ಖ್ಯಾತಿಗೂ ಮುನ್ನ ಮದುವೆಯಾಗಿದ್ದ ಬಾಲಿವುಡ್‌ನ ಸ್ಟಾರ್ಸ್‌: ಈಗ ಉಳಿದಿರುವುದು ಒಂದೇ ಮದುವೆ

Published : Oct 24, 2022, 05:13 PM IST

ಶಾರುಖ್ ಖಾನ್ (Shah Rukh Khan ) ಮತ್ತು ಗೌರಿ ಖಾನ್ (Guari Khan) ಮದುವೆಗೆ 31 ವರ್ಷಗಳು. ಅವರು 25 ಅಕ್ಟೋಬರ್ 1991 ರಂದು ನವದೆಹಲಿಯಲ್ಲಿ ವಿವಾಹವಾದರು. ವಿಶೇಷವೆಂದರೆ ಅದುವರೆಗೂ ಶಾರುಖ್ ಖಾನ್ ಅಷ್ಟೊಂದು ಜನಪ್ರಿಯತೆ ಗಳಿಸಿರಲಿಲ್ಲ ಮತ್ತು ಚಲನಚಿತ್ರಗಳನ್ನು ಸಹ ಪ್ರವೇಶಿಸರಿಲಿಲ್ಲ ಕೇವಲ  ಟಿವಿಯಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ್ದರು. ಆದರೆ ಅವರು ಇನ್ನೂ ಪ್ರಸಿದ್ಧರಾಗಿರಲಿಲ್ಲ. ಅಂದಹಾಗೆ, ಶಾರುಖ್ ಖಾನ್ ಮಾತ್ರವಲ್ಲ, ಇನ್ನೂ ಅನೇಕ ನಟರು ಪ್ರಸಿದ್ಧರಾಗುವ ಮೊದಲು ಮದುವೆಯಾಗಿದ್ದಾರೆ. ಅಂತಹ ಸೆಲೆಬ್ರಿಟಿಗಳ ಬಗ್ಗೆ  ಮಾಹಿತಿ ಇಲ್ಲಿದೆ.

PREV
110
ಖ್ಯಾತಿಗೂ ಮುನ್ನ ಮದುವೆಯಾಗಿದ್ದ ಬಾಲಿವುಡ್‌ನ ಸ್ಟಾರ್ಸ್‌: ಈಗ ಉಳಿದಿರುವುದು ಒಂದೇ ಮದುವೆ

ಮೊದಲು ಶಾರುಖ್ ಖಾನ್  ಟಿವಿಯಲ್ಲಿ 'ದಿಲ್ ದರಿಯಾ', 'ಫೌಜಿ', 'ಸರ್ಕಸ್' ಮತ್ತು 'ವಾಗ್ಲೇ ಕಿ ದುನಿಯಾ' ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಮದುವೆಯಾದ ಸುಮಾರು ಒಂದು ವರ್ಷದ ನಂತರ 'ದೀವಾನಾ' (1992) ಚಿತ್ರವು ಸೂಪರ್ ಹಿಟ್ ಆಗಿತ್ತು. ನಂತರ ಶಾರುಖ್ ಹಿಂತಿರುಗಿ ನೋಡಲೇ ಇಲ್ಲ.


 

210

ಸೈಫ್ ಅಲಿ ಖಾನ್ ತಮ್ಮ ಚೊಚ್ಚಲ ಚಿತ್ರಕ್ಕೆ ಎರಡು ವರ್ಷಗಳ ಮೊದಲು ವಿವಾಹವಾದ ನಟರಲ್ಲಿ ಒಬ್ಬರು.  ಸೈಫ್ 1991 ರಲ್ಲಿ ಅಂದಿನ ಜನಪ್ರಿಯ ನಟಿ ಅಮೃತಾ ಸಿಂಗ್ ಅವರನ್ನು ವಿವಾಹವಾದರು, ಅವರ ಚೊಚ್ಚಲ ಚಿತ್ರ 'ಆಶಿಕ್ ಆರಾ' 1993 ರಲ್ಲಿ ಬಿಡುಗಡೆಯಾಯಿತು. ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಸೈಫ್ ಮತ್ತು ಅಮೃತಾ ಅವರ ಮಕ್ಕಳು. 2004 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು.

310

ಆಮೀರ್ ಖಾನ್ ಅವರ ಮೊದಲ ಮದುವೆ 1986 ರಲ್ಲಿ ರೀನಾ ದತ್ತಾ ಅವರೊಂದಿಗೆ ಆಗಿತ್ತು. ಅವರ ಚೊಚ್ಚಲ ಚಿತ್ರ 'ಕಯಾಮತ್ ಸೆ ಕಯಾಮತ್ ತಕ್' 1988 ರಲ್ಲಿ ಬಿಡುಗಡೆಯಾಯಿತು. ಆಮೀರ್‌ಗೆ ರೀನಾ, ಜುನೈದ್ ಮತ್ತು ಆಯ್ರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಅವರು 2002 ರಲ್ಲಿ ವಿಚ್ಛೇದನ ಪಡೆದರು.

