ಭಾರತೀಯ ಚಿತ್ರರಂಗದಲ್ಲಿ ಸದ್ಯ ಸೂಪರ್‌ಸ್ಟಾರ್ ಆಗಿರುವ ಅದೆಷ್ಟೋ ನಟ-ನಟಿಯರು ತಮ್ಮ ಕಷ್ಟದ ದಿನಗಳಲ್ಲಿ ಜೀವನ ನಿರ್ವಹಿಸಲು ಹಲವಾರು ಕೆಲಸಗಳನ್ನು ನಿರ್ವಹಿಸಿದ್ದರು. ವೈಟರ್, ಡ್ರೈವರ್, ಮಾಡೆಲ್ ಹೀಗೆ ಏನೇನೋ ಆಗಿದ್ದರು. ಆದ್ರೆ ಈ ಸೂಪರ್ ಸ್ಟಾರ್ ಆಕ್ಟಿಂಗ್ ಕೆರಿಯರ್ ಆರಂಭಿಸುವ ಮುನ್ನ ಟಾಯ್ಲೆಟ್ ಕ್ಲೀನ್ ಮಾಡಿದ್ದರು. ಆದ್ರೆ ಈಗ ಬರೀ ಸಿನಿಮಾವೊಂದಕ್ಕೆ 100 ಕೋಟಿ ಸಂಭಾವನೆ ಪಡೆಯುತ್ತಾರೆ.
ಹಲವಾರು ಭಾರತೀಯ ನಟರು ಇಂದು ಚಲನಚಿತ್ರದಲ್ಲಿನ ತಮ್ಮ ಪಾತ್ರಗಳಿಗೆ ಭಾರಿ ಮೊತ್ತದ ಸಂಭಾವನೆಯನ್ನು ಪಡೆಯುತ್ತಾರೆ. ಶಾರುಖ್ ಖಾನ್‌ನಿಂದ ಹಿಡಿದು ರಜನಿಕಾಂತ್‌ವರೆಗೆ ಎಲ್ಲಾ ಸೂಪರ್‌ಸ್ಟಾರ್‌ಗಳು ಒಂದು ಚಿತ್ರಕ್ಕೆ 100 ಕೋಟಿ ರೂ.ಪಡೆಯುವುದೂ ಇದೆ.. ಆದ್ರೆ 100 ಕೋಟಿ ರೂ. ಮೊತ್ತವನ್ನು ಸಂಭಾವನೆಯಾಗಿ ಪಡೆದ ಮೊದಲ ನಟ ಯಾರು ಗೊತ್ತಾ..?
ಚಿತ್ರಕ್ಕೆ 100 ಕೋಟಿ ಚಾರ್ಜ್ ಮಾಡಿದ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಮತ್ಯಾರೂ ಅಲ್ಲ ಸಲ್ಮಾನ್ ಖಾನ್. ತಮ್ಮ ಚೊಚ್ಚಲ ಚಿತ್ರಕ್ಕೆ ಮೊದಲ ಸಂಭಾವನೆಯಾಗಿ 11,000 ರೂ. ಪಡೆದರು. ಅದಕ್ಕಿಂತಲೂ ಮೊದಲು ಅವರು ಟಾಯ್ಲೆಟ್ ಕ್ಲೀನ್ ಮಾಡಿದ್ದೂ ಇದೆ ಎಂಬುದನ್ನು ರಿಯಾಲಿಟಿ ಶೋ ಒಂದರಲ್ಲಿ ಹೇಳಿಕೊಂಡಿದ್ದರು.
