ಶಾರುಖ್ ಖಾನ್ ಎಲ್ಲಾ ಸಿನಿಮಾಗಳಲ್ಲಿ ಓಡುತ್ತಿರೋದು ಯಾಕೆ? ಈ ಮೂಢನಂಬಿಕೆಯೇ ಕಾರಣವೇ?

Published : Jul 28, 2025, 09:22 PM IST

ಯಾವೆಲ್ಲಾ ಸಿನಿಮಾಗಳಲ್ಲಿ ಶಾರುಖ್ ಖಾನ್ ಓಡಿದ್ದಾರೆಯೋ ಆ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಆಗುತ್ತಿತ್ತಂತೆ, ಹಾಗಂತ ಮೂಢನಂಬಿಕೆ ಕಿಂಗ್ ಖಾನ್ ಗೆ ಇತ್ತು. 

PREV
16

ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಜೀವನದಲ್ಲಿ ವಿಶೇಷವಾದದ್ದನ್ನು ನಂಬುವ ಒಂದಲ್ಲ ಒಂದು ಕ್ಷಣ ಬರುತ್ತದೆ. ಸಲ್ಮಾನ್ ಖಾನ್ ನಿಜ ಜೀವನದಲ್ಲಿ ಮತ್ತು ಸಿನಿಮಾ ಜೀವನದಲ್ಲಿ ವಿಶೇಷವಾದ ಬಳೆ ಧರಿಸುವುದಕ್ಕೆ ಹೆಸರುವಾಸಿಯಾಗಿದ್ದರೆ, ಏಕ್ತಾ ಕಪೂರ್ ವರ್ಷಗಳಿಂದ ತನ್ನ ಎಲ್ಲಾ ಸೀರಿಯಲ್ ಗಳಿಗೆ 'ಕೆ' ಅಕ್ಷರವನ್ನು ಹೆಸರಿಸಿದ್ದಾರೆ ಮತ್ತು ಶಾರುಖ್ ಖಾನ್(Shah Rukh Khan) ಕೂಡ ಇದೇ ರೀತಿಯದ್ದನ್ನು ನಂಬುತ್ತಾರೆ.

26

90 ರ ದಶಕದ ಉತ್ತರಾರ್ಧದಲ್ಲಿ ನಡೆದ ಸಂದರ್ಶನವೊಂದರಲ್ಲಿ, ಕೊಯ್ಲಾ ಸಿನಿಮಾ ಬಗ್ಗೆ ಮಾತನಾಡುವಾಗ, ಬಾದ್‌ಶಾ ನಟ ತನ್ನ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸನ್ನು ಗಳಿಸಲು ಯಾವ ತಂತ್ರವನ್ನು ಉಪಯೋಗಿಸುತ್ತಿದ್ದರು ಅನ್ನೋದನ್ನು ಹೇಳಿದ್ದಾರೆ.

36

ಇದು ಏನು ಅಂತ ನೀವು ಯೋಚಿಸುತ್ತಿರಬೇಕು? ಕಿಂಗ್ ಖಾನ್ ಸಂದರ್ಶನದಲ್ಲಿ ಹೇಳಿದ್ದು, ನನಗೆ ಒಂದು ಮೂಢನಂಬಿಕೆ ಇದೆ ನಾನು ಯಾವ ಸಿನಿಮಾದಲ್ಲಿ ಓಡುತ್ತೇನೆ (running in film) ಆ ಸಿನಿಮಾ ಸೂಪರ್ ಹಿಟ್ ಆಗುತ್ತದೆ ಎನ್ನುವ ನಂಬಿಕೆ ನನಗಿತ್ತು ಎಂದು ಎಸ್ ಆರ್ ಕೆ ಹೇಳಿದ್ದಾರೆ. .

46

ಇದರ ಬಗ್ಗೆ ವಿವರಿಸುತ್ತಾ ಶಾರುಖ್ ಖಾನ್, "ನಾನು ಡರ್ (darr) ಚಿತ್ರದಲ್ಲಿ ಸನ್ನಿ ಡಿಯೋಲ್ ನಿಂದ ಓಡಿಹೋದೆ, ಅದು ದೊಡ್ಡ ಹಿಟ್ ಆಯಿತು. ಅದಾದ ನಂತರ, ಸಲ್ಮಾನ್ ಖಾನ್ ಕರಣ್ ಅರ್ಜುನ್ ಚಿತ್ರದಲ್ಲಿ 'ಭಾಗ್ ಅರ್ಜುನ್ ಭಾಗ್' ಎಂದು ನನಗೆ ಹೇಳಿದರು. ನಾನು ಓಡುತ್ತಲೇ ಇದ್ದೆ ಮತ್ತು ಚಿತ್ರವು ದೊಡ್ಡ ಹಿಟ್ ಆಯಿತು.

56

ರಾಕೇಶ್ ರೋಷನ್ ನಿರ್ದೇಶನದ ಈ 1997 ರ ಆಕ್ಷನ್ ಥ್ರಿಲ್ಲರ್  (action thriller)ಚಿತ್ರ 'ಕೊಯ್ಲಾ' ದಲ್ಲಿ ಶಾರುಖ್ ಖಾನ್, ಮಾಧುರಿ ದೀಕ್ಷಿತ್ ಮತ್ತು ಅಮರೀಶ್ ಪುರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಇದರಲ್ಲೂ ಶಾರುಖ್ ಓಡಿದ್ದರು. ಏಪ್ರಿಲ್ 18, 1997 ರಂದು ಬಿಡುಗಡೆಯಾದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು ಮತ್ತು ಭಾರತದಲ್ಲಿ ಆ ವರ್ಷದ 8 ನೇ ಅತ್ಯಂತ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿತು.

66

ಕಭಿ ಖುಷಿ ಕಭಿ ಗಂ ಸಿನಿಮಾದಲ್ಲೂ ಶಾರುಖ್ ಖಾನ್ ಓಡೋಡಿ ಬರೋದನ್ನು ತೋರಿಸಿದ್ದಾರೆ. ದಿಲ್ ವಾಲೆ ದುಲ್ಹನಿಯಾ ಲೇಜಾಂಗೆಯಲ್ಲೂ ಶಾರುಖ್ ಓಡಿದ್ದಾರೆ. ಈ ಎರಡೂ ಸಿನಿಮಾಗಳು ಸಹ ಸೂಪರ್ ಹಿಟ್ ಆಗಿದ್ದವು. ಹಾಗಾಗಿ ಶಾರುಖ್ ಖಾನ್ ಮೂಢನಂಬಿಕೆ ಕೂಡ ನಿಜವೇ ಆಗಿತ್ತು ಅಂತಾನೆ ಹೇಳಬಹುದು.

Read more Photos on
click me!

Recommended Stories