410

2001 ರಲ್ಲಿ 'ಪ್ಯಾರ್, ಇಷ್ಕ್ ಔರ್ ಮೊಹಬ್ಬತ್' ಚಿತ್ರದ ಮೂಲಕ ಮಾಡೆಲ್ ಆಗಿದ್ದ ಅರ್ಜುನ್ ರಾಂಪಾಲ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಆದರೆ ಅವರು ಅದಕ್ಕಿಂತ ಮೂರು ವರ್ಷಗಳ ಹಿಂದೆ ಮಾಜಿ ಮಿಸ್ ಇಂಡಿಯಾ ಮತ್ತು ಸೂಪರ್ ಮಾಡೆಲ್ ಮೆಹರ್ ಜೆಸಿಯಾ ಅವರನ್ನು 1998 ರಲ್ಲಿ ವಿವಾಹವಾದರು. ಅವರ 21 ವರ್ಷಗಳ ಸಂಬಂಧ 2018 ರಲ್ಲಿ ಮುರಿದುಬಿತ್ತು.

510

ಅನಿಲ್ ಕಪೂರ್ 1979 ರಲ್ಲಿ ಬಿಡುಗಡೆಯಾದ 'ಹಮೇರೆ ತುಮ್ಹಾರೆ' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರೂ, 1984 ರಲ್ಲಿ ಬಿಡುಗಡೆಯಾದ 'ಟಪೋರಿ' ಚಿತ್ರದಿಂದ ಅವರಿಗೆ ಮನ್ನಣೆ ಸಿಕ್ಕಿತು. ಈ ವರ್ಷ ಅವರು ವಸ್ತ್ರ ವಿನ್ಯಾಸಕಿ ಸುನೀತಾ ಭಂಭಾನಿ  ಅವರನ್ನು ವಿವಾಹವಾದರು. 

610

ನಟಿ ಡಿಂಪಲ್ ಕಪಾಡಿಯಾ 1973 ರಲ್ಲಿ ರಾಜೇಶ್ ಖನ್ನಾ ಅವರನ್ನು ವಿವಾಹವಾದರು, ಆದರೆ ಅವರ ಮೊದಲ ಚಿತ್ರ 'ಬಾಬಿ' 6 ತಿಂಗಳ ನಂತರ ತೆರೆಗೆ ಬಂದಿತು, ಅದು ಅವರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತು.

710

ಶೋ ಮ್ಯಾನ್ ಎಂದೇ ಹೆಸರಾದ ರಾಜ್ ಕಪೂರ್ ಸಾಹಿಬ್ ಮದುವೆಯಾದ 7 ವರ್ಷಗಳ ನಂತರ ಚಿತ್ರರಂಗಕ್ಕೆ ಕಾಲಿಟ್ಟರು. 1940 ರಲ್ಲಿ, ಅವರು ಕೃಷ್ಣ ಅವರನ್ನು ವಿವಾಹವಾದರು ಮತ್ತು 1947 ರಲ್ಲಿ ನಾಯಕರಾಗಿ ಅವರ ಮೊದಲ ಚಿತ್ರ 'ನೀಲ್ ಕಮಲ್' ನಲ್ಲಿ ಬಂದಿತು

810

ಶಶಿ ಕಪೂರ್ ಪ್ರಸಿದ್ಧರಾಗುವ ಮೊದಲು ವಿವಾಹವಾದರು.1958 ರಲ್ಲಿ ಅವರು ಜೆನ್ನಿಫರ್ ಕೆಂಡಾಲ್ ಅವರೊಂದಿಗೆ ಹಸೆಮಣೆ ಏರಿದ್ದರು ನಂತರ 1961 ರಲ್ಲಿ ಅವರ ನಾಯಕನಾಗಿ ಅವರ ಮೊದಲ ಚಿತ್ರ 'ಧರ್ಮಾತ್ಮ' ತೆರೆಗೆ ಬಂದಿತು.

910

ಆಯುಷ್ಮಾನ್ ಖುರಾನಾ ಪ್ರಸಿದ್ಧರಾಗುವ ಮೊದಲು ವಿವಾಹವಾದರು. ಅವರ ಚೊಚ್ಚಲ ಚಿತ್ರ 'ವಿಕ್ಕಿ ಡೋನರ್' 2012 ರಲ್ಲಿ ತೆರೆಗೆ ಬಂದಿತು, ಆದರೆ 2011 ರಲ್ಲಿ ಅವರು ಬಾಲ್ಯದ ಪ್ರೀತಿ ತಾಹಿರಾ ಕಶ್ಯಪ್ ಅವರನ್ನು ವಿವಾಹವಾದರು.

1010

ನಟಿ ಚಿತ್ರಾಂಗದಾ ಸಿಂಗ್ 2003 ರಲ್ಲಿ 'ಹಜಾರೋನ್ ಖ್ವೈಶೆ ಐಸಿ' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು, ಆದರೆ ಅವರು ಎರಡು ವರ್ಷಗಳ ಹಿಂದೆ 2001 ರಲ್ಲಿ ಗಾಲ್ಫ್ ಆಟಗಾರ ಜ್ಯೋತಿ ಸಿಂಗ್ ರಾಂಧವಾ ಅವರನ್ನು ವಿವಾಹವಾದರು. ಆದಾಗ್ಯೂ, ಅವರು ಮದುವೆಯಾದ 13 ವರ್ಷಗಳ ನಂತರ ವಿಚ್ಛೇದನ ಪಡೆದರು.


 

Read more Photos on
click me!

Recommended Stories