ಶಾಲೆಗೆ ಹೋಗಲು ಒಪ್ಪದ ಮೊಮ್ಮಗ, ಸ್ವತಃ ತಾನೇ ಶಾಲೆಗೆ ಬಿಟ್ಟು ಬರೋ ಮೂಲಕ ಸರಳತೆ ಮೆರೆದ ಸೂಪರ್ ಸ್ಟಾರ್ ರಜನಿಕಾಂತ್

First Published | Jul 26, 2024, 1:24 PM IST

ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ತಮ್ಮ ಸರಳತೆಗೆ ಹೆಸರುವಾಸಿಯಾಗಿದ್ದು, ಇದೀಗ ಶಾಲೆಗೆ ಹೋಗಲು ಒಪ್ಪದ ತಮ್ಮ ಮುದ್ದಿನ ಮೊಮ್ಮಗನನ್ನು ತಾವೇ ಸ್ವತಃ ಶಾಲೆಗೆ ಬಿಟ್ಟು ಬರುವ ಮೂಲಕ ಸರಳತೆ ಮೆರೆದಿದ್ದಾರೆ. 
 

ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ತಮಿಳು ನಟ ಸೂಪರ್ ಸ್ಟಾರ್ ರಜನಿಕಾಂತ್ (Superstar Rajinikanth), ಅದೆಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ಸಹ, ಯಾವಾಗಲೂ ಅವರು ತಮ್ಮ ಸರಳತೆಯಿಂದಾಗಿ ಮನೆಮಾತಾಗಿದ್ದಾರೆ. ರಜಿನಿಕಾಂತ್ ಸಿಂಪ್ಲಿಸಿಟಿಗೆ ಹೋಲಿಕೆ ಮಾಡೋಕೆ ಸಾಧ್ಯವಿಲ್ಲ, ನಿಜ ಜೀವನದಲ್ಲಿ ಅಷ್ಟೊಂದು ಸರಳ ಜೀವಿ ರಜನಿಕಾಂತ್. 
 

ಸಿನಿಮಾದ ರಜನಿಕಾಂತ್, ಸ್ಟೈಲ್, ಅಬ್ಬರದ ಫೈಟ್, ಡ್ಯಾನ್ಸ್ ಗೆ ಜನರು ಎದ್ದು ನಿಂತು ಸೀಟಿ ಹೊಡೆಯುತ್ತಾರೆ. ಆದರೆ ನಿಜ ಜೀವನದಲ್ಲಿ ಇವರು ಸಿನಿಮಾಕ್ಕೆ ತದ್ವಿರುದ್ಧವಾಗಿರುತ್ತಾರೆ. ಸಿಂಪಲ್ ಶರ್ಟ್ ಪ್ಯಾಂಟ್ ಅಥವಾ ವೇಸ್ಟಿ ಧರಿಸಿ, ಕಾಲಿಗೆ ಸಿಂಪಲ್ ಚಪ್ಪಲಿ ಧರಿಸಿ ನಡೆದಾಡುವ ಇವರನ್ನ ನೋಡಿದ್ರೆ ಜನರಿಗೆ ಅಚ್ಚರಿಯಾಗುತ್ತದೆ. 
 

Tap to resize

ವಯಸ್ಸು 73 ಆಗಿದ್ದರು ಇನ್ನೂ ಸಹ 25 ಹರೆಯದ ಎನರ್ಜಿ ಹೊಂದಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ ಕೆಲಸ ಮಾಡಿದವರೆಲ್ಲರೂ ನಟನ ಸಿಂಪ್ಲಿಸಿಟಿ ಮತ್ತು ಕೆಲಸದ ಮೇಲಿನ ಡೆಡಿಕೇಶನ್ ನ್ನು ಮೆಚ್ಚುವವರೇ ಆಗಿದ್ದಾರೆ. 
 

