಡಿದರು. ಬಾಲಿವುಡ್ ಅಂಗಳದಲ್ಲಿ ದಾದಾ (ಅಣ್ಣ) ಎಂದೇ ಇವರನ್ನು ಕರೆಯಲಾಗುತ್ತದೆ.
67
ಅತಿ ಹೆಚ್ಚು ಫ್ಲಾಪ್ ಚಿತ್ರಗಳನ್ನು ನೀಡಿದ ಎಂಬ ಕೆಟ್ಟ ದಾಖಲೆ ಮಿಥುನ್ ಚಕ್ರವರ್ತಿ ಅವರ ಹೆಸರಿನಲ್ಲಿದೆ. ಗೋವಿಂದ ತಮ್ಮ ವೃತ್ತಿಜೀವನದಲ್ಲಿ 76 ಫ್ಲಾಪ್ ಸಿನಿಮಾ ನೀಡದ್ರೆ , ಅಕ್ಷಯ್ ಕುಮಾರ್ ಹೆಸರಿನಲ್ಲಿ 60 ಚಿತ್ರಗಳಿವೆ. ಇವರನ್ನು ಹೊರತುಪಡಿಸಿದ್ರೆ ಅನಿಲ್ ಕಪೂರ್, ಅಮಿತಾಬ್ ಬಚ್ಚನ್, ಸನ್ನಿ ಡಿಯೋಲ್ ಮತ್ತು ಸಂಜಯ್ ದತ್ ಹೆಸರಿನಲ್ಲಿಯೂ 50ಕ್ಕೂ ಅಧಿಕ ಫ್ಲಾಪ್ ಸಿನಿಮಾಗಳಿವೆ.
77
1998 ರಲ್ಲಿ ಚಂದಾಲ್ ಬಿಡುಗಡೆಯಾದ ನಂತರ ಮಿಥುನ್ ಚಕ್ರವರ್ತಿ ಅವರ ಕಳಪೆ ಫಾರ್ಮ್ ಪ್ರಾರಂಭವಾಯಿತು. ನಂತರ 9 ವರ್ಷಗಳಲ್ಲಿ 33 ಫ್ಲಾಪ್ ಸಿನಿಮಾಗಳನ್ನು ನೀಡಿದ್ದಾರೆ. ಫ್ಲಾಪ್ ಸಿನಿಮಾಗಳ ಪಟ್ಟಿಯಲ್ಲಿ ಹಿಟ್ಲರ್, ಯಮರಾಜ್, ಗಂಗಾ ಕಿ ಕಸಮ್, ಬಿಲ್ಲಾ ನಂ. 786, ಅಗ್ನಿಪುತ್ರ, ಚಾಲ್ಬಾಜ್, ಎಲಾನ್ ಮತ್ತು ಚಿಂಗಾರಿ ಸೇರಿವೆ. ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಮತ್ತು ಆರ್ ಮಾಧವನ್ ನಟನೆಯ ಗುರು ಸಿನಿಮಾ ಮಿಥುನ್ ಚಕ್ರವರ್ತಿಗೆ 9 ವರ್ಷಗಳ ಬಳಿಕ ದೊಡ್ಡ ಹಿಟ್ ನೀಡಿತ್ತು.