ಹೃತಿಕ್ ಬಿಟ್ಟ ಮೇಲೆ ಮಕ್ಕಳೊಂದಿಗೆ ಸುಸೇನ್ ಇರೋ ಮನೆಯ ಸೊಬಗಿದು..

First Published | Sep 15, 2020, 2:07 PM IST

ಬಾಲಿವುಡ್ ಸೆಲೆಬ್ರಿಟಿಗಳ ಮದುವೆ ದೊಡ್ಡ ಸುದ್ದಿಯಾಗುತ್ತದೆ. ಹಾಗೆಯೇ ಡಿವೋರ್ಸ್ ಕೊಟ್ಟರೂ.. ಇದು ಕಾಮನ್ ಆದರೂ ಸೆಲೆಬ್ರಿಟಿಗಳ ಹಿಂದೆ ಮೀಡಿಯಾ ಸದಾ ಕಣ್ಣಿಟ್ಟಿರುತ್ತೆ. ಅಲ್ಲದೇ ಅವರು ತೊಟ್ಟ ಬಟ್ಟೆ, ಶೂಸ್, ಕೊಂಡ ಕಾರು, ಹೆಂಡತಿ, ಮಕ್ಕಳ ವಿಷಯಗಳೂ ಆಗಾಗ ಹೆಡ್ಲೈನ್‌ಗಳಲ್ಲಿ ರಾರಾಜಿಸುತ್ತವೆ. ಇಂಥ ಗಾಸಿಪ್‌ಗಳ ಮಧ್ಯೆಯೇ ಹೃತಿಕ್ ರೋಷನ್ ಹಾಗೂ ಸುಸೇನ್ ದಾಂಪತ್ಯ ವಿಶೇಷ ಎನಿಸಿದ್ದಲ್ಲದೇ, ಅವರು ಡೀವೋರ್ಸ್ ಆದ ನಂತರವೂ ನಡೆದುಕೊಳ್ಳುತ್ತಿರುವ ರೀತಿಯೂ ವಿಭಿನ್ನ. ಪತಿ-ಪತ್ನಿ ಬೇರೆಯಾದ ಕೂಡಲೇ ವೈರಿಗಳಂತೆ ವರ್ತಿಸುವ ಅಗತ್ಯವಿಲ್ಲವೆಂದು ಹಿಂದೆ ಇದೇ ದಂಪತಿಯನ್ನು ಉಲ್ಲೇಖಿಸಿದ ಸುಪ್ರಿಂ ಕೋರ್ಟ್ ಪ್ರಕರಣವೊಂದರ ತೀರ್ಪು ನೀಡಿತ್ತು.  ಅಂಥ ಅವರೂಪದ ದಾಂಪತ್ಯ ಹಾಗೂ ಡಿವೋರ್ಸ್ ನಂತರದ ಜೀವನ ಹೊಂದಿದೆ ಹೃತಿಕ್ ಹಾಗೂ ಸುಸೇನ್ ಜೋಡಿ. 

ಪತಿ ಹೃತಿಕ್ ರೋಷನ್ (Hrithik Roshan)ಅವರಿಂದ ಬೇರ್ಪಟ್ಟ ನಂತರ ಸುಸೇನ್ ತಮ್ಮಿಬ್ಬರು ಗಂಡು ಮಕ್ಕಳೊಂದಿಗೆ ಐಷಾರಾಮಿ ಮನೆಯಲ್ಲಿ ವಾಸವಿದ್ದಾರೆ.
ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಆತಂಕದಲ್ಲಿ ಮಕ್ಕಳು ಬಡವಾಗಬಾರದು ಎಂಬ ಒಂದೇ ಕಾರಣಕ್ಕೆ ಹೃತಿಕ್ ಹಾಗೂ ಸುಸೇನ್ ಒಂದೇ ಮನೆಯಲ್ಲಿದ್ದರು.
Tap to resize

