Sushmita Sen Confirms Breakup: ಸುಶ್ಮಿತಾಳ ಜೊತೆ ಬ್ರೇಕಪ್ ಮಾಡಿದ 15 ವರ್ಷ ಕಿರಿಯ ಬಾಯ್‌ಫ್ರೆಂಡ್

Published : Dec 23, 2021, 08:23 PM ISTUpdated : Dec 23, 2021, 08:29 PM IST

ಸುಶ್ಮಿತಾ ಸೇನ್ (Sushmita Sen)  ತನಗಿಂತ 15 ವರ್ಷ ಕಿರಿಯ ಬಾಯ್‌ಫ್ರೆಂಡ್‌  ರೋಹ್ಮನ್ ಶಾಲ್ (Rohman Shawl) ಜೊತೆ ಕಳೆದ ಹಲವು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ. ಇಬ್ಬರೂ ಆಗಾಗ್ಗೆ ಪರಸ್ಪರ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ರೋಹ್ಮನ್ ಸುಶ್ಮಿತಾ ಅವರ ಮನೆಯಲ್ಲಿಯೇ ಇದ್ದರು. ಹಲವು ಬಾರಿ ಅವರ ಮದುವೆಯ ಸುದ್ದಿ ಮಾಧ್ಯಮಗಳಲ್ಲಿ ಬಂದಿತ್ತು. ಆದರೆ ಈಗ ಇಬ್ಬರೂ ತಮ್ಮ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ರೋಹ್ಮನ್ ಶಾಲ್ ಈಗ ಸುಶ್ಮಿತಾ ಸೇನ್ ಅವರ ಮನೆಯನ್ನು ತೊರೆದು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ.ಇಲ್ಲಿದೆ ಪೂರ್ತಿ ವಿವರ.  

PREV
110
Sushmita Sen Confirms Breakup: ಸುಶ್ಮಿತಾಳ ಜೊತೆ ಬ್ರೇಕಪ್ ಮಾಡಿದ 15 ವರ್ಷ ಕಿರಿಯ ಬಾಯ್‌ಫ್ರೆಂಡ್

ಈ ದಿನಗಳಲ್ಲಿ ಸುಶ್ಮಿತಾ ಸೇನ್ ಮತ್ತು ಅವರ ಬಾಯ್‌ ಫ್ರೆಂಡ್‌  ರೋಹ್ಮನ್ ಶಾಲ್ ಇಬ್ಬರ ನಡುವೆ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ ಎಂದು ವರದಿಗಳು ಬಂದವು. ಆದರೆ ಈಗ ಈ ಜೋಡಿ ಬ್ರೇಕಪ್‌ ಆಗಿದ್ದಾರೆ ಎಂಬ ಸುದ್ದಿ ಬರುತ್ತಿದೆ. 

210

2021 ರ ಆರಂಭದಲ್ಲಿ, ಸುಶ್ಮಿತಾ ಸೇನ್ ಅವರು ಪೋಸ್ಟ್ ಅನ್ನು ಹಂಚಿಕೊಂಡಿದ್ದರು ಮತ್ತು ಅದರಲ್ಲಿ ಒಬ್ಬರು ನಿಷ್ಕ್ರಿಯ ಸಂಬಂಧದಿಂದ ಹೊರಬರಬೇಕು ಎಂದು ಬರೆದಿದ್ದರು. ಅಂದಿನಿಂದ, ದಂಪತಿಗಳ ನಡುವೆ ಎಲ್ಲವೂ ಸರಿಯಾಗಿಲ್ಲ ಎಂದು ಜನರು ಊಹಿಸಲು ಪ್ರಾರಂಭಿಸಿದರು. ಆದಾಗ್ಯೂ, ಅದರ ನಂತರ ಈ ಕಪಲ್‌ನ ಅನೇಕ ಫೋಟೋಗಳು ಒಟ್ಟಿಗೆ ಬಂದವು ಮತ್ತು ಇವರ ನಡುವೆ ಎಲ್ಲ ಸರಿಯಿದೆ ಎಂದು ತೋರುತ್ತಿತ್ತು

