ಉಗಾಂಡಾದಲ್ಲಿ ಮಾಮ್ತಾಜ್‌ ಬರ್ತ್‌ಡೇ: ಬೆಂಜ್ ಕಾರು, ಆಭರಣ ಗಿಫ್ಟ್‌ ಕೊಟ್ಟ ಪತಿ

Published : Aug 01, 2022, 05:39 PM IST

ಬಾಲಿವಡ್‌ ಹಿರಿಯ ನಟಿ ಮುಮ್ತಾಜ್ ( Mumtaz)ಇಂದು ತಮ್ಮ 75 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಉದ್ಯಮಿ ಪತಿ ಮಯೂರ್ ಮಾಧ್ವನಿ ಅವರು ಉಗಾಂಡಾದಲ್ಲಿ ತಮ್ಮ ಪುತ್ರಿಯರಾದ ತಾನ್ಯಾ ಮತ್ತು ನತಾಶಾ ಮತ್ತು ಅವರೊಂದಿಗೆ ಮಮ್ತಾಜ್ ಬರ್ತ್‌ಡೇಗಾಗಿ ಲಂಚ್‌ ಆಯೋಜಿಸಿದ್ದರು. ಮುಮ್ತಾಜ್ ತಮ್ಮ ಹುಟ್ಟುಹಬ್ಬದ ಉಡುಗೊರೆಯಾಗಿ ಕೆಲವು ಆಭರಣಗಳು ಮತ್ತು ಮರ್ಸಿಡಿಸ್ ಅನ್ನು ಪಡೆದಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. 

PREV
16
ಉಗಾಂಡಾದಲ್ಲಿ  ಮಾಮ್ತಾಜ್‌ ಬರ್ತ್‌ಡೇ: ಬೆಂಜ್ ಕಾರು, ಆಭರಣ ಗಿಫ್ಟ್‌ ಕೊಟ್ಟ ಪತಿ

ಮುಮ್ತಾಜ್ 60 ಮತ್ತು 70 ರ ದಶಕದ ಅತ್ಯಂತ ಯಶಸ್ವಿ ನಟರಲ್ಲಿ ಒಬ್ಬರು. ದೋ ರಾಸ್ತೆ (1969), ಬಂಧನ್ (1969), ಆದ್ಮಿ ಔರ್ ಇನ್ಸಾನ್ (1969), ಸಚಾ ಜುಥಾ (1970), ಖಿಲೋನಾ (1970), ತೇರೆ ಮೇರೆ ಸಪ್ನೆ (1971), ಹರೇ ರಾಮ ಹರೇ ಕೃಷ್ಣ (1971)  ಅಪ್ನಾ ದೇಶ್ (1972), ಲೋಫರ್ (1973), ಜೀಲ್ ಕೆ ಉಸ್ ಪಾರ್ (1973), ಚೋರ್ ಮಚಾಯೆ ಶೋರ್ (1974), ಆಪ್ ಕಿ ಕಸಮ್ (1974), ರೋಟಿ (1974), ಪ್ರೇಮ್ ಕಹಾನಿ (1975) ಮತ್ತು ನಾಗಿನ್ (1976) ನಂತಹ ಹಲವಾರು  ಚಿತ್ರಗಳಿಗೆ ಅವರು ಹೆಸರುವಾಸಿಯಾಗಿದ್ದಾರೆ.


 

26

ತನ್ನ ಹುಟ್ಟುಹಬ್ಬದ ಆಚರಣೆ ಕುರಿತು ಮಾತನಾಡುತ್ತಾ, ಮುಮ್ತಾಜ್ ತಮ್ಮ ಇಡೀ ಕುಟುಂಬವು ಹೇಗೆ ತನ್ನೊಂದಿಗೆ ಸೇರಿಕೊಂಡಿದೆ ಎಂಬುದರ ಕುರಿತು ETimesಗೆ ತಿಳಿಸಿದರು. ಈ ಸಂದರ್ಭದಲ್ಲಿ ಪತಿ ತನಗೆ ಏನು ಉಡುಗೊರೆ ನೀಡಿದ್ದಾರೆ ಎಂದು ಸಹ ಬಹಿರಂಗಪಡಿಸಿದ್ದಾರೆ,

