ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿ ಸುಹಾನಾ, ಬ್ಲಾಕ್ ಎಂದರೆ ಹಿಂದಿಯಲ್ಲಿ ಖಾಲಾಎಂದರ್ಥ ಎಂದು ಕ್ಯಾಪ್ಷನ್ ನೀಡಿದ್ದಾರೆ.
'ಈ ಸಮಯದಲ್ಲಿ ಬಹಳಷ್ಟು ನಡೆಯುತ್ತಿದೆ ಮತ್ತು ಇವುಗಳಲ್ಲಿ ಇದು ಸಹ ಒಂದು ಸಮಸ್ಯೆಯಾಗಿದೆ, ಅದನ್ನು ನಾವು ಸರಿಪಡಿಸಬೇಕಾಗಿದೆ. ಇದು ನನ್ನ ಬಗ್ಗೆ ಮಾತ್ರವಲ್ಲ. ಯಾವುದೇ ಕಾರಣವಿಲ್ಲದೇ ಕೀಳರಿಮೆ ಬೆಳೆಯುವ ಪ್ರತಿಯೊಬ್ಬ ಹುಡುಗಿ ಹಾಗೂ ಹುಡುಗನ ಬಗ್ಗೆ. ನಾನು 12 ವರ್ಷದವಳಿದ್ದಾಗ, ನನ್ನ ಚರ್ಮದ ಬಣ್ಣದಿಂದಾಗಿ ನಾನು ಕುರೂಪಿ ಎಂದು ಜನರು ಹೇಳಿದ್ದರು,' ಎಂದು ಸುಹಾನಾ ತನ್ನ ಪೋಸ್ಟ್‌ನಲ್ಲಿ ಬರೆದು ಕೊಂಡಿದ್ದಾರೆ.
ದುಃಖಕರ ಸಂಗತಿಯೆಂದರೆ, ನಾವೆಲ್ಲರೂ ಭಾರತೀಯರು ಮತ್ತು ಹೆಚ್ಚಿನ ಭಾರತೀಯರು ಬಣ್ಣ ಬ್ರೌನ್. ಆದರೆ ಅದು ಮಹತ್ವದ ವಿಷಯವಿಲ್ಲ. ನಿಮ್ಮಿಂದ ಮೆಲನಿನ್ ಅನ್ನು ದೂರವಿರಿಸಲು ನೀವು ಎಷ್ಟೇ ಪ್ರಯತ್ನಿಸಿದರೂ, ನಿಮಗೆ ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮ ಸ್ವತಂದ್ದನ್ನು ದ್ವೇಷಿಸುವುದೆಂದರೆಇನ್‌ಸೆಕ್ಯೂರ್ ಎಂದರ್ಥ' ಎಂದು ಪ್ರಬುದ್ಧರಂತೆ ಬರೆದು ಕೊಂಡಿದ್ದಾರೆ ಸುಹಾನಾ.
'ಕ್ಷಮಿಸಿ, ನಿಮ್ಮ ಎತ್ತರ 5 ಅಡಿ 7 ಇಂಚುಗಳಲ್ಲದಿದ್ದರೆ ಮತ್ತು ನೀವು ಬಿಳಿಯಾಗಿರದಿದ್ದರೆ ನೀವು ಸುಂದರವಾಗಿಲ್ಲ ಎಂದು ಸೋಶಿಯಲ್ ಮೀಡಿಯಾ, ಭಾರತೀಯ ಮ್ಯಾಚ್‌ಮೇಕಿಂಗ್ ಅಥವಾ ನಿಮ್ಮ ಕುಟುಂಬದಿಂದ ನಿಮಗೆ ಮನವರಿಕೆಯಾಗಿದ್ದರೆ. ನಾನು 5 ಅಡಿ 3 ಇಂಚು ಮತ್ತು ನನ್ನ ಬಣ್ಣ ಬ್ರೌನ್. ಇದರಿಂದ ನಾನು ಸಂತೋಷವಾಗಿದ್ದೇನೆ ಮತ್ತು ನೀವು ಕೂಡ ಬಣ್ಣ ಮತ್ತು ಹೈಟಿಗೆ ಬೇಸರ ಪಟ್ಟುಕೊಳ್ಳಬಾರದೆಂದು ಹೇಳಿದ್ದಾರೆ.
ಸುಹಾನಾಳನ್ನು ಸಹ ಸ್ಕೀನ್ ಕಲರ್‌ಗಾಗಿ ಟ್ರೋಲ್ ಮಾಡಿದ್ದಾರೆ ನೆಟ್ಟಿಗರು. ಜನರು ಅವಳನ್ನು 'ಕಾಲಿ' ಎಂದು ಕರೆದರು.
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇರುವ ಸುಹಾನಾ ಈ ಪೋಸ್ಟ್ ಮೂಲಕ ಸ್ಕಿನ್ ಕಲರ್ ಬಗ್ಗೆಗೇಲಿ ಮಾಡುವವರ ಬಾಯಿ ಮುಚ್ಚಿಸಿದ್ದಾರೆ.
ಲಂಡನ್‌ನಲ್ಲಿ ಓದುತ್ತಿದ್ದ ಸುಹಾನಾ ಲಾಕ್‌ಡೌನ್ ಕಾರಣದಿಂದ ಈಗ ತನ್ನ ಫ್ಯಾಮಿಲಿ ಜೊತೆ ಮುಂಬೈನಲ್ಲಿದ್ದಾಳೆ.
ಪಪ್ಪಾ ಶಾರುಖ್‌ನಂತೆ ನಟನಾ ಕ್ಷೇತ್ರದಲ್ಲಿ ತಮ್ಮ ಕೆರಿಯರ್ ಮುಂದುವರಿಸಲು ಸುಹಾನಾ ಬಯಸುತ್ತಾರೆ.
18 ವರ್ಷದ ಸುಹಾನಾ ಪತ್ರಿಕೆಯ ಮುಖಪುಟದಲ್ಲಿ ಕಾಣಿಸಿಕೊಳ್ಳುವ ಮೂಲಕ ಈಗಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.
ಆಗಸ್ಟ್ 2018 ರಲ್ಲಿ, ಗ್ಲಾಮರ್ ಮ್ಯಾಗ್‌ಜೀನ್ ವೋಗ್ ಫ್ರೆಂಟ್ ಪೇಜ್‌ನಲ್ಲಿ ಮನಮೋಹಕ ಅವತಾರದಲ್ಲಿ ಕಾಣಿಸಿಕೊಂಡಿದ್ದಳು. ಶಾರುಖ್ ಸ್ವತಃ ಈ ಪತ್ರಿಕೆಯ ಮುಖಪುಟವನ್ನು ಲಾಂಚ್ ಮಾಡಿದ್ದರು.