Kareena Kapoor Son Taimur : ಮಗನ ಥ್ರೋಬ್ಯಾಕ್‌ ವಿಡಿಯೋ ಶೇರ್‌ ಮಾಡಿದ ಕರೀನಾ!

Published : Dec 20, 2021, 09:23 PM IST

ಕರೀನಾ ಕಪೂರ್ (Kareena Kapoor) ಮತ್ತು ಸೈಫ್ ಅಲಿ ಖಾನ್ (Saif Ali Khan) ಅವರ ಮಗ ತೈಮೂರ್ ಅಲಿ ಖಾನ್ (Taimur Ali Khan) 5 ವರ್ಷಕ್ಕೆ ಕಾಲಿಟ್ಟಿದ್ದಾನೆ. ಡಿಸೆಂಬರ್ 20, 2016 ರಂದು ಮುಂಬೈನಲ್ಲಿ ಜನಿಸಿದ ತೈಮೂರ್  ಯಾವಾಗಲೂ  ಲೈಮ್‌ಲೈಟ್‌ನಲ್ಲಿದ್ದಾನೆ. ಇಷ್ಟೇ ಅಲ್ಲ, ಅವನು  ಅತ್ಯಂತ ನೆಚ್ಚಿನ ಸ್ಟಾರ್ ಕಿಡ್‌ಗಳಲ್ಲಿ ಒಬ್ಬ, ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳವರೆಗೆ ತೈಮೂರ್  ಅಚ್ಚು ಮೆಚ್ಚು. ಮಗನ ಜನ್ಮದಿನ(Birthday) ಕರೀನಾ ಕ್ಯೂಟ್‌ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದಾರೆ.  

PREV
17
Kareena Kapoor Son Taimur  : ಮಗನ ಥ್ರೋಬ್ಯಾಕ್‌ ವಿಡಿಯೋ ಶೇರ್‌ ಮಾಡಿದ ಕರೀನಾ!

ಕರೀನಾ ಕಪೂರ್ ಸೈಫ್ ಅಲಿ ಖಾನ್ ಅವರ ಮೊದಲ ಮಗ ತೈಮೂರ್ ಇಂದು ಐದನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಕರೀನಾ ತನ್ನ ಮಗನ ಥ್ರೋಬ್ಯಾಕ್ ಕ್ಲಿಪ್ ಅನ್ನು Instagram ಹ್ಯಾಂಡಲ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಲ್ಲಿ  ಪುಟ್ಟ ತೈಮೂರ್ ತನ್ನ ಮೊದಲ ಹೆಜ್ಜೆಗಳನ್ನು ಇಡುವುದನ್ನು ಕಾಣಬಹುದು. ಕರೀನಾ ತೈಮೂರ್‌ಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. 


 

27

ಕರೀನಾ ಅವರ Instagram ಪೇಜ್‌  ನಲ್ಲಿಒ ವೀಡಿಯೊವನ್ನು ನೋಡಬಹುದು. ತೈಮೂರ್‌ನ ಮೊದಲ ಹೆಜ್ಜೆಗಳು, ಅವನ ಮೊದಲು ಬಿದ್ದೇಳುತ್ತಿರುವುದನ್ನು ಕರೀನಾ ಅವರು ಬಹಳ ಹೆಮ್ಮೆಯಿಂದ ದಾಖಲಿಸಿದ್ದಾರೆ. 
 

