ಸುಶಾಂತ್ ಸಿಂಗ್ ಸಾವಿನ ನಂತರ ಅವರ ಪರ್ಸನಲ್ ಲೈಫ್ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ.
ಸಾರಾ ಆಲಿ ಖಾನ್ ಜೊತೆ ನಟನ ಆಫೇರ್ ವಿಷಯ ಸಖತ್ ಸದ್ದು ಮಾಡುತ್ತಿದೆ.
ಕೇದರ್‌ನಾಥ್ ಸಿನಿಮಾದ ಸಮಯದಲ್ಲಿ ಇಬ್ಬರೂ ತುಂಬಾ ಕ್ಲೋಸ್ ಆಗಿದ್ದರು. ಆದರೆ ಇವರ ರಿಲೆಷನ್‌ಶಿಪ್ ಹೆಚ್ಚು ಕಾಲ ನೆಡೆಯಲಿಲ್ಲ, ಎಂದು ಸುಶಾಂತ್ ಸ್ನೇಹಿತ ಸಹ ಹೇಳಿದ್ದ.
ಅವರ ಅಲ್ಪಾವಧಿಯ ಸಂಬಂಧದ ಸಮಯದಲ್ಲಿ ಸುಶಾಂತ್ ಸಿಂಗ್ ರಜಪೂತ್ ನಂಬಿಕೆಗೆ ಅರ್ಹರಾಗಿರಲಿಲ್ಲ ಎಂದು ಸಾರಾ ಅಲಿ ಖಾನ್ ಹೇಳಿದ್ದಾರೆ
ಕೆಲವು ದಿನಗಳ ಹಿಂದೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ರಕುಲ್ ಪ್ರೀತ್ ಸಿಂಗ್, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ದೀಪಿಕಾ ಪಡುಕೋಣೆ ಅವರ ವಿಚಾರಣೆ ನಡೆಸಿದೆ.
ನಡೆಯುತ್ತಿರುವ ಡ್ರಗ್ಸ್ ನೆಕ್ಸಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರ ಫೋನ್‌ಗಳನ್ನು ಎನ್‌ಸಿಬಿ ವಶಪಡಿಸಿಕೊಂಡಿದೆ ಎಂದು ವರದಿಗಳು ಹೇಳುತ್ತಿವೆ.
ಡ್ರಗ್ಸ್‌ಗೆ ಸಂಬಂಧಿಸಿದ ವಾಟ್ಸಾಪ್ ಚಾಟ್ಸ್ಆಧಾರದ ಮೇಲೆ ಅವರೆಲ್ಲರಿಗೆ ಎನ್‌ಸಿಬಿ ಸಮನ್ಸ್ ಜಾರಿ ಮಾಡಿತ್ತು.
ಶೂಟಿಂಗ್ ಸಮಯದಲ್ಲಿ ಸುಶಾಂತ್ ವ್ಯಾನಿಟಿ ವ್ಯಾನ್‌ನಲ್ಲಿ ಡ್ರಗ್ಸ್ ತೆಗೆದುಕೊಳ್ಳುವುದನ್ನು ನೋಡಿದ್ದೇವೆ, ಎಂದು ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿ ಖಾನ್ವಿಚಾರಣೆ ವೇಳೆ ಆರೋಪಿಸಿದ್ದಾರೆ.
ಅಷ್ಟೇ ಅಲ್ಲ, ಸಾರಾ ಅಲಿ ಖಾನ್ ಕೇದಾರನಾಥ ಸಹನಟನ ಬಗ್ಗೆ ಕೆಲವು ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.
ಸುಶಾಂತ್ ಜೊತೆ ತಮ್ಮ ಸಂಬಂಧವನ್ನು ಸಾರಾ ಒಪ್ಪಿಕೊಂಡಿದ್ದಾರೆ ಎಂದು ವಿವಿಧ ಮಾಧ್ಯಮ ಚಾನೆಲ್‌ಗಳು ಹೇಳುತ್ತಿವೆ.
2018ರಲ್ಲಿ ಕೇದಾರನಾಥ ಶೂಟಿಂಗ್ ಸಮಯದಲ್ಲಿ ಸಾರಾ ಮತ್ತು ಸುಶಾಂತ್ ಸ್ನೇಹಿರಾಗಿದ್ದು, ನಂತರ ಅವರು ರಿಲೆಷನ್‌ಶಿಪ್‌ನಲ್ಲಿದ್ದರು.
ಡಿಸೆಂಬರ್ 2018ರಲ್ಲಿ ಲೀವ್-ಇನ್ ಸಂಬಂಧದಲ್ಲಿದ್ದರು ಮತ್ತು ಇಬ್ಬರು ಫ್ರೆಂಡ್ಸ್ ಜೊತೆ ಕೊಹ್ ಸಮುಯಿಗೆ ಹಾಲಿಡೇಗೆ ಹೋಗಿದ್ದಾಗಿ ಬಾಯಿ ಬಿಟ್ಟಿದ್ದಾರೆ.
ಸುಶಾಂತ್ ಡ್ರಗ್ಸ್ ತೆಗೆದುಕೊಳ್ಳುವುದನ್ನು ನೋಡಿದ್ದೇನೆ. ಆದರೆ ನಾನು ಅದನ್ನು ಸ್ವತಃ ಸೇವಿಸಿಲ್ಲ ಎಂದು ಸಾರಾ ಹೇಳಿದರು.
ಎನ್‌ಸಿಬಿ ಅಧಿಕಾರಿಗಳೊಂದಿಗೆ ಚಾಟ್‌ಗಳನ್ನು ಹಂಚಿಕೊಂಡರು ಮತ್ತು ಅವರ ಶಾರ್ಟ್ ಟೈಮ್ ಸಂಬಂಧದಲ್ಲಿ ಸುಶಾಂತ್ ತನ್ನೊಂದಿಗೆ ನಂಬಿಗೆಗೆ ಅರ್ಹರಾಗಿಲ್ಲ,ಎಂದು ಸಾರಾ ರೀವಿಲ್ ಮಾಡಿದರು ಎಂದು ಪೀಪಿಂಗ್‌ಮೂನ್.ಕಾಂನಲ್ಲಿ ಪ್ರಕಟವಾದ ವರದಿ ಹೇಳುತ್ತದೆ.