ಟಾಲಿವುಡ್ ಮಿಲ್ಕ್ ಬ್ಯೂಟಿ ತಮನ್ನಾ ಎರಡು ವಿಚಾರಗಳಿಗೆ ಸಖತ್ ಸುದ್ದಿಯಲ್ಲಿದ್ದಾರೆ. ಒಂದು ಜೈಲರ್ ಸಿನಿಮಾ ಮತ್ತೊಂದು ಬಾಯ್‌ಫ್ರೆಂಡ್ ವಿಜಯ್ ವರ್ಮಾ.
ಆಗಸ್ಟ್ 10ರಂದು ಜೈಲರ್ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಸೂಪರ್ ಹಿಟ್, ತಮನ್ನಾ ಡ್ಯಾನ್ಸ್ ಮಸ್ತ್ ಎನ್ನುತ್ತಾರೆ ಸಿನಿ ರಸಿಕರು.
ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಬಾಂದ್ರದಲ್ಲಿರುವ ಫ್ಯಾಷನ್ ಡಿಸೈನರ್ ಒಬ್ಬರ ಅಂಗಡಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಅಂಗಡಿಗೆ ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೊಂಚ ಗ್ಲಾಮರ್ ಹೆಚ್ಚಿಸಲು ಫ್ಲಾಟ್ ಚಪ್ಪಲಿ ಧರಿಸಿದ್ದಾರೆ.
ಹೌದು! ತಮನ್ನಾ ಧರಿಸಿರುವ ಕೆಂಪು ಬಣ್ಣದ ಚಪ್ಪಲಿ birkenstock ಬ್ರ್ಯಾಂಡ್ ಎನ್ನಲಾಗಿದೆ. ಹಾಗೂ ಇದರ ಬೆಲೆ ಬರೋಬ್ಬರಿ 11, 500 ರೂಪಾಯಿ.
ಇನ್ನು ತಮನ್ನಾ ಕೈಯಲ್ಲಿರುವ ಬ್ಯಾಗ್, ಕೂಲಿಂಗ್ ಗ್ಲಾಸ್, ಟೀ ಶರ್ಟ್ ಹೀಗೆ ಎಲ್ಲಾ ಲೆಕ್ಕ ಮಾಡಿದರೆ ಸುಮ್ಮನೆ ಹೊರ ಬಂದು ಹೋಗುವುದಕ್ಕೆ ಕನಿಷ್ಠ 1 ಲಕ್ಷ ಬೆಲೆಯ ಲುಕ್ ಆಯ್ಕೆ ಮಾಡಿಕೊಳ್ಳುತ್ತಾರೆ.