ಇತ್ತೀಚಿಗೆ ಪ್ರಿಯಾಂಕಾ ಡ್ರೂ ಬ್ಯಾರಿಮೋರ್ ಅವರ ಚಾಟ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ಅವರ ಜೀವನದ ಬಗ್ಗೆ ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
ಡ್ರೂ ಬ್ಯಾರಿಮೋರ್ ಅವರೊಂದಿಗೆ ಮಾತನಾಡುವಾಗ, ಪ್ರಿಯಾಂಕಾ ಚೋಪ್ರಾ ನಿಕ್ ಜೊನಸ್ ಅವರೊಂದಿಗೆ ಕೆಲಸ ಮಾಡುವುದು ಇಷ್ಟವಿಲ್ಲವೆಂಬುದನ್ನು ಬಹಿರಂಗಗೊಳಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅವರು ಬ್ಯಾರಿಮೋರ್ ಮೇಲೆ ಕ್ರಶ್ ಹೊಂದಿದ್ದರು ಎಂದು ಸಂದರ್ಶನದಲ್ಲಿ ಹೇಳಿದ್ದರು.
ಬ್ಯಾರಿಮೋರ್ ಪ್ರಸಿದ್ಧ ಬಾಲ ಕಲಾವಿದರಾಗಿದ್ದರು ಮತ್ತು ಬೆಳೆಯುತ್ತಿರುವಾಗ ಪರ್ಫೆಕ್ಟ್ ರೋಲ್ ಕಂಡುಕೊಳ್ಳಲು ಅವರು ಅನೇಕ ಸವಾಲುಗಳನ್ನು ಎದುರಿಸಿದರು
ಬ್ಯಾರಿಮೋರ್ ಮೇಲೆ ಕ್ರಶ್ ಬಗ್ಗೆಈಗ ಹೇಳಿದರೆ ಅದು ಶುಗರ್ ಕೊಟೇಡ್ ಮಾತು ಅನಿಸಬಹುದು, ಎಂದು ಕ್ವಾಂಟಿಕೋ ನಟಿ ಚಾಟ್ ಶೋನಲ್ಲಿ ಹೇಳಿದ್ದಾರೆ.
ನಟಿಯ ಬೆಳಿಗ್ಗೆ ಒಂದು ಕಪ್ ಕಾಫಿಯಿಂದ ಪ್ರಾರಂಭವಾಗುತ್ತದೆ ಮತ್ತು ತನ್ನ ಮಲಗುವ ಕೋಣೆಯಲ್ಲಿಯೇ ಎಸ್ಪ್ರೆಸೊ ಮಷಿನ್ ಹೊಂದಿದ್ದಾರೆ ಎಂದು ಬಹಿರಂಗಪಡಿಸಿದರು.
ಇತ್ತೀಚೆಗೆ ಅನ್ ಫಿನಿಷಡ್ ಎಂಬ ಆತ್ಮ ಚರಿತ್ರೆ ಬಿಡುಗಡೆ ಮಾಡಿದ ನಟಿ ಸುದ್ದಿಯಲ್ಲಿದ್ದರು.
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಅಮೆರಿಕದ ಗಾಯಕ, ನಟ ನಿಜ್ ಜೋನಾಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪತಿ ತಮ್ಮನ್ನು ಅವರ ಸ್ಪರ್ಧಿ ಎಂದು ಭಾವಿಸುವ ಸಾಧ್ಯತೆ ಇದೆ ಎನ್ನುವುದು ಪಿಗ್ಗಿ ಅಭಿಪ್ರಾಯ.
ಅವರು ತನ್ನ ಆತ್ಮಚರಿತ್ರೆ 'ಅನ್‌ಫಿನಿಷಡ್' ಬಗ್ಗೆ ಮಾತನಾಡಿದ್ದರು. ಆದರೆ ಅದು ಹಿಂದಿ ಭಾಷೆಯಲ್ಲಿ ಯಾವಾಗ ಹೊರಬರುತ್ತದೆ ಎಂಬುದರ ಬಗ್ಗೆ ಯಾವುದೇ ಸುಳಿವು ನೀಡಲಿಲ್ಲ .
ಚೋಪ್ರಾ ಕೊನೆಯ ಬಾರಿಗೆ ದಿ ವೈಟ್ ಟೈಗರ್‌ನಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಸಿಟಾಡೆಲ್ ಶೂಟಿಂಗ್‌ನಲ್ಲಿದ್ದಾರೆ.