ತಲೈವಾ ರಜನಿಕಾಂತ್ - ತಲಪತಿ ವಿಜಯ್: ಕಾಲಿವುಡ್‌ನ ಈ ಸೂಪರ್‌ಸ್ಟಾರ್ಸ್‌ ಸಂಭಾವನೆ ಎಷ್ಟು?

First Published | Mar 30, 2021, 6:43 PM IST

ಸಿನಿಮಾ ಇಂಡಸ್ಟ್ರಿಯಲ್ಲಿ ಅನೇಕ ನಟರು ತಮ್ಮ ಚಿತ್ರಗಳಿಗೆ ದೊಡ್ಡ ಮೊತ್ತದ ಸಂಭಾವನೆ ತೆಗೆದು ಕೊಳ್ಳುತ್ತಾರೆ. ಈ ಪಟ್ಟಿಯಲ್ಲಿ ಕಾಲಿವುಡ್‌ ನಟರು ಸಹ ಇದ್ದಾರೆ. ತಮಿಳು ಸೂಪರ್‌ಸ್ಟಾರ್ಸ್‌ ಒಂದು ಚಿತ್ರಕ್ಕೆ ಪಡೆಯುವ ಹಣ ಬಾಲಿವುಡ್‌ ಸ್ಟಾರ್ಸ್‌ಗಿಂತ ಕಡಿಮೆ ಇಲ್ಲ. ತಲೈವಾ ರಜನಿಕಾಂತ್ ನಿಂದ ಹಿಡಿದು ತಲಪತಿ ವಿಜಯ್ವರೆಗೆ ಯಾರಾರು ಎಷ್ಟು ಹಣ ಗಳಿಸುತ್ತಾರೆ ಎಂಬ ವಿವರ ಇಲ್ಲಿದೆ.

ತಮಿಳು ಸೂಪರ್‌ಸ್ಟಾರ್ಸ್‌ ಪ್ರತಿ ಸಿನಿಮಾಕ್ಕೆ ಪಡೆಯುವ ಸಂಭಾವನೆಯ ವಿವರ ಇಲ್ಲಿದೆ.
ರಜನಿಕಾಂತ್ :ರಜನಿಕಾಂತ್ ಕಾಲಿವುಡ್‌ನಲ್ಲಿ ತಲೈವಾ ರಜನಿಕಾಂತ್ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಚಿತ್ರವೊಂದಕ್ಕೆ 30 ಕೋಟಿ ರೂ ಸಂಭಾವನೆ ಪಡೆಯುತ್ತಾರೆ ಈ ಸೂಪರ್‌ಸ್ಟಾರ್‌.
Tap to resize

ವಿಜಯ್‌:ತಮಿಳಿನ ಸೂಪರ್‌ಸ್ಟಾರ್‌ ತಲಪತಿ ವಿಜಯ್ ಪ್ರತಿ ಚಿತ್ರಕ್ಕೆ 20 ಕೋಟಿ ಮೊತ್ತವನ್ನು ತೆಗೆದುಕೊಳ್ಳುತ್ತಾರೆ.
ಅಜಿತ್ ಕುಮಾರ್:ಸ್ಟಾರ್‌ ಅಜಿತ್ ಕುಮಾರ್ ಅವರ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿವೆ ಹಾಗೂ ಕಾಲಿವುಡ್‌ನಲ್ಲಿ ತುಂಬಾ ಫೇಮಸ್ ನಟ‌. ಅವರು ಚಿತ್ರಕ್ಕಾಗಿ ಸುಮಾರು 18 ಕೋಟಿ ಫೀಸ್‌ ಪಡೆಯುತ್ತಾರೆ.
ಸೂರ್ಯ:ಸೂರಾರೈ ಪೊಟ್ರು ಭಾರಿ ಯಶಸ್ಸನ್ನು ಗಳಿಸಿದ ನಂತರ, ಪ್ರತಿ ಚಿತ್ರಕ್ಕೆ 10-12 ಕೋಟಿ ರೂ ಪಡೆಯುತ್ತಾರೆ ನಟ ಸೂರ್ಯ.
ಧನುಷ್‌ :ಕಾಲಿವುಡ್‌ನಲ್ಲಿ ಐದನೇ ಅತಿ ಹೆಚ್ಚು ಸಂಭಾವನೆ ಪಡೆಯುವವರು ಪ್ಯಾನ್-ಇಂಡಿಯನ್ ನಟ ಧನುಷ್. ಇವರು ತಮಿಳು ಸಿನಿಮಾದ ಜೊತೆ ಬಾಲಿವುಡ್ ಮತ್ತು ಹಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಒಂದು ಚಿತ್ರಕ್ಕಾಗಿ 7-8 ಕೋಟಿ ರೂ ಹಣ ಪಡೆಯುತ್ತಾರೆ ಧನುಷ್‌.

Latest Videos

click me!