Dhanush property value: ಸೀತಾರಾಮಂ ನಟಿ ಮೃಣಾಲ್ ಠಾಕೂರ್ ಜೊತೆ ಹಸೆಮಣೆ ಏರಲಿದ್ದಾರೆಂಬ ಗಾಸಿಪ್ ಇರೋ ರಜನೀಕಾಂತ್ ಎಕ್ಸ್ ಅಳಿಯ ಧನುಷ್ 2 ದಶಕಗಳಿಂದ ತಮಿಳು, ಹಿಂದಿ, ಹಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 2026ರಲ್ಲಿ ಭಾರತದ ಪ್ರಭಾವಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಲಿದ್ದಾರೆ.
ರಜನಿಕಾಂತ್ ಅವರ ಮಾಜಿ ಅಳಿಯ ಧನುಷ್ ಅವರ ಸಂಪೂರ್ಣ ಆಸ್ತಿ ಬಗ್ಗೆ ತಿಳಿದರೆ ಎಲ್ಲರೂ ಬೆರಗಾಗುತ್ತೀರಿ. ಹಾಲಿವುಡ್, ಬಾಲಿವುಡ್ ಮತ್ತು ಪ್ಯಾನ್-ಇಂಡಿಯಾ ಸೇರಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚೆನ್ನೈನಲ್ಲಿ ಐಷಾರಾಮಿ ಬಂಗಲೆಯೂ ಇದೆ. ಸರಳವಾಗಿ ಕಾಣುವ ಧನುಷ್‌ಗೆ ದುಬಾರಿ ಕಾರುಗಳ ಹುಚ್ಚಿದೆ.
28
ಆದಾಯವೆಷ್ಟು?
ಧನುಷ್ ನಿವ್ವಳ ಮೌಲ್ಯ ಸುಮಾರು ₹230 ಕೋಟಿ. ವಾರ್ಷಿಕ ಆದಾಯ ₹35-₹45 ಕೋಟಿ. ಪ್ರತಿ ಚಿತ್ರಕ್ಕೆ ₹20-₹35 ಕೋಟಿ ಚಾರ್ಜ್ ಮಾಡುತ್ತಾರೆ. ಹಾಲಿವುಡ್‌ನ 'ದಿ ಗ್ರೇ ಮ್ಯಾನ್' ಚಿತ್ರಕ್ಕೆ ₹4 ಕೋಟಿ ಪಡೆದಿದ್ದಾರೆ.
38
ಬಂಗಲೆ, ಆಸ್ತಿ
2023ರಲ್ಲಿ, ಧನುಷ್ ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿರುವ ಸುಂದರವಾದ ವಿಲ್ಲಾಗೆ ಶಿಫ್ಟ್ ಆದರು. ಈ ಆಸ್ತಿ ಮೌಲ್ಯ ಸುಮಾರು ₹150 ಕೋಟಿ. ಇದು ಅವರ ಮಾಜಿ ಮಾವ ರಜನಿಕಾಂತ್ ಅವರ ಮನೆ ಹತ್ತಿರದಲ್ಲಿದೆ. ಚೆನ್ನೈನ ಆಳ್ವಾರಪೇಟೆಯಲ್ಲೂ ಒಂದು ಆಸ್ತಿ ಇದೆ.
ನಟಿ ಮೃಣಾಲ್ ಠಾಕೂರ್, ಧನುಷ್ ಜೊತೆ ಮದುವೆಗೆ ಪ್ಲಾನ್ ಮಾಡುತ್ತಿದ್ದಾರಂತೆ. ಅಧಿಕೃತವಾಗಿ ಇದಿನ್ನೂ ಅನೌನ್ಸ್ ಆಗಿಲ್ಲ. ಆದರೆ, 2026ರ ಫೆಬ್ರವರಿ 14ರಂದು ಈ ಜೋಡಿ ಹಸೆಮಣೆ ಏರಲಿದೆ ಎನ್ನಲಾಗುತ್ತಿದೆ.
58
ದುಬಾರಿ ಕಾರೆಂದರೆ ಅಚ್ಚುಮೆಚ್ಚು
ಧನುಷ್ ಬಳಿ ರೋಲ್ಸ್ ರಾಯ್ಸ್ ಘೋಸ್ಟ್ (₹7 ಕೋಟಿ), ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ (₹3.4 ಕೋಟಿ), ಜಾಗ್ವಾರ್ XE (₹45 ಲಕ್ಷ), ಫೋರ್ಡ್ ಮುಸ್ತಾಂಗ್ GT (₹75 ಲಕ್ಷ) ಸೇರಿ ಹಲವು ದುಬಾರಿ ಕಾರುಗಳಿವೆ. ಈ ಹಿಂದೆ ಆಡಿ A8 ಮತ್ತು ರೇಂಜ್ ರೋವರ್ ಸ್ಪೋರ್ಟ್ HSE ಹೊಂದಿದ್ದರು.
68
ಬ್ಯುಸಿನೆಸ್
ಧನುಷ್ ವಂಡರ್‌ಬಾರ್ ಫಿಲ್ಮ್ಸ್ ಎನ್ನುವ ಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇದು 'ಕಾಕ ಮುಟ್ಟೈ' ಮತ್ತು 'ವಿಚಾರಣೈ' ಸೇರಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಮತ್ತು ಆರ್ಥಿಕವಾಗಿ ಯಶಸ್ವಿಯಾದ ಹಲವು ಚಲನಚಿತ್ರಗಳನ್ನು ನಿರ್ಮಿಸಿದೆ.
78
ಶಿಕ್ಷಣ, ವೃತ್ತಿ ಜೀವನ
ನಿಜವಾದ ಹೆಸರು: ವೆಂಕಟೇಶ್ ಪ್ರಭು ಕಸ್ತೂರಿ ರಾಜ. ಅವರು ಸಾಲಿಗ್ರಾಮಂನ ಥಾಯ್ ಸತ್ಯ ಮೆಟ್ರಿಕ್ಯುಲೇಷನ್ ಹೈಸ್ಕೂಲ್‌ನಲ್ಲಿ ಓದಿದ್ದಾರೆ. 19ನೇ ವಯಸ್ಸಿನಲ್ಲಿ, ಚಿತ್ರರಂಗದಲ್ಲಿ ವೃತ್ತಿಜೀವನವ ಆರಂಭಿಸಲು ತಮ್ಮ ವಿದ್ಯಾಭ್ಯಾಸ ನಿಲ್ಲಿಸಿದರು.
88
ಬ್ರ್ಯಾಂಡ್ಸ್
7Up, Tata Sky, OLX, ಮತ್ತು ಸೆಂಟರ್ ಫ್ರೆಶ್‌ನಂತಹ ಬ್ರ್ಯಾಂಡ್‌ಗಳನ್ನು ಅನುಮೋದಿಸಿದ್ದಾರೆ. ಪ್ರತಿ ಜಾಹೀರಾತಿಗೆ ₹3 ಕೋಟಿಗೂ ಹೆಚ್ಚು ಶುಲ್ಕ ವಿಧಿಸುತ್ತಾರೆ. ಅವರು ನಟ, ನಿರ್ದೇಶಕ (ಪಾ ಪಾಂಡಿ, ರಾಯನ್), ಹಿನ್ನೆಲೆ ಗಾಯಕ (ವೈ ದಿಸ್ ಕೊಲವೆರಿ ಡಿ) ಮತ್ತು ಗೀತರಚನೆಕಾರ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.