ಹೋಳಿ ಹಬ್ಬ ಅಂದರೆ ಭಯ ಅಂತೆ ಕರಣ್‌ ಜೋಹರ್‌ಗೆ ಕಾರಣ ಇದಂತೆ!

First Published | Mar 30, 2021, 5:29 PM IST

ಹೋಳಿ ಹಬ್ಬ ಅಂದರೆ ಎಲ್ಲೆಡೆ  ಬಣ್ಣ, ಸೆಲೆಬ್ರೆಷನ್‌ ,ಮೋಜು, ಮಸ್ತಿ. ಬಾಲಿವುಡ್‌ನ ಸೆಲೆಬ್ರೆಟಿಗಳು ಈ ಹಬ್ಬವನ್ನು ಪ್ರತಿವರ್ಷ ಬಹಳ ಸಂಭ್ರಮದಿಂದ ಆಚರಿಸುವುದನ್ನು ನೋಡಿದ್ದೇವೆ. ಆದರೆ ಕೆಲವು ಸ್ಟಾರ್ಸ್‌ ಹೋಳಿ ಹಬ್ಬವನ್ನು ಅಚರಿಸುವುದೇ ಇಲ್ಲ. ಅವರಿಗೆ ಬಣ್ಣ ಅಂದರೆ ಆಗುವುದಿಲ್ಲ ಅಂದರೆ ಆಶ್ಚರ್ಯವಾಗುತ್ತದೆ ಅಲ್ವಾ? ಆದರೆ ಇದು ಸತ್ಯ. ಅದರಲ್ಲಿ ಬಾಲಿವುಡ್‌ನ ಫೇಮಸ್‌ ಫಿಲ್ಮ್‌ ಮೇಕರ್‌ ಕರಣ್‌ ಜೋಹರ್‌ ಒಬ್ಬರು. ಇನ್ಯಾರಾರು ಬಣ್ಣದ ಹಬ್ಬಕ್ಕೆ ನೋ ಹೇಳಿದ್ದಾರೆ ಗೊತ್ತಾ?

2018ರ 'ಇಂಡಿಯಾಸ್‌ ನೆಕ್ಸ್ಟ್ ಸೂಪರ್‌ಸ್ಟಾರ್' ರಿಯಾಲಿಟಿ ಶೋನಲ್ಲಿ ಕರಣ್ ಜೋಹರ್ ಹೋಳಿ ಹಬ್ಬಕ್ಕೆ ಹೆದರುತ್ತಾರೆ ಎಂಬ ವಿಷಯವನ್ನು ಬಹಿರಂಗ ಪಡಿಸಿದ್ದರು. 'ಅವರ 10 ವರ್ಷ ವಯಸ್ಗಿನಲ್ಲಿ ಅಮಿತಾಬ್ಮನೆಗೆ ಹೋಳಿ ಆಡಲು ಹೋಗಿದ್ದಾಗ ಅವರು ಹೋಳಿ ಮತ್ತು ಬಣ್ಣಗಳಿಗೆ ಹೆದರುವ ವಿಷಯ ತಿಳಿದ ಅಭಿಷೇಕ್ ಅವರನ್ನ ಎತ್ತಿಕೊಂಡು ಬಣ್ಣದ ನೀರಿನ ಕೊಳಕ್ಕೆ ಎಸೆದಿದ್ದರು. ಈ ಘಟನೆಯ ನಂತರ, ಅವರು ಹೋಳಿಗೆ ಮತ್ತಷ್ಟುಹೆದರುತ್ತಾರೆ ಮತ್ತು ಹೋಳಿ ಮೇಲಿನ ಪ್ರೀತಿ ಆ ದಿನವೇ ಕೊನೆಗೊಂಡಿತು. ಅಂದಿನಿಂದ ಹೋಳಿ ಆಡಲಿಲ್ಲ' ಎಂದು ಕರಣ್‌ ಹೇಳಿದ್ದರು.
ಕರೀನಾ ಕಪೂರ್ ಖಾನ್ ಅವರ ಅಜ್ಜ ರಾಜ್ ಕಪೂರ್ ಆರ್.ಕೆ. ಸ್ಟುಡಿಯೋದಲ್ಲಿ ಆಯೋಜಿಸುತ್ತಿದ್ದ ಹೋಳಿ ಪಾರ್ಟಿಯಲ್ಲಿ ಸೆಲೆಬ್ರೆಟಿಗಳು ಮತ್ತು ಫ್ಯಾಮಿಲಿ ಅವರು ಭಾಗವಹಿಸುತ್ತಿದ್ದರು. ಹೋಳಿ ಪಾರ್ಟಿಯ ಟ್ರೆಂಡ್‌ ಶುರು ಮಾಡಿದವರು ರಾಜ್ ಕಪೂರ್. ಆದರೆ ಅವರನಿಧನದ ನಂತರ, ಕಪೂರ್ ಕುಟುಂಬವು ಪಾರ್ಟಿ ಮಾಡುವುದನ್ನು ನಿಲ್ಲಿಸಿದೆ. ಹೋಳಿ ಬಣ್ಣಗಳು ದಾದಾಜಿಯೊಂದಿಗೆ ಹೋಗಿವೆ ಎಂದು ಕರೀನಾ ಹೇಳುತ್ತಾರೆ.
Tap to resize

