"ಒಂದು ಫುಲ್ ನೈಟ್‌ಗೆ......?" ರಿಪೋರ್ಟರ್‌ ಪ್ರಶ್ನೆಗೆ ಮಾಜಿ ನೀಲಿತಾರೆ ಸನ್ನಿ ಲಿಯೋನ್ ಮಾಡಿದ್ದೇನು?

Published : Feb 10, 2024, 04:44 PM IST

ಸೂರತ್: ಮಾದಕ ನಟಿ, ಮಾಜಿ ನೀಲಿತಾರೆ ಸನ್ನಿ ಲಿಯೋನ್ ಪಡ್ಡೆ ಹುಡುಗರ ಪಾಲಿನ ಆರಾಧ್ಯ ದೈವ. ಈ ಸನ್ನಿ ಲಿಯೋನ್‌ಗೆ  ಓರ್ವ ಪತ್ರಕರ್ತ ಬಹಿರಂಗವಾಗಿಯೇ ಒಂದು ಪ್ರಶ್ನೆ ಕೇಳಿ ತಬ್ಬಿಬ್ಬಾಗಿ ಹೋಗಿದ್ದರು. ಇದರ ಒಂದು ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ ನೋಡಿ..  

PREV
110
"ಒಂದು ಫುಲ್ ನೈಟ್‌ಗೆ......?" ರಿಪೋರ್ಟರ್‌ ಪ್ರಶ್ನೆಗೆ ಮಾಜಿ ನೀಲಿತಾರೆ ಸನ್ನಿ ಲಿಯೋನ್ ಮಾಡಿದ್ದೇನು?

ಮಾಜಿ ನೀಲಿತಾರೆ ಸನ್ನಿ ಲಿಯೋನ್ ಈ ಹಿಂದೆ ಹಲವಾರು ಅಡಲ್ಟ್ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯವಾಗಿದ್ದಾರೆ. ಇದೀಗ ನೀಲಿ ಸಿನಿಮಾಗಳಿಗೆ ಗುಡ್‌ಬೈ ಹೇಳಿ ಬಾಲಿವುಡ್‌ನಲ್ಲಿ ಹಾಟ್ ನಟನೆಯ ಮೂಲಕ ಸಿನಿ ತಾರೆಯರ ಮನ ಗೆದ್ದಿದ್ದಾರೆ.

210

ಮಳೆ ನಿಂತರೂ ತಕ್ಷಣಕ್ಕೆ ಮಳೆ ಹನಿ ನಿಲ್ಲೊಲ್ಲ ಎನ್ನುವಂತೆ, ಸನ್ನಿ ಲಿಯೋನ್ ಅವರು ನೀಲಿ ಜಗತ್ತಿಗೆ ಗುಡ್ ಬೈ ಹೇಳಿದ್ದರೂ, ಆಕೆಯನ್ನು ಆ ನೆರಳಿನಿಂದ ಹೊರಗೆ ನಿಂತು ನೋಡುವ ಮನಸ್ಥಿತಿ ಇನ್ನೂ ಜನರಲ್ಲಿ ಬಂದಿಲ್ಲ.

310

ಹೌದು, ಈ ಹಿಂದೆ 2016ರಲ್ಲಿ ಗುಜರಾತ್‌ನ ಸೂರತ್‌ನಲ್ಲಿ ರಾಷ್ಟ್ರೀಯ ವಾಹಿನಿಯ ಪತ್ರಕರ್ತನೊಬ್ಬ ಖಾಸಗಿ ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್‌ಗೆ ನೀವು ಒಂದು ರಾತ್ರಿಗೆ ಎಷ್ಟು ಚಾರ್ಜ್ ಮಾಡುತ್ತೀರಾ ಎಂದು ಕೇಳಿ ತಪರಾಕಿ ತಿಂದ ಘಟನೆ ನಡೆದದ್ದು ಬಹುತೇಕ ಮಂದಿಗೆ ಗೊತ್ತಿಲ್ಲ.

