ರೆಡ್ ಸೀರೆ, ಮಾದಕ ನೋಟದಲ್ಲೇ ಹಾಟ್ ಆಗಿ ಕಾಣಿಸಿಕೊಂಡ ತಮನ್ನಾ ಭಾಟಿಯಾ

First Published | Jul 25, 2024, 5:50 PM IST

'ಸ್ತ್ರೀ 2' ಚಿತ್ರದ ತಮನ್ನಾ ಭಾಟಿಯಾ ಅವರ ಹೊಸ ಹಾಡು 'ಆಜ್ ಕಿ ರಾತ್' ಬಿಡುಗಡೆಯಾದಾಗಿನಿಂದ, ಮತ್ತೆ ಸುದ್ದಿಯಲ್ಲಿದ್ದಾರೆ ನಟಿ. ಈ ಹಾಡಿನ ಬಿಡುಗಡೆಗೆ ನಟಿ ಕೆಂಪು ಸೀರೆಯಂತಹ ಡ್ರೆಸ್ ಧರಿಸಿ ಬಂದಿದ್ದು ಸಖತ್ತಾಗಿ ಕಾಣಿಸಿಜೊಂಡಿದ್ದಾರೆ. 
 

ದಕ್ಷಿಣ ಭಾರತದ ಚಿತ್ರರಂಗದಿಂದ ಹಿಡಿದು, ಬಾಲಿವುಡ್ ವರೆಗೂ ಸಖತ್ ಫೇಮಸ್ ಆಗಿರುವ ತಮನ್ನಾ ಭಾಟಿಯಾ (Tamanna Bhatia) ಹೆಚ್ಚಾಗಿ ತಮ್ಮ ಲುಕ್ ನಿಂದಾಗಿ ಸದಾ ಸುದ್ದಿಯಲ್ಲಿರ್ತಾರೆ.  ಇವರು ತಮ್ಮ ಹೊಸ ಹೊಸ ಲುಕ್ ನಿಂದ ಜನರನ್ನ ಸೆಳಿತಾನೆ ಇರ್ತಾರೆ.  ಇನ್ನೂ ಎರಡು ದಿನಗಳಿಂದ ತಮನ್ನಾ 'ಸ್ತ್ರೀ 2' ಚಿತ್ರದ 'ಆಜ್ ಕಿ ರಾತ್' ಹಾಡಿಗೆ ಸಖತ್ ಬೋಲ್ಡ್ ಆಗಿ ನೃತ್ಯ ಮಾಡುವ ಮೂಲಕ ಫ್ಯಾನ್ಸ್ ಗಳ ಮನ ಗೆದ್ದಿದ್ದಾರೆ. 
 

ತಮ್ಮ ಆಜ್ ಕಿ ರಾತ್ ಹಾಡಿನ ಬಿಡುಗಡೆಗೆ ತಮನ್ನಾ ಕೆಂಪು ಸೀರೆ ಧರಿಸಿ ಬಂದಿದ್ದು, ಇವರ ಸೌಂದರ್ಯಕ್ಕೆ ಸೋಲದವರು ಯಾರೂ ಇಲ್ಲ ಅಂತಾನೆ ಹೇಳಬಹುದು . ತಮ್ಮ ರೆಡ್ ಸೀರೆ ಲುಕ್ ನ ಫೋಟೋಗಳನ್ನು ತಮನ್ನಾ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು, ಕೆಂಪು ಬಣ್ಣದ ಸೀರೆ ಜೊತೆ ಕೈಯಲ್ಲಿ ಗುಲಾಬಿ ಹಿಡಿದು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ನಟಿ. ಸೋಶಿಯಲ್ ಮೀಡೀಯಾದಲ್ಲಿ (social media) ತಮನ್ನಾ ಫೋಟೋಗಳನ್ನು ನೋಡಿ ಸ್ತ್ರೀ 2 ನಾಯಕಿ ಶ್ರದ್ಧಾ ಕಪೂರ್ ಕೂಡ "ಇಂತಹ ಸುಂದರ ಸ್ತ್ರೀಯನ್ನು ನಾನು ಯಾವತ್ತೂ ನೊಡೇ ಇಲ್ಲ ಎಂದಿದ್ದಾರೆ. 
 

Tap to resize

ಈ ಕಾರ್ಯಕ್ರಮಕ್ಕೆ ತಮನ್ನಾ ಭಾಟಿಯಾ ತೋರಣಿ ಸೀರೆ ಧರಿಸಿ ಬಂದಿದ್ದರು. ಅವರು ಡಿಸೈನರ್ ದಿಲ್ ಸುಖ್ ಆಮಿ ಕಲೆಕ್ಷನ್ ಅವರ ಸೀರೆ ಮತ್ತು ಬ್ಲೌಸ್ ಧರಿಸಿದ್ದು, ವಿವಿಧ ಪೋಸ್ ನಲ್ಲಿ ಐತಿಹಾಸಿಕ ಕಾಲದ ರಾಣಿಯಂತೆ ಕಂಗೊಳಿಸ್ತಿದ್ರು ತಮನ್ನಾ. ಡಿಸೈನರ್ ಸೈಟ್ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ನಟಿ ಧರಿಸಿದ್ದ ಕಾರ್ಸೆಟ್ ಶೈಲಿಯ ಬ್ಲೌಸ್ ಬೆಲೆ 46,500 ರೂ ಮತ್ತು ಸೀರೆಯ ಬೆಲೆ 79,500 ರೂ. ಎನ್ನಲಾಗುತ್ತಿದೆ. 
 