ಇದೀಗ ಬದುಕು ನಾರ್ಮಲ್‌ನತ್ತ ಮರಳುತ್ತಿದೆ. ಮನೆಯಲ್ಲಿಯೇ ಬಂಧಿಯಾಗಿರುವ ಬಾಲಿವುಡ್ ಸೆಲೆಬ್ರಿಟಿಗಳು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ, ಯಾವಾಗೂ ಮನೆಯೊಳಗೆ ಲಾಕ್ ಆಗಿ ಸಮಯ ಸಿಕ್ಕಿತ್ತೋ, ಆಗ ಸೋಷಿಯಲ್ ಮೀಡಿಯಾದಲ್ಲೂ ಎಲ್ಲರೂ ಫುಲ್ ಆ್ಯಕ್ಟಿವ್ ಆಗಿದ್ದರು. ಆ ಸಂದರ್ಭದಲ್ಲಿ ಸುಸೇನ್ ತಮ್ಮ ಮನೆಯ ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದರು.
ಅದ್ಭುತವಾದ ವಿನ್ಯಾಸವುಳ್ಳ ಮನೆಯಲ್ಲಿ ಸುಸೇನ್ ತಮ್ಮ ಮಕ್ಕಳೊಂದಿಗೆ ಇರುತ್ತಾರೆ. ತಮ್ಮ ಔದ್ಯೋಗಿಕ ಬದುಕಿನಲ್ಲಿ ಯಶ ಕಂಡರೂ, ವೈಯಕ್ತಿಕ ಬದುಕು ಸಾಕಷ್ಟು ಏರಿಳಿತ ಕಂಡಿದ್ದಾರೆ ಈ 41 ವರ್ಷದ ಸುಸೇನ್.
ರುಹಾಲ್ ಹಾಗೂ ರುದಾನ್ ಎಂಬಿಬ್ಬರು ಗಂಡು ಮಕ್ಕಳಿರುವ ಈ ಜೋಡಿ, ಡಿವೋರ್ಸ್ ಆದ ನಂತರವೂ ತಮ್ಮ ಮಕ್ಕಳಿಗಾಗಿ ಸಾಕಷ್ಟು ತ್ಯಾಗಗಳನ್ನು ಮಾಡಿ ಕೊಳ್ಳುತ್ತಾರೆ. ಮಕ್ಕಳನ್ನು ಖುಷಿಯಾಗಿಡಲು ಜೊತೆ ಜೊತೆಯಾಗಿ ಫಾರಿನ್ ಟ್ರಿಪ್ ಮಾಡುತ್ತಾರೆ.
ಈ ಜೋಡಿ ಪರಸ್ಪರ ಒಪ್ಪಿಗೆ ಮೇಲೆ ಡಿವೋರ್ಸ್ ಪಡೆದು, ಈಗಾಗಲೇ ಆರು ವರ್ಷಗಳಾಗಿವೆ. ಆದರೆ, ಮಕ್ಕಳ ವಿಷಯದಲ್ಲಿ ಇವರಿಬ್ಬರ ನಡುವೆ ಯಾವುದೇ ತಕರಾರಿಲ್ಲ. ಮಕ್ಕಳು ಅಮ್ಮನ ಸುಪರ್ದಿಯಲ್ಲಿಯೇ ಇರುವುದು ಹೌದಾದರೂ, ಅಪ್ಪ ಹೃತಿಕ್ ರೋಷನ್ ಸಹ ಯಾವುದೇ ಪ್ರೀತಿಯನ್ನು ಕಡಿಮೆ ಮಾಡಿಲ್ಲ.
ಗಂಡ ಹಂಡತಿ ಜಗಳದಲ್ಲಿ ಕೂಸು ಬಡವಾಗಬಾರದೆಂದು ಇಬ್ಬರೂ ಬಹಳ ಎಚ್ಚರಿಕೆ ನೋಡಿಕೊಳ್ಳುತ್ತಾರೆ. ಮಕ್ಕಳಿಗಾಗಿ ಏನು ಬೇಕೋ ಎಲ್ಲವನ್ನೂ ಒಟ್ಟಿಗೇ ಸೆಲೆಬ್ರೇಟ್ ಮಾಡುತ್ತಾರೆ.
ನಟ ಮತ್ತು ಚಲನಚಿತ್ರ ನಿರ್ಮಾಪಕ ಸಂಜಯ್ ಖಾನ್ ಅವರ ಮಗಳಾಗಿದ್ದರೂ, ಸುಸೇನ್ ಎಂದಿಗೂ ನಟನೆಯಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸಲಿಲ್ಲ. ಈಕೆ ಪ್ರಸಿದ್ಧ ಇಂಟೀರಿಯರ್ ಡಿಸೈನರ್. ಇತರರ ಮನೆಯನ್ನು ಅಲಂಕರಿಸುವ ಸುಸೇನ್ ಮುಂಬೈನಲ್ಲಿ ಐಷಾರಾಮಿ ಮನೆಯನ್ನು ಸಹ ಹೊಂದಿದ್ದಾರೆ.
