Gehraiyaan Teaser : ದೀಪಿಕಾ ಕಿಸ್‌ ವೈರಲ್‌, ನಟಿಯ ಬಿಕಿನಿ ಲುಕ್‌ಗೆ ಫ್ಯಾನ್ಸ್ ಫಿದಾ!

First Published | Dec 20, 2021, 8:42 PM IST

ದೀಪಿಕಾ ಪಡುಕೋಣೆ (Deepika Padukone) ಅನನ್ಯಾ ಪಾಂಡೆ (Ananya Panday) ಮತ್ತು ಸಿದ್ಧಾಂತ್ ಚತುರ್ವೇದಿ ( Siddhant Chaturvedi)  ಅಭಿನಯದ ಗೆಹ್ರಾಯಿಯಾ (Gehraiyaan) ಚಿತ್ರದ ಟೀಸರ್ ಸೋಮವಾರ ಬಿಡುಗಡೆಯಾಗಿದೆ. ಚಿತ್ರವನ್ನು ಶಕುನ್ ಬಾತ್ರಾ (Shakun Batra) ನಿರ್ದೇಶಿಸಿದ್ದಾರೆ ಮತ್ತು ಚಿತ್ರವು ಜನವರಿ 25  ರಂದುಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಟೀಸರ್ ನೋಡಿದರೆ ಈ ಸಿನಿಮಾ ತ್ರಿಕೋನ ಪ್ರೇಮಕತೆಯನ್ನು ಆಧರಿಸಿದೆ ಕಾಣುತ್ತದೆ.  ಹೊರಬಿದ್ದಿರುವ ಟೀಸರ್ ನಲ್ಲಿ ದೀಪಿಕಾ-ಸಿದ್ಧಾಂತ್ ರ ರೊಮ್ಯಾಂಟಿಕ್ ದೃಶ್ಯಗಳು ಕಂಡು ಬರುತ್ತಿವೆ. ಸಮುದ್ರತೀರದಲ್ಲಿ ಕುಳಿತು ಇಬ್ಬರೂ ಪರಸ್ಪರ ಚುಂಬಿಸುತ್ತಿರುವ ದೃಶ್ಯ ವೈರಲ್ ಆಗುತ್ತಿದೆ.

ದೀಪಿಕಾ ಪಡುಕೋಣೆ ಮತ್ತು ಸಿದ್ಧಾಂತ್ ಚತುರ್ವೇದಿ ಅಭಿನಯದ ಗೆಹ್ರಾಯಿಯಾ  ಸಿನಿಮಾದ ಟೀಸರ್ ಸೋಮವಾರ ಬಿಡುಗಡೆಯಾಗಿದೆ. ಈ ಚಿತ್ರವನ್ನು ಶಕುನ್ ಬಾತ್ರಾ ನಿರ್ದೇಶಿಸಿದ್ದಾರೆ ಮತ್ತು ಜನವರಿ 25 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.

ದೀಪಿಕಾ ಮತ್ತು ಸಿದ್ಧಾಂತ್ ಅವರ ಅದ್ಭುತ ಕೆಮಿಸ್ಟ್ರಿಗೆ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ.  ಕೆಲವು ಅಭಿಮಾನಿಗಳು ದೀಪಿಕಾ ಅವರ ಬಿಕಿನಿ ಲುಕ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು 9 ವರ್ಷಗಳ ನಂತರ ದೀಪಿಕಾ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.

