ಸಿದ್ಧಾರ್ಥ್ ಮಲ್ಹೋತ್ರಾ 10 ವರ್ಷಗಳ ಸಿನಿ ಪಯಣದಲ್ಲಿ ನೀಡಿದ ಹಿಟ್‌ ಸಿನಿಮಾಗಳೆಷ್ಟು

First Published Oct 24, 2022, 5:25 PM IST

ಅಜಯ್ ದೇವಗನ್ (Ajay Devgn) ಅಭಿನಯದ 'ಥ್ಯಾಂಕ್ ಗಾಡ್' (Thank God)ಚಿತ್ರ ಅಕ್ಟೋಬರ್ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಕೂಡ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ ಮತ್ತು ಇದು ಅವರ ವೃತ್ತಿಜೀವನದ 13 ನೇ ಚಿತ್ರವಾಗಿದೆ. ಇದಕ್ಕೂ ಮುನ್ನ ಅವರು 12 ಚಿತ್ರಗಳಲ್ಲಿಕಾಣಿಸಿಕೊಂಡಿದ್ದಾರೆ. ಆದರೆ ಇವುಗಳಲ್ಲಿ ಕೇವಲ 4 ಚಿತ್ರಗಳು ಮಾತ್ರ ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ಗಡಿ ದಾಟಲು  ಸಾಧ್ಯವಾಗಿವೆ. ಸಿದ್ಧಾರ್ಥ್ ಮಲ್ಹೋತ್ರಾ ಅವರ ಬಾಕ್ಸ್ ಆಫೀಸ್ ದಾಖಲೆ ವಿವರ ಇಲ್ಲಿದೆ.

ಸಿದ್ಧಾರ್ಥ್ ಮಲ್ಹೋತ್ರಾ ಅವರ ಮೊದಲ ಚಿತ್ರ 2012 ರಲ್ಲಿ 'ಸ್ಟೂಡೆಂಟ್ ಆಫ್ ದಿ ಇಯರ್', ಇದು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 70 ಕೋಟಿ ಗಳಿಸಿತು. ಸಿದ್ಧಾರ್ಥ್ ಅವರ ಎರಡನೇ ಚಿತ್ರ 'ಹಸೀ ತೋ ಫಾಸೀ' 2014 ರಲ್ಲಿ ಬಂದಿತು, ಅದು ಸರಾಸರಿ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 37.4 ಕೋಟಿ ಗಳಿಸಿತು.

2014 ರಲ್ಲಿ, ಸಿದ್ಧಾರ್ಥ್ ಮಲ್ಹೋತ್ರಾ ಅವರ 'ಏಕ್ ವಿಲನ್' ಚಿತ್ರ ಬಂದಿತು.ಸುಮಾರು 105.62 ಕೋಟಿ ಕಲೆಕ್ಷನ್ ಮಾಡಿದ  ಈ ಚಿತ್ರ ಹಿಟ್ ಆಗಿತ್ತು. ಆದರೆ 2015 ರಲ್ಲಿ, ಅಕ್ಷಯ್ ಕುಮಾರ್ ಜೊತೆಗಿನ ಅವರ 'ಬ್ರದರ್ಸ್' ಚಿತ್ರ ಸುಮಾರು 82.47 ಕೋಟಿ ಗಳಿಸಿದರೂ ವಿಫಲವಾಯಿತು

2016 ರಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರ ಎರಡು ಚಿತ್ರಗಳು ಬಂದವು. ಈ ಪೈಕಿ 'ಕಪೂರ್ ಆಂಡ್ ಸನ್ಸ್' 73.29 ಕೋಟಿ ಗಳಿಸಿ ಸೆಮಿ ಹಿಟ್ ಆಗಿತ್ತು. ಅದೇ ಹೊತ್ತಿಗೆ 'ಬಾರ್ ಬಾರ್ ದೇಖೋ' ಸುಮಾರು 31.24 ಕೋಟಿ ಕಲೆಕ್ಷನ್ ಮಾಡಿ ಫ್ಲಾಪ್ ಆಯಿತು.

ಸಿದ್ಧಾರ್ಥ್ ಮಲ್ಹೋತ್ರಾ 2017 ರಲ್ಲಿ ಎರಡು ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. 'ಎ ಜಂಟಲ್‌ಮ್ಯಾನ್' ಬಾಕ್ಸ್ ಆಫೀಸ್‌ನಲ್ಲಿ ಸುಮಾರು 20.59 ಕೋಟಿ ಗಳಿಸಿ ಫ್ಲಾಪ್ ಆಗಿತ್ತು. ಎರಡನೇ ಚಿತ್ರ 'ಇತ್ತೆಫಾಕ್' 30.21 ಕೋಟಿ ಗಳಿಸಿ ಸರಾಸರಿ ಎಂದು ಸಾಬೀತಾಗಿದೆ.

2018 ರಲ್ಲಿ, ಸಿದ್ಧಾರ್ಥ್ ಮಲ್ಹೋತ್ರಾ ಫ್ಲಾಪ್ ಚಿತ್ರ 'ಆಯಾರಿ'  ತೆರೆಯ ಮೇಲೆ ಬಂದಿತ್ತು, ಇದು ಸುಮಾರು 18.22 ಕೋಟಿ ಗಳಿಸಿತು. ಅದೇ ರೀತಿ 2019ರಲ್ಲಿ ಬಂದ 'ಜಬರಿಯಾ ಜೋಡಿ' ಕೂಡ ವೀಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 16.33 ಕೋಟಿ ಗಳಿಸಿತು.

2019 ರಲ್ಲಿ, ಸಿದ್ಧಾರ್ಥ್ 'ಮಾರ್ಜಾವಾನ್' ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 47.78 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ, ಆದರೆ ಅದು ಸರಾಸರಿಯಾಗಿತ್ತು.  ಸಿದ್ಧಾರ್ಥ್ ಅವರ ಹಿಂದಿನ ಚಿತ್ರ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಜೀವನಚರಿತ್ರೆ 'ಶೆರ್ಷಾ', ಇದು OTT ನಲ್ಲಿ ಬಿಡುಗಡೆಯಾಯಿತು ಮತ್ತು ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿಯನ್ನು ಪಡೆಯಿತು.

click me!