ಜಯಾ, ರೇಖಾ ಜೊತೆ 'ಬಿಗ್‌ ಬಿ' ಸ್ಕ್ರೀನ್‌ ಶೇರ್‌ ಮಾಡಿದ್ದ ಏಕೈಕ ಸಿನಿಮಾ!

First Published | Oct 12, 2020, 5:26 PM IST

ಒಂದು ಕಾಲದಲ್ಲಿ ಬಿ-ಟೌನ್‌ನಲ್ಲಿ ಅಮಿತಾಬ್ ಮತ್ತು ರೇಖಾ ಲವ್‌ ಸ್ಟೋರಿ ಸಖತ್‌ ಸುದ್ದಿ ಮಾಡಿತ್ತು. ವಿವಾಹಿತ ಅಮಿತಾಬ್‌ರ ಮೇಲಿನ ಪ್ರೀತಿಯನ್ನು ರೇಖಾ ಆಗಾಗ್ಗೆ ವ್ಯಕ್ತಪಡಿಸುತ್ತಿದ್ದರೆ, ಬಿಗ್ ಬಿ ಈ ವಿಷಯದಲ್ಲಿ ಸದಾ ಮೌನವಾಗಿದ್ದಾರೆ. ಆದರೆ ರೇಖಾರ ಪ್ರೀತಿ ಇಂದಿಗೂ ಕಡಿಮೆಯಾಗಿಲ್ಲ. ವಾಸ್ತವವಾಗಿ, ಬಚ್ಚನ್ ಯಾವಾಗಲೂ ಈ ಸಂಬಂಧವನ್ನು ನಿರಾಕರಿಸಿದರು. ಇವರ ಆಫೇರ್‌ನ ರೂಮರ್‌ ಬಚ್ಚನ್‌ನ ವೈವಾಹಿಕ ಜೀವನದಲ್ಲಿ ಕೋಲಾಹಲ ಹುಟ್ಟಿಸಿದ್ದಂತೂ ಸುಳ್ಳಲ್ಲ. ಈ ಮೂವರು ಒಟ್ಟಿಗೆ ನಟಿಸಿದ್ದ ಏಕೈಕ ಫಿಲ್ಮಂ ಹೆಡ್‌ಲೈನ್‌ ನ್ಯೂಸ್‌ ಆಗಿತ್ತು. ಯಾವುದದು ಸಿನಿಮಾ?

ಅಮಿತಾಬ್‌ ಜಯಾ ಹಾಗೂ ರೇಖಾರ ನಡುವೆ ಸಂಬಂಧ ಹೇಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಮೂವರು ಇಲ್ಲಿವರೆಗೆ ನಟಿಸಿದ್ದು ಒಂದೇ ಒಂದು ಸಿನಿಮಾದಲ್ಲಿ.
ಅಮಿತಾಬ್ ರೇಖಾ ಮತ್ತು ಜಯಾ ಅವರೊಂದಿಗೆ ಸಿಲ್ಸಿಲಾ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.1981ರಲ್ಲಿ ಬಿಡುಗಡೆಯಾದ ನಿರ್ದೇಶಕ ಮತ್ತು ನಿರ್ಮಾಪಕ ಯಶ್ ಚೋಪ್ರಾರ ಈ ಸಿನಿಮಾಫ್ಲಾಪ್ ಆಗಿತ್ತು.
Tap to resize

ಸಿಲ್ಸಿಲಾ ಚಿತ್ರದಲ್ಲಿ ಮೊದಲು ಸ್ಮಿತಾ ಪಾಟೀಲ್ ಮತ್ತು ಪರ್ವೀನ್ ಬಾಬಿ ನಟಿಸಿದ್ದರು ನಂತರ ಈ ಇಬ್ಬರು ನಟಿಯರನ್ನು ತೆಗೆದು ಹಾಕಿ ರೇಖಾ ಮತ್ತು ಜಯರನ್ನು ಸೇರಿಸಿಕೊಳ್ಳಲಾಯಿತು.
ಚಿತ್ರದ ನಿರ್ಮಾಣದ ಸಮಯದಲ್ಲಿ ಅನೇಕ ಘಟನೆಗಳು ನಡೆದಿವೆ. ಅಮಿತಾಬ್, ರೇಖಾ ಮತ್ತು ಜಯಾ ಒಟ್ಟಿಗೆ ಇರುವುದು ಸೆಟ್‌ನ ವಾತಾರಣ ಯಾವಾಗಲೂ ಟೆನ್ಷನ್‌ನಿಂದ ಕೂಡಿರುವಂತೆ ಮಾಡಿತ್ತು. ಯಶ್ ಚೋಪ್ರಾರ ಮನಸ್ಸಿನಲ್ಲೇ ಹನುಮಾನ್ ಚಾಲಿಸಾ ಮಂತ್ರ ಹೇಳಿಕೊಳ್ಳುತ್ತಿದರಂತೆ.
ಈ ಸಿನಿಮಾ ಮಾಡುವ ಸಮಯದಲ್ಲಿ ಯಶ್ ಚೋಪ್ರಾ ಅನುಭವಿಸಿದ ಟೆನ್ಷನ್‌ ಚಿತ್ರಬಿಡುಗಡೆಯಾದ ದಿನವೂ ಮುಂದುವರಿದಂತೆ.
ಚಿತ್ರ ಬಿಡುಗಡೆಯಾದಾಗ, ಅದನ್ನು ನೋಡಿದ ಅಮಿತಾಬ್ಯಶ್ ಚೋಪ್ರಾ ಮೇಲೆ ಕೋಪಗೊಂಡಿದ್ದರು. ಬಿಗ್ ಬಿ ಚಿತ್ರ ಇಷ್ಟವಾಗಲಿಲ್ಲ. ಇದರಿಂದಾಗಿ ಇಬ್ಬರ ನಡುವಿನ ಸಂಬಂಧವೂ ಹಾಳಾಯಿತು.
ವಾಸ್ತವವಾಗಿ, ಈ ಸಿನಿಮಾ ಅಮಿತಾಬ್-ರೇಖಾ ಮತ್ತು ಜಯರ ನಿಜ ಜೀವನದ ಕಥೆಗೆ ಸ್ವಲ್ಪಮಟ್ಟಿಗೆ ಹೋಲುತ್ತದೆ ಎಂಬು ದು ಬಿಗ್ ಬಿ ಕೋಪಕ್ಕೆ ಕಾರಣ.
ಇದರ ನಂತರ ಬಚ್ಚನ್‌ ಸುಮಾರು 19 ವರ್ಷಗಳ ಕಾಲ ಯಶ್ ಚೋಪ್ರಾ ಜೊತೆ ಯಾವುದೇ ಚಿತ್ರ ಮಾಡಲಿಲ್ಲ.
2000 ರಲ್ಲಿ, ಯಶ್ ರಾಜ್‌ರ ಮೊಹಬ್ಬತೆ ಸಿನಿಮಾದಲ್ಲಿ ಕಾಣಿಸಿಕೊಂಡರು ಸೂಪರ್‌ ಸ್ಟಾರ್‌ ಅಮಿತಾಬ್‌ ಬಚ್ಚನ್‌.

Latest Videos

click me!