ಇನ್ನು ರಜನಿಕಾಂತ್ ಪರ್ಸನಲ್ ಲೈಫ್ ಬಗ್ಗೆ ಹೇಳೊದಾದ್ರೆ, ಇವರೊಬ್ಬ ಅಪ್ಪಟ ಫ್ಯಾಮಿಲಿ ಮ್ಯಾನ್ (perfect family man). ಇಬ್ಬರು ಹೆಣ್ಣು ಮಕ್ಕಳ ಮುದ್ದಿನ ಅಪ್ಪ. ಯಾವಾಗ್ಲೂ ತನ್ನ ಮಕ್ಕಳ ಏಳ್ಗೆಯಲ್ಲಿ ಜೊತೆಯಾಗಿ ನಿಂತು ಬೆಂಬಲಿಸುವ ಅಪ್ಪ. ತಮ್ಮ ಮಕ್ಕಳ, ಮೊಮ್ಮಕ್ಕಳ ವಿಷ್ಯದಲ್ಲಿ ಇವರು ಯಾವುದೇ ವಿಷಯಕ್ಕೂ ರಾಜಿ ಮಾಡಿಕೊಳ್ಳೊದಿಲ್ಲ. ಮಕ್ಕಳಿಗಾಗಿ ಏನು ಬೇಕಾದ್ರೂ ಮಾಡುವಂತಹ ಸೂಪರ್ ಸ್ಟಾರ್. 
 

ಇದೀಗ ರಜನಿಕಾಂತ್ ತಮ್ಮ ಮೊಮ್ಮಗಳಿಗಾಗಿ (grand child) ತಮ್ಮ ಸ್ಟಾರ್ ಪಟ್ಟ ಬಿಟ್ಟು ಕೇವಲ ತಾತನಾಗಿ ಸರಳತೆಯನ್ನು ಮೆರೆದಿದ್ದಾರೆ. ಶಾಲೆಗೆ ಹೋಗೋದಕ್ಕೆ ಒಪ್ಪದ ತಮ್ಮ ಮುದ್ದಿನ ಮೊಮ್ಮಗನನ್ನು ತಾವೇ ಪ್ರೀತಿಯಿಂದ ಶಾಲೆಯವರೆಗೆ ಹೋಗಿ, ತರಗತಿಯವರೆಗೂ ಹೋಗಿ ಬಿಟ್ಟು ಬಂದಿದ್ದಾರೆ ರಜನಿಕಾಂತ್. ಅವರು ಊರಿಗೆ ಸೂಪರ್ ಸ್ಟಾರ್ ಆಗಿದ್ದರೂ ತಮ್ಮ ಮೊಮ್ಮಗನಿಗೆ ಪ್ರೀತಿಯ ಸೂಪರ್ ಹೀರೋ ತಾತ ಆಗಿದ್ದಾರೆ. 
 

ರಜನಿಕಾಂತ್ ಅವರ ಎರಡನೇ ಮಗಳು ಸೌಂದರ್ಯ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಾತ ಮತ್ತು ಮೊಮ್ಮಗನ ಫೋಟೋಗಳನ್ನು ಶೇರ್ ಮಾಡಿದ್ದು, ನನ್ನ ಮಗ ಇವತ್ತು ಬೆಳಿಗ್ಗೆ ಶಾಲೆಗೆ ಹೋಗೋದಕ್ಕೆ ಒಪ್ಪಲಿಲ್ಲ. ಹಾಗಾಗಿ ಪ್ರೀತಿಯ ಸೂಪರ್ ಹೀರೋ ತಾತ ತಾವೇ ಸ್ವತಃ ಅವನನ್ನು ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿರೋದಾಗಿ ತಿಳಿಸಿದ್ದಾರೆ. 
 

ಅಷ್ಟೇ ಅಲ್ಲ ತನ್ನ ತಂದೆಯ ಪ್ರೀತಿಯನ್ನು ಹೊಗಳಿರುವ ಸೌಂದರ್ಯ ರಜನಿಕಾಂತ್ (Soundarya Raajinikanth). ಅದು ಆಫ್ ಸ್ಕ್ರೀನ್ ಆಗಿರಲಿ ಅಥವಾ ಆನ್ ಸ್ಕ್ರೀನ್ ಆಗಿರಲಿ, ಡಾರ್ಲಿಂಗ್ ಅಪ್ಪ ನೀವು ಎಲ್ಲಾ ಪಾತ್ರವನ್ನೂ ಸಹ ಅದ್ಭುತವಾಗಿ ನಿರ್ವಹಿಸುತ್ತೀರಿ ಎಂದು ಬರೆದುಕೊಂಡಿದ್ದಾರೆ. ಇದನ್ನು ಅಭಿಮಾನಿಗಳು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. 
 

Latest Videos

click me!