ತಮ್ಮ ಮನೆಯನ್ನು ಸುಸೇನ್ ಸ್ವಂತವಾಗಿ ವಿನ್ಯಾಸಗೊಳಿಸಿದ್ದಾಳೆ. ಸೋಫಾಗೆ ವಿಶೇಷ ಬಣ್ಣಗಳು ಮತ್ತು ತೆರೆದ ಫ್ರೆಂಚ್ ಕಿಟಕಿಗಳಿಂದ ಮನೆಯ ಸೌಂದರ್ಯ ಹೆಚ್ಚಾಗಿದೆ. 21ನೇ ಮಹಡಿಯಲ್ಲಿ 6 ಕೊಠಡಿಗಳ ಐಷಾರಾಮಿ ಮನೆಯಲ್ಲಿ ಸೋರ್ಡ್ ಆಪ್ ಟಿಪ್ಪು ಸುಲ್ತಾನ್ ಖ್ಯಾತಿಯ ಸಂಜಯ್ ಖಾನ್ ಮಗಳು ಸುಸೇನ್ ವಾಸಿಸುತ್ತಾರೆ.
ಆ್ಯಂಟಿಕ್ ಹಾಗೂ ನವೀನ್ ವಸ್ತುಗಳಿಂದ ಮನೆಯನ್ನು ಅದ್ಭುತವಾಗಿ ಅಲಂಕರಿಸುವ ಸುಸೇನ್, ಬಾಲ್ಕನಿಯಲ್ಲಿ ಅದ್ಭುತ ಗಾರ್ಡನ್ ಮಾಡಿದ್ದಾರೆ.
ಮಕ್ಕಳೇ ತಯಾರಿಸಿದ ರೇಖಾ ಚಿತ್ರಗಳ ಇವರ ಮನೆಯ ಗೋಡೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಅಲ್ಲದೇ ವಿದೇಶ ಹಾಗೂ ದೇಶದ ವಿವಿಧ ಭಾಗಗಳಿಂದ ತಂದ ವಸ್ತುಗಳು ಮನೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.ಐದು ವರ್ಷವಿರುವಾಗಲೇ ತಾಯಿಯೊಂದಿಗೆ ಕಟ್ಟಡ ನಿರ್ಮಾಣದ ಹಲವು ಸ್ಥಳಗಳಿಗೆ ಸುಸೇನ್ ಭೇಟಿ ನೀಡುತ್ತಿದ್ದರಂತೆ. ಆಗಲೇ ಮನೆ ವಿನ್ಯಾಸದ ಬಗ್ಗೆ ಒಲವು ಬೆಳೆಯಿತೆಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ವೀಕೆಂಡ್‌ನಲ್ಲಿ ಪೋಷಕರು ಮನೆಗೆ ಬರುತ್ತಾರೆ. ಆಗ ಖುಷಿ ಮನೆಯಲ್ಲಿ ತುಂಬಿ ತುಳುಕುತ್ತದೆ ಎನ್ನುತ್ತಾರೆ ಹೃತಿಕ್ ಮಾಜಿ ಪತ್ನಿ.ಒಟ್ಟಿನಲ್ಲಿ ಹಲವು ವಿಷಯಗಳಿಗೆ ಸುಸೇನ್-ಹೃತಿಕ್ ಮಾದರಿಯಾಗುತ್ತಾರೆ. ಅದರಲ್ಲಿಯೂ ಮಕ್ಕಳ ಬೆಳವಣಿಗೆಯ ವಿಷಯದಲ್ಲಿ ಇಬ್ಬರೂ ತೆಗೆದುಕೊಳ್ಳುತ್ತಿರುವ ಕೇರಿಂಗ್ ಎಲ್ಲರಿಗೂ ಅನುಕರಣೀಯ ಎಂಬುದರಲ್ಲಿ ಅನುಮಾನವೇ ಇಲ್ಲ.

Latest Videos

click me!