36

 'ಅವರು ನನಗೆ ಜೀವನದಲ್ಲಿ ಎಲ್ಲವನ್ನೂ ನೀಡಿದ್ದಾರೆ. ಆದರೆ ಇಂದಿನ ಹುಟ್ಟುಹಬ್ಬದ ಬಗ್ಗೆ ಕೇಳುತ್ತಿದ್ದರೆ, ಅವರು ನನಗೆ ಮರ್ಸಿಡಿಸ್‌ ಲೇಟೆಸ್ಟ್‌ ಮಾಡೆಲ್‌ ಜೊತೆಗೆ, ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಹಿಂದಿ ಚಲನಚಿತ್ರೋದ್ಯಮದಲ್ಲಿದ್ದಾಗ ತನ್ನ ಹುಟ್ಟುಹಬ್ಬವನ್ನು ಆಚರಿಸಲು ತಾನು ತುಂಬಾ ಬ್ಯುಸಿಯಾಗಿದ್ದೆ ಎಂದು ಮುಮ್ತಾಜ್ ನೆನಪಿಸಿಕೊಂಡರು. 
 

46

ಚಿತ್ರ ಸೆಟ್‌ಗಳಲ್ಲಿ ಹುಟ್ಟುಹಬ್ಬವನ್ನು ಆಚರಿಸುವ ಬಗ್ಗೆ ಹಂಚಿಕೊಂಡ ಅವರು, 'ಪ್ರತಿ ಬಾರಿ ಕೇಕ್ ಅನ್ನು ತರಿಸಲಾಗುತ್ತಿತ್ತು. ಎಲ್ಲರೂ ಹುರಿದುಂಬಿಸಿದರು. ಆದರೆ ನನ್ನ ಇಡೀ ವೃತ್ತಿ ಜೀವನದಲ್ಲಿ ನಾನು ತುಂಬಾ ಬ್ಯುಸಿಯಾಗಿದ್ದೆ,  ಆಚರಣೆಗಳನ್ನು ಮರೆತುಬಿಡಿ, ಬಿಡುಗಡೆಯಾದ ನನ್ನ ಕೆಲವು ಚಲನಚಿತ್ರಗಳನ್ನು ನೋಡಲೂ ನನಗೆ ಸಮಯ ಸಿಗಲಿಲ್ಲ' ಎಂದಿದ್ದಾರೆ.

56

ತನಗೆ 75 ವರ್ಷ ಎಂದು ಒಪ್ಪಿಕೊಳ್ಳಲು ನಟಿ ತಯಾರಿಲ್ಲ ಇನ್ನೂ 18 ವರ್ಷ ಎಂದು ಭಾವಿಸುತ್ತಾರೆ. 'ನಾನು ಇನ್ನೂ ನೃತ್ಯ ಮಾಡುತ್ತೇನೆ. ನಾನು ಇನ್ನೂ ಪ್ರತಿದಿನ ಸುಮಾರು 90 ನಿಮಿಷಗಳ ಕಾಲ ವ್ಯಾಯಾಮ ಮಾಡುತ್ತೇನೆ' ಎಂದು ಅವರು ಹೇಳಿದರು.

66

ಮುಮ್ತಾಜ್ ತನ್ನ ಚಲನಚಿತ್ರ ಸ್ನೇಹಿತರೊಂದಿಗೆ ಸಮಯ ಕಳೆಯಲು  ಭಾರತಕ್ಕೆ ಭೇಟಿ ನೀಡುತ್ತಾರೆ. ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಶತ್ರುಘ್ನ ಸಿನ್ಹಾ ಮತ್ತು ಅವರ ಕುಟುಂಬಕ್ಕೆ ಅವರ ಮನೆಗೆ ಅನಿರೀಕ್ಷಿತ ಭೇಟಿ ನೀಡಿದರು. ಅವರು ಈಗ ಸಂಜಯ್ ಲೀಲಾ ಬನ್ಸಾಲಿ ವೆಬ್ ಸರಣಿಯಲ್ಲಿ ಹೀರಾಮಂಡಿ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Read more Photos on
click me!

Recommended Stories