37

'ಇದು ಅವನ ಮೊದಲ ಅಥವಾ ಕೊನೆಯ ಬೀಳು ಅಲ್ಲ ಆದರೆ ತೈಮೂರ್ ಯಾವಾಗಲೂ ತಾನೇ ಎದ್ದು ನಿಲ್ಲುತ್ತಾನೆ  ದೊಡ್ಡ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಾನೆ ಮತ್ತು ತಲೆಯೆತ್ತಿ ನಡೆಯುತ್ತಾನೆ... ಏಕೆಂದರೆ ಅವನು ತನ್ನ ತಾಯಿಯ ನೆಚ್ಚಿನ ಮಗ. "ಹುಟ್ಟುಹಬ್ಬದ ಶುಭಾಶಯಗಳು ನನ್ನ ಹೃದಯ ಬಡಿತ.ನನ್ನ ಟಿಮ್ ಟಿಮ್ ನಿನ್ನಂತೆ ಯಾರೂ ಇಲ್ಲ ನನ್ನ ಮಗನೆ #HappyBirthdayTimTim #MeraBeta #MyTiger'ಎಂದು ಕರೀನಾ ವಿಡಿಯೋಗೆ ಕ್ಯಾಪ್ಷನ್‌ ನೀಡಿದ್ದಾರೆ.

47

ತೈಮೂರ್‌ನ ಅತ್ತೆ ಸಬಾ ಅಲಿ ಖಾನ್ ಸಹ ತೈಮೂರ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ. ಅವರು ತೈಮೂರ್ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ ಮತ್ತು 'ನನ್ನ ಪ್ರಿಯ ಟಿಮ್ ನಿನಗೆ  ಜಗತ್ತನ್ನು ಹಾರೈಸುತ್ತೇನೆ. ಸಂತೋಷವಾಗಿರು  ಮತ್ತು ಯಾವಾಗಲೂ ತುಂಟತನ  ಮತ್ತು ಮಸ್ತಿಯಿಂದ ತುಂಬಿರಲಿ! ಲವ್ ಯು ಲಾಟ್ಸ್! ಬುವಾ ಜಾನ್" ಎಂದು ಬರೆದಿದ್ದಾರೆ.

57

ಈ ತಿಂಗಳ ಆರಂಭದಲ್ಲಿ, ಕರೀನಾ ತನ್ನ ಮಗ ಜೋಕಾಲಿ ಮೇಲೆ ಖುಷಿಯಿಂದ ಸಮಯ ಕಳೆಯುತ್ತಿರುವ ಕ್ಯೂಟ್‌  ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದರು. ಅವನು ತನ್ನಮೂಡ್‌ ಸ್ವಿಂಗ್‌ ಅನ್ನು ಸರಿಪಡಿಸುತ್ತಾನೆ ಎಂದು  ವಿಡಿಯೋ ಜೊತೆ ಅವರು ಬರೆದಿದ್ದರು. 

67

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಸೈಫ್ ಅಲಿ ಖಾನ್ ಕಮೆಂಟ್ ಮಾಡಿದ್ದರು. ಲಾಕ್ ಡೌನ್ ಬಗ್ಗೆ ಅಭಿಪ್ರಾಯ ಏನು? ಲಾಕ್ ಡೌನ್ ನಲ್ಲಿ ಏನು ಮಾಡಿದ್ರಿ? ಎಂದು ಕೇಳಿದಾಗ ಮತ್ತೆ ಲಾಕ್ ಡೌನ್ ಆದರೆ ಮನೆಯಲ್ಲಿ ಮಕ್ಕಳ ಸಂಖ್ಯೆ ಜಾಸ್ತಿಯಾಗಬಹುದು ಎಂದು ಚಟಾಕಿ ಹಾರಿಸಿದ್ದರು. 

77

ಕರೀನಾ ಕಪೂರ್  ಸೈಫ್ ಅವರನ್ನು ವಿವಾಹ ಸಹ ದೊಡ್ಡ ಸುದ್ದಿಯಾಗಿತ್ತು.  ತೈಮೂರ್ 2016 ರಲ್ಲಿ ಜನಿಸಿದ್ದರೆ ಕರೀನಾ ಅವರು ಫೆಬ್ರವರಿ 21, 2021 ರಂದು  ತಮ್ಮ  ಎರಡನೇ ಮಗನಿಗೆ ಜನ್ಮ ನೀಡಿದ್ದರು.
 

Read more Photos on
click me!

Recommended Stories