2016ರಲ್ಲಿ ಸಲ್ಮಾನ್ ಖಾನ್ ಅವರ ಸುಲ್ತಾನ್ ಚಿತ್ರಕ್ಕಾಗಿ 100 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಅಲಿ ಅಬ್ಬಾಸ್ ಜಾಫರ್ ಅವರು ನಿರ್ದೇಶಿಸಿದ ಈ ಚಿತ್ರವನ್ನು ಆದಿತ್ಯ ಚೋಪ್ರಾ ನಿರ್ಮಿಸಿದ್ದರು. ಚಿತ್ರದಲ್ಲಿ ಅನುಷ್ಕಾ ಶರ್ಮಾ ಕೂಡ ನಟಿಸಿದ್ದರು. ಚಿತ್ರವು ಬಾಕ್ಸ್‌ಆಫೀಸ್‌ನಲ್ಲಿ ಬರೋಬ್ಬರಿ 421.25 ಕೋಟಿ ರೂ. ಗಳಿಸಿತು. ಕತ್ರಿನಾ ಕೈಫ್ ನಟಿಸಿರುವ ಅವರ ಮುಂದಿನ ಚಿತ್ರ 'ಟೈಗರ್ ಜಿಂದಾ ಹೈ'ಗಾಗಿ ಬರೋಬ್ಬರಿ 130 ಕೋಟಿ ರೂ. ಪಡೆದರು.
ಆದರೆ ಇಷ್ಟೆಲ್ಲಾ ಸಂಭಾವನೆಯನ್ನು ಪಡೆಯುವ ಮೊದಲು ಸಲ್ಮಾನ್ ಖಾನ್ ಶೌಚಾಲಯವನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತಿದ್ದರು. ಸಲ್ಮಾನ್ ಖಾನ್ ಬಿಗ್ ಬಾಸ್ ಒಟಿಟಿ 2ರ ಅಂತಿಮ ಹಂತದಲ್ಲಿ ಬಿಗ್ ಬಾಸ್ ಮನೆಯಲ್ಲಿ ಶೌಚಾಲಯಗಳನ್ನು ಸ್ವಚ್ಛವಾಗಿಟ್ಟಿದ್ದಕ್ಕಾಗಿ ಪೂಜಾ ಭಟ್ ಅವರನ್ನು ಶ್ಲಾಘಿಸಿದ್ದರು.
ಈ ಸಂದರ್ಭದಲ್ಲಿ ಅವರು ತಮ್ಮ ಬೋರ್ಡಿಂಗ್ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಮತ್ತು ಜೈಲಿನಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿದ್ದೆ ಎಂಬುದನ್ನು ಬಹಿರಂಗಪಡಿಸಿದರು. ಮಾತ್ರವಲ್ಲ ಯಾವುದೇ ಕೆಲಸ ಚಿಕ್ಕದಲ್ಲ ಎಂದು ತಿಳಿಸಿದರು.
ಸಲ್ಮಾನ್ ಖಾನ್ 1988ರಲ್ಲಿ 'ಬೀವಿ ಹೋ ತೋ ಐಸಿ' ಚಿತ್ರದ ಮೂಲಕ ಸಿನಿ ಕೆರಿಯರ್ ಆರಂಭಿಸಿದರು. ಈ ಚಿತ್ರ ಹಿಟ್ ಆಯಿತು. ಚಿತ್ರದಲ್ಲಿ ರೇಖಾ, ಫಾರೂಕ್ ಶೇಖ್ ಮತ್ತು ಬಿಂದು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು, ಸಲ್ಮಾನ್ ಚಿತ್ರದಲ್ಲಿ ಒಂದು ಸಣ್ಣ ಪಾತ್ರವನ್ನು ನಿರ್ವಹಿಸಿದ್ದರು. ಅದಕ್ಕಾಗಿ 11000 ರೂ. ಪಡೆದರು.
ಸಲ್ಮಾನ್ ಖಾನ್ ಈಗ ಮುಂಬರುವ ಚಿತ್ರ ಟೈಗರ್ 3ನೊಂದಿಗೆ ಪ್ರೇಕ್ಷಕರನ್ನು ಸೆಳೆಯಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಕೂಡ ನಟಿಸಿದ್ದಾರೆ. ನವೆಂಬರ್ 12ರಂದು ಸಿನಿಮಾ ಬಿಡುಗಡೆಯಾಗಲಿದೆ.