310

ಆದರೆ, ಇದುವರೆಗೂ ಸುಶ್ಮಿತಾ ಸೇನ್ ಅಥವಾ ರೋಹ್ಮನ್ ಶಾಲ್  ಬ್ರೇಕಪ್ ಬಗ್ಗೆ ಏನನ್ನೂ ಹೇಳಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಇಬ್ಬರೂ ತಮ್ಮ ಸಂಬಂಧವನ್ನು ಕೊನೆಗೊಳಿಸಿದ್ದಾರೆ ಹಾಗೂ ರೋಹ್ಮನ್ ಶಾಲ್ ಈಗ ನಟಿಯ ಮನೆಯನ್ನು ತೊರೆದಿದ್ದಾರೆ. ರೋಹ್ಮನ್ ಈಗ ಶಿಪ್ಟ್‌ ಆಗಿ ಫ್ರೆಂಡ್‌ ಜೊತೆ ಇದ್ದಾರೆ ಎಂದು ವರದಿ ಹೇಳುತ್ತದೆ.

410

ಆದರೆ ಕೆಲವು ಘಂಟೆಗಳ ಹಿಂದೆ ನಟಿ ಡಿಬ್ರೇಕಪ್‌ ಬಗ್ಗೆ ಎಲ್ಲಾ ಊಹಾಪೋಹಗಳನ್ನು ಕೊನೆಗೊಳಿಸಿದರು. Instagram ನಲ್ಲಿ ಅದನ್ನು ದೃಢಪಡಿಸಿದರು. 'ನಾವು ಸ್ನೇಹಿತರಾಗಿ ಪ್ರಾರಂಭಿಸಿದ್ದೇವೆ, ನಾವು ಸ್ನೇಹಿತರಾಗಿಯೇ ಇದ್ದೇವೆ. ಸಂಬಂಧವು ಬಹಳ ಕಾಲ ಮುಗಿದಿದೆ. ಪ್ರೀತಿ ಉಳಿದಿದೆ ' ಎಂದು ಬರೆದು ಇದರೊಂದಿಗೆ ಅವರು ಕ್ಯೂಟ್‌ ಪೋಟೋವನ್ನು ಹಂಚಿಕೊಂಡಿದ್ದಾರೆ.

510

ಅವರ ವಯಸ್ಸಿನಲ್ಲಿ 15 ವರ್ಷಗಳ ವ್ಯತ್ಯಾಸವಿದೆ. ಸುಶ್ಮಿತಾ ಸೇನ್‌ಗೆ 46 ವರ್ಷವಾಗಿದ್ದರೆ, ರೋಹ್ಮನ್‌ಗೆ ಕೇವಲ 31 ವರ್ಷ. ಇವರಿಬ್ಬರು ಮೊದಲು ಭೇಟಿಯಾದದ್ದು ಫ್ಯಾಷನ್ ಗಾಲಾ ಸಂದರ್ಭದಲ್ಲಿ. ಈ ವೇಳೆ ಇಬ್ಬರೂ ಜೊತೆಯಾಗಿ ಸಾಕಷ್ಟು ಸಮಯ ಕಳೆದಿದ್ದರು. 

610

ರೋಹ್ಮನ್ ಸುಶ್ಮಿತಾ ಸೇನ್ ಅವರಿಗೆ ಪ್ರಪೋಸ್‌ ಮಾಡಿದರು. ಸೇನ್‌  ಪ್ರಸ್ತಾಪವನ್ನು ಒಪ್ಪಿಕೊಂಡರು. ಇದಾದ ನಂತರ ಸುಶ್ಮಿತಾ ರೋಹ್ಮನ್ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳು ಪ್ರಾರಂಭಿಸಿದರು. 2019ರಲ್ಲಿ ಇಬ್ಬರೂ ಮದುವೆಯಾಗಬಹುದು ಎಂಬ ವರದಿಗಳೂ ಬಂದಿದ್ದವು. ಆದರೆ, ಸುಶ್ಮಿತಾ ಇದನ್ನು ನಿರಾಕರಿಸಿದ್ದಾರೆ. ಇದೀಗ ಡೇಟ್ ಎಂಜಾಯ್ ಮಾಡುತ್ತಿದ್ದೇನೆ ಎಂದಿದ್ದರು.