ಇತ್ತೀಚಿನ ದಿನಗಳಲ್ಲಿ ಕಾರ್ಸೆಟ್ ನ ಟ್ರೆಂಡ್ ಹೆಚ್ಚಾಗಿದೆ. ಕಾರ್ಸೆಟ್ ಸ್ಟೈಲ್ ಟ್ರೆಡಿಶನಲ್ ಮತ್ತು ವೆಸ್ಟರ್ನ್ ವೇರ್ ಜೊತೆಯೂ ತುಂಬಾನೆ ಚೆನ್ನಾಗಿ ಕಾಣಿಸುತ್ತೆ.  ತಮನ್ನಾ ಕಾರ್ಸೆಟ್ ಬ್ಲೌಸ್ ಧರಿಸಿದ್ದು. ಅದಕ್ಕೆ ಮ್ಯಾಚ್ ಆಗುವಂತಹ ಸೀರೆ ಧರಿಸಿದ್ದಾರೆ, ಈ ಸೀರೆಯ ಬಾರ್ಡರ್ ಗುಲಾಬಿ, ಹಳದಿ ಮತ್ತು ಸಿಲ್ವರ್ ದಾರದಿಂದ ಮಾಡಲಾಗಿದ್ದು, ಇದು ನಟಿಯ ಲುಕ್ ನ್ನು ಮತ್ತಷ್ಟು ಚೆನ್ನಾಗಿ ಕಾಣಿಸುವಂತೆ ಮಾಡಿದೆ. 
 

ತಮನ್ನಾ ಧರಿಸಿರೋ ರೆಡ್ ಸೀರೆ ಕೂಡ ವಿಶಿಷ್ಟವಾಗಿ ಡಿಸೈನ್ ಮಾಡಿದ್ದು, ಸೀರೆಯ ಕೆಳಭಾಗದಲ್ಲಿ, ಹಾರ್ಟ್ ಶೇಪ್ ನಲ್ಲಿ ಡಿಸೈನ್ ಮಾಡಲಾಗಿದೆ. ಅದರಲ್ಲಿ ಫ್ಲೋರಲ್ ಡಿಸೈನ್ ಮಾಡಲಾಗಿದೆ. ಸೀರೆಯ ಉಳಿದ ಭಾಗದಲ್ಲಿ ಗಿಡ, ಎಲೆಗಳ ಡಿಸೈನ್ ಮಾಡಲಾಗಿದೆ. ಬಾರ್ಡರ್ ಗೆ ಲೇಸ್ ನೊಂದಿಗೆ ಫೈನಲ್ ಟಚ್ ನೀಡಲಾಗಿದ್ದು, ಸಿಂಪಲ್ ಮತ್ತು ಎಲಿಗೆಂಟ್ ಸೀರೆಯಲ್ಲಿ ತಮನ್ನಾ ಅಪ್ಸರೆಯಂತೆ ಕಾಣಿಸ್ತಿದ್ದಾರೆ. 
 

ತಮ್ಮ ಸೀರೆಯನ್ನು ಮುಂಭಾಗದಿಂದ ಪ್ಲೀಟ್ ಮಾಡಿ ನಾರ್ಮಲ್ ಸೀರೆಯಂತೆ ಉಟ್ಟಿದ್ದು, ಪಲ್ಲುಗಳನ್ನ ಭುಜದ ಮೇಲೆ ಹಾಕೋ ಬದಲು ಡಿಫರೆಂಟ್ ಆಗಿ ಎರಡು ಕೈಗಳಲ್ಲಿ ದುಪಟ್ಟಾದಂತೆ ಹಿಡಿದುಕೊಂಡಿದ್ದಾರೆ.  ಇದು ನಟಿಗೆ ಡಿಫರೆಂಟ್ ಜೊತೆಗೆ ಬೋಲ್ಡ್ ಲುಕ್ ನೀಡಿದೆ. 
 

ತಮ್ಮ ಅದ್ಭುತ ಸೀರೆ ಲುಕ್ ಗೆ ಮ್ಯಾಚ್ ಮಾಡೊದಕ್ಕೆ ನಟಿ ಮಿನಿಮಲ್ ಜ್ಯುವೆಲ್ಲರಿ ಧರಿಸಿದ್ದಾರೆ. ಅದಕ್ಕಾಗಿ ನಟಿ ಶ್ರೀ ಪರ್ಮಣಿ ಜ್ಯುವೆಲ್ಸ್ ನ ರೂಬಿ ಡ್ರಾಪ್ ಇಯರಿಂಗ್ಸ್ ಮತ್ತು ಕೈಯಲ್ಲಿ ಸುಂದರವಾದ ಹೂವಿನ ಆಕಾರದ ಬ್ರೇಸ್ ಲೆಟ್ ಧರಿಸಿದ್ದು, ಅದರ ಮೇಲೆ ವಜ್ರ ಮತ್ತು ಪಚ್ಚೆ ಕಲ್ಲುಗಳನ್ನ ಕಾಣಬಹುದು. 
 

ಇನ್ನು ತಮನ್ನಾ ಮೇಕಪ್ ವಿಷ್ಯಕ್ಕೆ ಬಂದ್ರೆ ಆಕೆ ರೆಡ್ ಲಿಪ್ ಸ್ಟಿಕ್ ಜೊತೆಗೆ ಕ್ಲಾಸಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಣ್ಣುಗಳಿಗೆ ವಿಂಗ್ಸ್ ಐಲೈನರ್ ಹಾಕಿದ್ದು, ಮಿನಿಮಲ್ ಮೇಕಪ್ ನಲ್ಲಿ ಮಿಲ್ಕಿ ಬ್ಯೂಟಿ ಮಾದಕ ನೋಟ ಬೀರಿದ್ದು ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಜನರಂದೂ ನಟಿಯ ಅಂದ ಚೆಂದಕ್ಕೆ ಮನ ಸೋತಿದ್ದಾರೆ. 
 

Latest Videos

click me!