2016ರಲ್ಲಿ ಸಂದರ್ಶನವೊಂದರಲ್ಲಿ, ಜಾನ್ ಅಬ್ರಹಾಂ ಹೋಳಿ ಆಚರಿಸುವುದಿಲ್ಲ ಎಂದು ಹೇಳಿದ್ದರು. 'ಜನರು ಹೋಳಿಯನ್ನು ದುರುಪಯೋಗಪಡಿಸಿಕೊಂಡು ಸದುದ್ದೇಶವನ್ನು ಹಾಳು ಮಾಡುತ್ತಾರೆ. ಆದ್ದರಿಂದ, ನಾನು ಅಂತಹ ಆಚರಣೆಗಳನ್ನು ಗೌರವಿಸುವುದಿಲ್ಲ. ಮರಗಳನ್ನು ಕತ್ತರಿಸಿವುದರಿಂದ ಪ್ರಕೃತಿ ನಾಶವಾಗುತ್ತಿದೆ. ಜನರು ಧರ್ಮದ ಹೆಸರಿನಲ್ಲಿ ಎಲ್ಲವನ್ನೂ ಹಾಳು ಮಾಡುತ್ತಿದ್ದಾರೆ. ಅದಕ್ಕಾಗಿಯೇ ನಾನು ಹೋಳಿ ಆಡುವುದಿಲ್ಲ' ಎಂದು ಹೇಳಿದ ಜಾನ್‌.
ತಾಪ್ಸಿ ಪನ್ನು ಅವರ ಪೋಷಕರು ಹೋಳಿ ಆಡುವುದಿಲ್ಲವಂತೆ. ಮನೆಯಲ್ಲಿ ಹೋಳಿ ಆಡದ ಕಾರಣ, ನಟಿ ತನ್ನ ಹೆತ್ತವರೊಂದಿಗೆ ಹೋಟೆಲ್‌ನಲ್ಲಿರುತ್ತಾರೆ ಎಂದು ಹೇಳಿದ್ದಾರೆ.
ಪದ್ಮಾವತ್‌ ಮತ್ತು ರಾಮ್‌ಲೀಲಾ ಸಿನಿಮಾದ ಪಾತ್ರದಲ್ಲಿ ಹೋಳಿ ಆಡುತ್ತಾ ಕಾಣಿಸಿಕೊಂಡಿರುವ ರಣವೀರ್ ಸಿಂಗ್‌ಗೆ, ನಿಜ ಜೀವನದಲ್ಲಿ ಹೋಳಿ ಅಂದರೆ ತುಂಬಾ ಭಯ. 'ಹೋಳಿಗಿಂತ ನಂತರದ ಕ್ಲೀನಿಂಗ್‌ ಬಗ್ಗೆ ಹೆಚ್ಚು ಚಿಂತೆ ಆಗುತ್ತದೆ. ಆದ್ದರಿಂದ ಹೋಳಿ ಆಡುವುದಿಲ್ಲ' ಎಂದು 2016 ರಲ್ಲಿ ಸಂದರ್ಶನವೊಂದರಲ್ಲಿ ರಣವೀರ್ ಹೇಳಿದ್ದರು.
ನಟಿ ಕೃತಿ ಸೆನನ್‌ ಹೋಳಿಯ ಬಣ್ಣಗಳಿಂದ ಯಾವಾಗಲೂ ದೂರವಿರಲು ಬಯಸುತ್ತಾರೆ. ಕೃತಿ ತಮ್ಮ ಹೋಮ್‌ಟೌನ್‌ ದೆಹಲಿಯಲ್ಲಿರುವಾಗ ಹೋಳಿ ಹಬ್ಬವನ್ನು ಸೆಲೆಬ್ರೆಟ್‌ ಮಾಡುತ್ತಿದ್ದರು. ಆದರೆ ಮುಂಬೈಗೆ ಬಂದ ನಂತರ ಇದರಿಂದ ದೂರ ಉಳಿದ್ದಿದ್ದಾರೆ. ಸ್ಕೀನ್‌ ಬಗ್ಗೆ ಕಾಳಜಿ ವಹಿಸುವ ಕಾರಣದಿಂದ ಅವರು ಬಣ್ಣಗಳಿಂದ ದೂರವಿರುತ್ತಾರಂತೆ.

Latest Videos

click me!