Suraiya, Dev Anand Love Story - ನಟಿಗಾಗಿ ನೀರಿಗೆ ಹಾರಿದ್ದ ದೇವ್ ಆನಂದ್
First Published | Jun 15, 2022, 5:47 PM ISTಸಿನಿಮಾದ ಕಪ್ಪು ಬಿಳುಪು ಯುಗದಲ್ಲಿ ಚಿತ್ರರಂಗದ ಅತ್ಯಂತ ಅಚ್ಚುಮೆಚ್ಚಿನ ಮತ್ತು ಪ್ರಸಿದ್ಧ ವ್ಯಕ್ತಿಯಾಗಿದ್ದ ನಟಿ ಸುರಯ್ಯ (Suraiya) ಅವರು ಇಂದು ಬದುಕಿದ್ದರೆ 93 ವರ್ಷ ವಯಸ್ಸಾಗಿರುತ್ತಿತ್ತು. ಬಾಲಿವುಡ್‌ನ ಸುಂದರ ನಟಿ ಸುರೈಯಾ ಜಮಾಲ್ ಶೇಖ್ 15 ಜೂನ್ 1929 ರಂದು ಜನಿಸಿದರು. ದುರದೃಷ್ಟವಶಾತ್, ಸುರಯ್ಯ ಇಂದು ನಮ್ಮೊಂದಿಗೆ ಇಲ್ಲ ಆದರೆ ಅವರ ಅದ್ಭುತ ಅಭಿನಯ ಮತ್ತು ತುಂಬಾ ಸುಮಧುರ ಧ್ವನಿ ಎಂದೆಂದಿಗೂ ಅಮರವಾಗಿದೆ. ನಟಿ ಸುರಯ್ಯ ಅವರ ಹೆಸರು ಇಂದಿನ ಪೀಳಿಗೆಗೆ ತಿಳಿದಿಲ್ಲದಿರಬಹುದು, ಆದರೆ ಅವರ ಕಾಲದ ಪ್ರಸಿದ್ಧ ನಟಿ ಮತ್ತು ಗಾಯಕಿ. ಅವರು ಐವತ್ತು ಮತ್ತು ಅರವತ್ತರ ದಶಕದಲ್ಲಿ ಬಾಲಿವುಡ್‌ನ ಅತಿದೊಡ್ಡ ಆಲ್‌ರೌಂಡರ್ ನಟಿಯಾಗಿದ್ದರು.