Tap to resize

ದೀಪಿಕಾ ಅವರು  ಕೊನೆಯದಾಗಿ ಛಪಾಕ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ದೀಪಿಕಾ ತಮ್ಮ ಚಿತ್ರದ ಟೀಸರ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.  ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳು ಕೂಡ ಕಮೆಂಟ್ ಮಾಡುತ್ತಿದ್ದಾರೆ

 ದೀಪಿಕಾ ಪಡುಕೋಣೆ ಟೀಸರ್ ಶೇರ್ ಮಾಡಿ ನನ್ನ ಹೃದಯದ ತುಣುಕು ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಸಿನಿಮಾದಲ್ಲಿ  ಇಬ್ಬರು ಜೋಡಿಗಳಾದ ದೀಪಿಕಾ ಮತ್ತು  ಧೈರ್ಯ ಕರ್ವಾ, ಅನನ್ಯ ಪಾಂಡೆ ಮತ್ತು ಸಿದ್ಧಾಂತ್ ಚತುರ್ವೇದಿ, ತಮ್ಮ ಕಾಂಪ್ಲೆಕ್ಸ್ ರಿಲೆಷನ್‌ಶಿಪ್‌ ಜೊತೆ ಡೀಲ್‌ ಮಾಡುತ್ತಾರೆ. 

Deepika Padukone

ನಾಸಿರುದ್ದೀನ್ ಶಾ ಮತ್ತು ರಜತ್ ಕಪೂರ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು  ವಯಾಕಾಮ್ 18 ಸ್ಟುಡಿಯೋಸ್  ಈ ಚಿತ್ರವನ್ನು ನಿರ್ಮಿಸಿದೆ. 2012 ರಲ್ಲಿ ಏಕ್ ಮೈನ್ ಔರ್ ಏಕ್ ತು ಮತ್ತು 2016 ರಲ್ಲಿ ಕಪೂರ್ ಅಂಡ್‌  ಸನ್ಸ್ ನಂತರ ಗೆಹ್ರಾಯಿಯಾ  ಶಕುನ್ ಅವರ ಮೂರನೇ ಚಲನಚಿತ್ರವಾಗಿದೆ.  

Deepika Padukone

ಸಿನಿಮಾದ  ಕ್ಲಿಪ್‌ ಶೇರ್‌ ಮಾಡಿಕೊಂಡಿರುವ  ಕರಣ್ ಜೋಹರ್  ಗೆಹ್ರೈಯನ್ ಆಧುನಿಕ ಸಂಬಂಧಗಳ ಆಳವಾದ, ನೈಜ ಮತ್ತು ಪ್ರಾಮಾಣಿಕ ಅವಲೋಕನವಾಗಿದೆ. ಶಕುನ್ ಮಾನವನ ಭಾವನೆಗಳ ಸಂಕೀರ್ಣತೆಯನ್ನು ತೋರಿಸಲು ಪ್ರಯತ್ನಿಸಿದ್ದಾರೆ. ಅವರ ಶ್ರಮ ಮತ್ತು ತಾರೆಯರ ಪ್ರಾಮಾಣಿಕ ಅಭಿನಯ ಚಿತ್ರದ ಕಥೆಯನ್ನು ಅದ್ಭುತವಾಗಿಸಿದೆ ಎಂದು ಬರೆದುಕೊಂಡಿದ್ದಾರೆ.

'ಗೆಹ್ರಾಯಿಯಾ ನನಗೆ ಕೇವಲ ಸಿನಿಮಾವಲ್ಲ, ಇದು ಮಾನವ ಸಂಬಂಧಗಳ ಜಟಿಲತೆಗಳ ಪಯಣವಾಗಿದೆ, ಇದು ಆಧುನಿಕ ವಯಸ್ಕ ಸಂಬಂಧಗಳ ಕನ್ನಡಿಯಾಗಿದೆ. ನಾವು ಭಾವನೆಗಳು ಮತ್ತು ಭಾವನೆಗಳ ಜಟಿಲ ಮೂಲಕ ಹೇಗೆ ಹೋಗುತ್ತೇವೆ ಮತ್ತು ನಮ್ಮ ಪ್ರತಿಯೊಂದು ಹೆಜ್ಜೆ, ನಿರ್ಧಾರವು ನಮ್ಮ ಸುತ್ತಲಿರುವವರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಲಾಗುತ್ತದೆ' ಎಂದು ನಿರ್ದೇಶಕ ಶಕುನ್ ಬಾತ್ರಾ ಹೇಳಿದ್ದಾರೆ.

Latest Videos

click me!