ಗಂಡನ ಬಿಟ್ಟು ತಾಯಿ ಜೊತೆ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ದೀಪಿಕಾ; ಊಹಾಪೋಹಕ್ಕೆ ಮತ್ತೆ ರೆಕ್ಕೆ

First Published | Sep 30, 2022, 4:53 PM IST

ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ (Deepika Padukone) ಆಸ್ಪತ್ರೆಗೆ ದಾಖಲಾದ ಸುದ್ದಿ ಮತ್ತು ರಣವೀರ್ ಸಿಂಗ್ (Ranveer Singh) ಜೊತೆಗಿನ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದೀಗ ಮುಂಬೈ ವಿಮಾನ ನಿಲ್ದಾಣದಿಂದ ನಟಿಯ ವಿಡಿಯೋ ಸಖತ್‌ ವೈರಲ್‌ ಆಗಿದೆ. ದೀಪಿಕಾ ಎಲ್ಲಿಗೆ ಹೊರಟಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ವೀಡಿಯೋ ನೋಡಿದ ಜನರು ಬೇರೆ ಬೇರೆ ರೀತಿಯ ಊಹಾಪೋಹಗಳನ್ನು ಮಾಡುತ್ತಿದ್ದಾರೆ. ಕೆಲವರು ಆಕೆಯ ಕೈಯಲ್ಲಿರುವ ಉಂಗುರವನ್ನು ನೋಡಲು ಪ್ರಯತ್ನಿಸುತ್ತಿದ್ದರೆ, ಕೆಲವರು ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿದ್ದಾರೆ ಎಂದು ಊಹಿಸುತ್ತಿದ್ದಾರೆ.

36 ವರ್ಷದ ದೀಪಿಕಾ ಪಡುಕೋಣೆ  ಅವರು 2018 ರಲ್ಲಿ 'ಬಾಜಿರಾವ್ ಮಸ್ತಾನಿ' ನಂತಹ ಅನೇಕ ಚಿತ್ರಗಳಲ್ಲಿ ತಮ್ಮ ಸಹ-ನಟ ರಣವೀರ್ ಸಿಂಗ್ ಅವರನ್ನು ವಿವಾಹವಾದರು.

ಆದರೆ ಈಗ ಇವರ ನಡುವೆ ಎಲ್ಲಾ ಸರಿಯಿಲ್ಲ ಮತ್ತು  ಇವರಿಬ್ಬರ ಸಂಬಂಧ ಮುರಿಯಲಿದೆ ಎಂಬ ವದಂತಿಗಳ ನಡುವೆ ದೀಪಿಕಾ ಪಡುಕೋಣೆ ತಾಯಿಯೊಂದಿಗೆ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ . 

Tap to resize

ಕಾರಿನಿಂದ ಇಳಿದ ದೀಪಿಕಾ ತನ್ನ ತಾಯಿಯೊಂದಿಗೆ ವಿಮಾನ ನಿಲ್ದಾಣದ ಒಳಗೆ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವರು ಪಾಪರಾಜಿಗಳಿಗೆ ನಗುವಿನೊಂದಿಗೆ ಪೋಸ್ ನೀಡುತ್ತಿದ್ದಾರೆ

ಈ ಸಮಯದಲ್ಲಿ, ದೀಪಿಕಾ ಡೆನಿಮ್ ಪ್ಯಾಂಟ್‌  ಕಪ್ಪು ಬಣ್ಣದ ಹೈನೆಕ್ ಟಾಪ್‌ ಮತ್ತು ಪ್ಪು ಮತ್ತು ಬಿಳಿ ಗೆರೆಗಳ ಹಾಫ್ ಸ್ಲೀವ್ ಸ್ವೆಟರ್ ಅನ್ನು ಧರಿಸಿದ್ದಾರೆ. ತನ್ನ ಲುಕ್‌ಅನ್ನು ಪೂರ್ಣಗೊಳಿಸಲು, ದೀಪಿಕಾ ಕಪ್ಪು ಬಣ್ಣದ ಬೂಟುಗಳನ್ನುಧರಿಸಿದ್ದರು  ಮತ್ತು ಅದೇ ಬಣ್ಣದ ಹ್ಯಾಂಡ್ ಬ್ಯಾಗ್ ಅನ್ನು ಸಹ ಹಿಡಿದಿದ್ದರು 

ದೀಪಿಕಾ ಅವರ ವೀಡಿಯೊವನ್ನು ನೋಡಿದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ತರತರದ ಕಾಮೆಂಟ್‌ ಮಾಡಿದ್ದಾರೆ. 'ಅವರು ಹೃದಯ ಚಿಕಿತ್ಸೆಗಾಗಿ ಯುಎಸ್‌ಗೆ ಹೋಗುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ' ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಅಯ್ಯೋ  ಅವರ ಕೈಯಲ್ಲಿ ಮದುವೆಯ ಉಂಗುರವಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ. 

