ಟಾಲಿವುಡ್‌ ಸಿನಿಮಾದಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರಾ ಬಾಲಿವುಡ್‌ ಕಿಂಗ್‌ ಖಾನ್‌?

First Published | Sep 30, 2020, 6:49 PM IST

ಬಾಲಿವುಡ್‌ನ ಕಿಂಗ್‌ ಖಾನ್‌ ಕಳೆದ ಎರಡು ವರ್ಷಗಳಿಂದ ಯಾವುದೇ ಸಿನಿಮಾ ಮಾಡಿಲ್ಲ. ಕೊನೆಯ ಬಾರಿ 2018ರಲ್ಲಿ ಜೀರೊ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು ಸೂಪರ್‌ ಸ್ಟಾರ್‌ ಶಾರುಖ್‌. ಅಟ್ಲೀ ಅವರ ಮುಂದಿನ ಚಿತ್ರದಲ್ಲಿ ಡಬಲ್‌ ಆ್ಯಕ್ಟಿಂಗ್ ಮಾಡ್ತಾರಂತೆ. ಖಾನ್‌ ತಮಿಳು ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂಬ ರೂಮರ್‌ ಇದೆ. 

ಶಾರುಖ್‌ ಖಾನ್‌ ಫ್ಯಾನ್ಸ್‌ಗೆ ಸಿಹಿ ಸುದ್ದಿ. ಎರಡು ವರ್ಷಗಳ ನಂತರ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ನಟ.
ತಮಿಳು ಸಿನಿಮಾದಲ್ಲಿ ನಟಿಸಲಿದ್ದಾರೆ ಕಿಂಗ್‌ ಖಾನ್‌ ಎಂಬ ಸುದ್ದಿ ವೈರಲ್‌ ಆಗಿದೆ.
Tap to resize

ವರದಿಗಳ ಪ್ರಕಾರ ಡಬಲ್‌ ರೋಲ್‌ನಲ್ಲಿ ಕಾಣಿಸಿಕೊಳ್ಳಲಿರುವ ಸೂಪರ್‌ಸ್ಟಾರ್‌.
ಸಿನಿಮಾದಲ್ಲಿ ಶಾರುಖ್‌ ಇನ್ವೇಸ್ಟಿಗೇಷನ್‌ ಆಫಿಸರ್‌ ಆಗಿ ಒಂದು ಪಾತ್ರ ನಿರ್ವಹಿಸಿದರೆ, ಇನ್ನೊಂದು ನೆಗೆಟಿವ್‌ ರೋಲ್‌ ಅಂತೆ.
ಎಸ್‌ಆರ್‌ಕೆ ತಮಿಳು ಚಲನಚಿತ್ರ ನಿರ್ಮಾಪಕ ಅಟ್ಲೀ ಜೊತೆಸಹಿ ಹಾಕಿದ್ದಾರೆ ಎಂಬ ವದಂತಿ ಇದೆ.
ಎರಡು ವರ್ಷಗಳಿಂದ ಶಾರುಖ್‌ ಹಾಗೂ ಅಟ್ಲೀ ಈ ಬಗ್ಗೆ ಚರ್ಚಿಸಿದ್ದಾರೆ. ಅಂತಿಮವಾಗಿ ಆ್ಯಕ್ಷನ್‌ ಚಿತ್ರ ಹೊರಬರಲಿದೆ ಎಂದು ಮುಂಬೈ ಮಿರರ್‌ ವರದಿ ಮಾಡಿದೆ.
'ಅಟ್ಲೀ ಒಂದೇ ಚಿತ್ರದೊಳಗೆ ನಟನ ವ್ಯಕ್ತಿತ್ವದ ವಿಭಿನ್ನ ಅಂಶಗಳನ್ನು ಅನ್ವೇಷಿಸಲು ಇಷ್ಟಪಡುತ್ತಾರೆ' ಎಂದು ಹೇಳಲಾಗುತ್ತಿದೆ.
1998 ರಲ್ಲಿ 'ಡೂಪ್ಲಿಕೇಟ್' ಸಿನಿಮಾದಲ್ಲಿ ಶಾರುಖ್‌ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಅಟ್ಲೀ ಪ್ರಸ್ತುತ ಈ ಚಿತ್ರವನ್ನು ಕರಣ್ ಜೋಹರ್‌ ಸ್ಕ್ರಿಪ್ಟ್ ರೆಡಿ ಮಾಡುತ್ತಿದೆ.
ಇದನ್ನು ಶಾರುಖ್ ಖಾನ್ ಮತ್ತು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಸಹ-ನಿರ್ಮಾಣ ಮಾಡಲಿದೆ.

Latest Videos

click me!