80-90 ರ ದಶಕದಲ್ಲಿ ಸಿನಿಮಾರಂಗದಲ್ಲಿ ಮಿಂಚಿದ ರಮ್ಯಾಕೃಷ್ಣನ್, ಗ್ಲಾಮರ್ ಬ್ಯೂಟಿ ಎಂದು ಹೆಸರುವಾಸಿಯಾಗಿದ್ದರು. ಎಲ್ಲಾ ಟಾಪ್ ಸ್ಟಾರ್‌ಗಳ ಜೊತೆ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ರಮ್ಯ ಕೃಷ್ಣನ್ ನಟಿಸಿದ್ದಾರೆ. ಈಗಲೂ ರಮ್ಯ ಕೃಷ್ಣನ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರ ವಹಿಸುತ್ತಾರೆ.