'ಈಗ ವಿಚ್ಛೇದನವು ಸಂಭವಿಸಲಿದೆ, ಆದ್ದರಿಂದ ರಜೆಯ ಮೇಲೆ ಹೋಗುತ್ತಿದ್ದಾರೆ' ಎಂದು ಇನ್ನೊಬ್ಬರು ಹೇಳಿದ್ದಾರೆ. ಅದೇ ಸಮಯದಲ್ಲಿ, ದೀಪಿಕಾ ಪಡುಕೋಣೆ ಪ್ಯಾರಿಸ್‌ನಲ್ಲಿ ಫ್ಯಾಷನ್ ವೀಕ್‌ಗೆ ಹಾಜರಾಗಲಿದ್ದಾರೆ ಎಂದು ಬಳಕೆದಾರರು ಊಹಿಸಿದ್ದಾರೆ.

ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ  'ಬ್ರೇಕಿಂಗ್! ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಡುವೆ ಎಲ್ಲವೂ ಸರಿಯಿಲ್ಲ' ಎಂಬ ಒಂದು ಟ್ವೀಟ್ ವೈರಲ್ ಆಗಿದೆ. ಸಾಗರೋತ್ತರ ಸೆನ್ಸಾರ್ ಮಂಡಳಿಯ ಸದಸ್ಯ ಮತ್ತು ದಕ್ಷಿಣ, ಹಿಂದಿ ಮತ್ತು ಸಾಗರೋತ್ತರ ಚಲನಚಿತ್ರಗಳ ವಿವಾದಾತ್ಮಕ ವಿಮರ್ಶಕ ಉಮರ್ ಸಂಧು ಹೆಸರಿನ ಟ್ವಿಟರ್ ಹ್ಯಾಂಡಲ್‌ನಿಂದ ಈ ಟ್ವೀಟ್ ಬಂದಿದೆ.

 ಕಳೆದ ವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದೀಪಿಕಾ ಪಡುಕೋಣೆ ದಾಖಲಾಗಿದ್ದರು. ವರದಿಗಳ ಪ್ರಕಾರ, ಅವರು ಉದ್ವೇಗಗೊಂಡಿದ್ದರು. ಆದರೆ, ನಟಿಯ ಅನಾರೋಗ್ಯಕ್ಕೆ ಕಾರಣವೇನು? ಎಂದು ದೀಪಿಕಾ ಅಥವಾ ಅವರ ತಂಡದಿಂದ ಯಾವುದೇ ಅಪ್ಡೇಟ್ ಬಂದಿಲ್ಲ.

 ಕೆಲಸದ ಮುಂಭಾಗದಲ್ಲಿ  ದೀಪಿಕಾ ಪಡುಕೋಣೆ ಕೊನೆಯದಾಗಿ 'ಗೆಹ್ರಾಯನ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 'ಬ್ರಹ್ಮಾಸ್ತ್ರ ಮೊದಲ ಭಾಗ: ಶಿವ' ದಲ್ಲಿಯೂ ಅವರ ಒಂದು ಸಣ್ಣ ನೋಟವು ಕಂಡುಬಂದಿದೆ, ಅದರೆ ಅವರಿಗೆ ಕ್ರೆಡಿಟ್ ನೀಡಲಿಲ್ಲ. ದೀಪಿಕಾ ಮುಂಬರುವ ಚಿತ್ರಗಳಲ್ಲಿ 'ಸರ್ಕಸ್', 'ಪಠಾಣ್', 'ಪ್ರಾಜೆಕ್ಟ್ ಕೆ' ಮತ್ತು 'ಜವಾನ್' ಸೇರಿವೆ.

Latest Videos

click me!