ರಣವೀರ್-ದೀಪಿಕಾ ಪ್ರತ್ಯೇಕತೆ ಸುದ್ದಿ ಟ್ವೀಟ್‌ ಮಾಡಿದ ವ್ಯಕ್ತಿಗೆ ಫ್ಯಾನ್ಸ್‌ನಿಂದ ಮಂಗಳಾರತಿ!

Published : Sep 30, 2022, 05:01 PM ISTUpdated : Sep 30, 2022, 05:18 PM IST

ರಣವೀರ್ ಸಿಂಗ್ ಮತ್ತು ದೀಪಿಕಾ  ಪಡುಕೋಣೆ (Ranveer Singh and Deepika Padukone) ಬಿ-ಟೌನ್‌ನ ಅತ್ಯುತ್ತಮ ಜೋಡಿಗಳಲ್ಲಿ ಒಬ್ಬರು. ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ಆದರೆ ಇತ್ತಿಚೀಗೆ ಇಂಟರ್ನೆಟ್‌ನಲ್ಲಿ ಅವರ ಪ್ರತ್ಯೇಕತೆಯ ಸುದ್ದಿ ಹೆಚ್ಚು ವೈರಲ್ ಆಗುತ್ತಿದೆ. ಅದೇ ಸಮಯದಲ್ಲಿ  ಈ ವದಂತಿಯು ಬಗ್ಗೆ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ಈ ಸುದ್ದಿಯನ್ನು ಟ್ವೀಟ್‌ ಮಾಡಿದ ವ್ಯಕ್ತಿಗೆ ಇತರ ಬಳಕೆದಾರರೂ ತೀವ್ರವಾಗಿ ಕ್ಲಾಸ್ ತೆಗೆದುಕೊಂಡರು.

PREV
17
 ರಣವೀರ್-ದೀಪಿಕಾ  ಪ್ರತ್ಯೇಕತೆ ಸುದ್ದಿ ಟ್ವೀಟ್‌ ಮಾಡಿದ ವ್ಯಕ್ತಿಗೆ ಫ್ಯಾನ್ಸ್‌ನಿಂದ ಮಂಗಳಾರತಿ!

ವಾಸ್ತವವಾಗಿ ಟ್ವಿಟ್ಟರ್ ಬಳಕೆದಾರರು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಡುವೆ 'ಎಲ್ಲಾ ಚೆನ್ನಾಗಿಲ್ಲ' ಎಂದು ಹೇಳುವ ಪೋಸ್ಟ್ ಮಾಡಿದ್ದಾರೆ. ಇದಾದ ನಂತರ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಬಹುಬೇಗ ವೈರಲ್ ಆಗಿತ್ತು. 

27

ಈ ವದಂತಿಯು ವೈರಲ್ ಆದ ನಂತರ, ರಣವೀರ್ ಸಿಂಗ್ ಅವರ ವೀಡಿಯೊ ಹೊರಬಂದಿದೆ, ಇದರಲ್ಲಿ ಅವರು ತಮ್ಮ ಪತ್ನಿ ದೀಪಿಕಾ ಪಡುಕೋಣೆಯನ್ನು ಬಹಳ ಸಂತೋಷದಿಂದ ಹೊಗಳಿದ್ದಾರೆ.

37

ಇಬ್ಬರ ನಡುವಿನ ಪ್ರತ್ಯೇಕತೆಯ ವರದಿಗಳ ನಡುವೆ, ರಣವೀರ್ ಸಿಂಗ್ ಅವರು ತಮ್ಮ ಬಗ್ಗೆ ಮತ್ತು ದೀಪಿಕಾ ಅವರೊಂದಿಗಿನ ಆಳವಾದ ಸಂಬಂಧದ ಬಗ್ಗೆ ಮಾತನಾಡಿದರು.  ರಣವೀರ್ ಸಿಂಗ್ ನಾವು 2012 ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದೇವೆ ಎಂದು ಹೇಳಿದರು. 

47

ನಾನು ಮತ್ತು ದೀಪಿಕಾ ಈ ವರ್ಷದಲ್ಲಿ (2022) ಹತ್ತು ವರ್ಷಗಳ ಕಾಲ ಒಟ್ಟಿಗೆ ಇದ್ದೇವೆ. ಈ ಸಂಬಂಧ ಮತ್ತಷ್ಟು ಆಳವಾಗುತ್ತಿದೆ ಎಂದು ಅವರು ಹೇಳಿದರು. ಅದೇ ಸಮಯದಲ್ಲಿ, ದೀಪಿಕಾ ಬಗ್ಗೆ ನನಗೆ ಸಂತೋಷವಾಗಿದೆ  ನಟಿಯ ಬಗ್ಗೆ ನನಗೆ ತುಂಬಾ ಗೌರವವಿದೆ ಎಂದು ರಣವೀರ್‌ ಅವರು ಹೇಳಿದರು, 

57

ಅದೇ ಸಮಯದಲ್ಲಿ  ರಣವೀರ್ ಸಿಂಗ್ ಮತ್ತು ದೀಪಿಕಾ  ಪಡುಕೋಣೆ ಮದುವೆ ಮುರಿಯುವ ಬಗ್ಗೆಯ ವದಂತಿ ಬಗ್ಗೆ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಅನೇಕ ಬಳಕೆದಾರರು ಈ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

67

ವೈರಲ್ ಸಂದೇಶದ ಬಗ್ಗೆ ಟ್ವಿಟರ್ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದೇ ಸಮಯದಲ್ಲಿ, ಟ್ವಿಟರ್‌ನಲ್ಲಿ ಇಬ್ಬರ ಪ್ರತ್ಯೇಕತೆಯ ಸುದ್ದಿಯನ್ನು ಮಾಡಿದ ವ್ಯಕ್ತಿಗೆ ಇತರ ಬಳಕೆದಾರರೂ ತೀವ್ರವಾಗಿ ಕ್ಲಾಸ್ ತೆಗೆದುಕೊಂಡರು.

77

ಈ ದಂಪತಿಯ ಅಭಿಮಾನಿಯೊಬ್ಬರು ನಿಮಗೆ ಅನಾರೋಗ್ಯವಿದೆ, ದಯವಿಟ್ಟು ನೀವೇ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದರು. ಅದೇ ಸಮಯದಲ್ಲಿ, ಇತರ ನೆಟಿಜನ್‌ಗಳು ಸಹ ಇಂತಹ ಸುದ್ದಿಗಳನ್ನು ಹಂಚಿಕೊಳ್ಳಬೇಡಿ ಮತ್ತು ಇತರರ ಸಂಬಂಧಗಳನ್ನು ಗೌರವಿಸುವಂತೆ ಸಲಹೆ ನೀಡಿದ್ದಾರೆ.

Read more Photos on
click me!

Recommended Stories