710

ರೋಹ್ಮನ್ ಅವರು ಸುಶ್ಮಿತಾ ಸೇನ್ ಅವರ ಮನೆಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು. ಅವರು ಸುಶ್ಮಿತಾ ಅವರ ಇಬ್ಬರು ಪುತ್ರಿಯರಾದ ರೆನೀ ಮತ್ತು ಅಲಿಶಾ ಅವರೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದ್ದರು. 

810

ರೋಹ್ಮನ್‌ಗಿಂತ ಮೊದಲು, ಸುಶ್ಮಿತಾ ವಿಕ್ರಮ್ ಭಟ್, ಸಂಜಯ್ ನಾರಂಗ್, ಸಬೀರ್ ಭಾಟಿಯಾ, ರಣದೀಪ್ ಹೂಡಾ, ಇಮ್ತಿಯಾಜ್ ಖತ್ರಿ, ಮಾನವ್ ಮೆನನ್, ಬಂಟಿ ಸಚ್‌ದೇವ್, ಮುದಸ್ಸರ್ ಅಜೀಜ್ ಮತ್ತು ವಾಸಿಮ್ ಅಕ್ರಮ್ ಅವರೊಂದಿಗೆ ಸಹ ಸಂಬಂಧ ಹೊಂದಿದ್ದರು.

910
কবে বিয়ে করছেন  লাভবার্ডস, সেই নিয়েই সরগরম  পেজ থ্রি-র পাতা।  বারংবার বিয়ে নিয়ে প্রশ্ন করা হলে খানিক অস্বস্তি প্রকাশ করেছেন রহমান।

31 ವರ್ಷದ ರೋಹ್ಮನ್ ಶಾಲ್ ನೋಯ್ಡಾ ಮೂಲದವರಾಗಿದ್ದು, ವೃತ್ತಿಯಲ್ಲಿ ಮಾಡೆಲ್ ಆಗಿದ್ದಾರೆ. ನೊಯ್ಡಾದಿಂದ ಮುಂಬೈಗೆ ಅವರು ಮಾಡೆಲಿಂಗ್ ವೃತ್ತಿಜೀವನವನ್ನು ಮಾಡಲು ಬಂದರು. ಇಲ್ಲಿಯವರೆಗೆ ಅವರು ಸಬ್ಯಸಾಚಿ ಸೇರಿದಂತೆ ಅನೇಕ ಫ್ಯಾಷನ್ ಡಿಸೈನರ್‌ಗಳಿಗೆ ಶೋಗಳನ್ನು ಮಾಡಿದ್ದಾರೆ. ಫ್ಯಾಷನ್ ಶೋ ವೇಳೆ ರೋಹ್ಮನ್ ಸುಶ್ಮಿತಾ ಅವರನ್ನು ಭೇಟಿಯಾಗಿದ್ದರು ಎನ್ನಲಾಗಿದೆ. ಅಂದಿನಿಂದ ಅವರು ಪರಸ್ಪರ ಜೊತೆಯಾಗಿದ್ದಾರೆ.

1010

'ಸುಶ್ಮಿತಾ, ಅವರ ಹೆಣ್ಣುಮಕ್ಕಳಿಬ್ಬರೂ ಮತ್ತು ನಾನು ಕುಟುಂಬದಂತೆ. ಕೆಲವೊಮ್ಮೆ ನಾನು ಅವರ ಮಕ್ಕಳ ತಂದೆಯಂತೆ ಬದುಕುತ್ತೇನೆ ಮತ್ತು ಕೆಲವೊಮ್ಮೆ ನಾನು ಅವರ ಸ್ನೇಹಿತನಾಗುತ್ತೇನೆ. ನಾವು ಸಾಮಾನ್ಯ ಕುಟುಂಬದಂತೆ ಬದುಕುತ್ತೇವೆ ಎಂದು ರೋಹ್ಮನ್ ಶಾಲ್ ಹೇಳಿದರು ಮತ್ತು 'ನಾವು ಮದುವೆಯಾದಾಗ, ನಾವು ಅದನ್ನು ಯಾರಿಂದಲೂ ಮರೆ ಮಾಡುವುದಿಲ್ಲ ಎಂದು ಸುಶ್ಮಿತಾ ಸೇನ್ ಅವರೊಂದಿಗಿನ ವಿವಾಹದ ಬಗ್ಗೆ ರೋಹ್ಮನ್ ಹೇಳಿದ್ದರು.

Read more Photos on
click me!

Recommended Stories