410

2016ರ ಮಾರ್ಚ್ 24ರಂದು ಹೋಳಿ ಹಬ್ಬದ ಸಂದರ್ಭದಲ್ಲಿ ಗುಜರಾತ್‌ನ ಸೂರತ್‌ನಲ್ಲಿ 'Play Holi with Sunny Leone'(ಸನ್ನಿ ಲಿಯೋನ್ ಜತೆ ಹೋಳಿ ಆಡಿ) ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

510

ಈ ಸಂದರ್ಭದಲ್ಲಿ ರಾಷ್ಟ್ರೀಯ ಮಾಧ್ಯಮವೊಂದರ ಪತ್ರಕರ್ತರೊಬ್ಬರು, ಸನ್ನಿ ಲಿಯೋನ್‌ಗೆ ನೀವು ರಾತ್ರಿ ಪ್ರೋಗ್ರಾಂಗೆ ಎಷ್ಟು ಚಾರ್ಜ್ ಮಾಡುತ್ತೀರಾ ಎಂದು ನಾಲಿಗೆ ಹರಿಬಿಟ್ಟಿದ್ದರು. ಇದನ್ನು ಕೇಳಿ ಸನ್ನಿ ಒಂದು ಕ್ಷಣ ಅವಕ್ಕಾಗಿ ಹೋದರು.

610

ಸಾಮಾನ್ಯವಾಗಿ ಪತ್ರಕರ್ತರ ಜತೆ ಉತ್ತಮ ಒಡನಾಟ ಹೊಂದಿರುವ ಸನ್ನಿ, ಪತ್ರಕರ್ತನ ಈ ಪ್ರಶ್ನೆಗೆ ಉರಿದು ಹೋಗಿದ್ದಾರೆ. ಹೋಟೆಲ್ ಕಾರಿಡಾರ್‌ನಲ್ಲಿ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಸನ್ನಿ ಹಿಂದೆ-ಮುಂದೆ ನೋಡದೇ ಕಪಾಳಮೋಕ್ಷ ಮಾಡಿದ್ದರು.

710

ಇದಾದ ಬಳಿಕ ಕಾರ್ಯಕ್ರಮದ ಆಯೋಜಕರ ಬಳಿ, ನಮ್ಮ ಸುತ್ತಮುತ್ತ ಜರ್ನಲಿಸ್ಟ್‌ಗಳು ಇಲ್ಲದೇ ಇದ್ದರೆ ಮಾತ್ರ ನಾವು ಪ್ರದರ್ಶನ ನೀಡುತ್ತೇನೆ ಎಂದು ಷರತ್ತು ಹಾಕಿದ್ದರು. ಇದಾದ ಬಳಿ ಸನ್ನಿ ಲಿಯೋನ್ ಸ್ಟೇಜ್‌ ಮೇಲೆ 15 ನಿಮಿಷಗಳ ಪ್ರೋಗ್ರಾಂ ನೀಡಿದ್ದರು.

810

ಈ ಘಟನೆಯ ಕುರಿತಂತೆ ಮಾತನಾಡಿದ ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್‌ , "ಸನ್ನಿ ಲಿಯೋನ್ ರಿಪೋರ್ಟರ್‌ಗೆ ಸರಿಯಾಗಿಯೇ ಮಾಡಿದ್ದಾರೆ. ಹೀಗಾಗಿ ನಾವು ಯಾವುದೇ ಕಂಪ್ಲೇಂಟ್ ನೀಡುತ್ತಿಲ್ಲ. ಈ ಕಾರ್ಯಕ್ರಮದ ಆಯೋಜಕರು ಕೂಡಾ ಕಾಲೇಜ್ ಮಕ್ಕಳಾಗಿರುವುದರಿಂದ ಅವರ ಭವಿಷ್ಯ ಹಾಳಾಗಬಾರದು ಎಂದು ನಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿಲ್ಲ. ಆದರೆ ಮತ್ತೊಮ್ಮೆ ಗುಜರಾತ್‌ಗೆ ಬರುವಾಗ ಸನ್ನಿ ಲಿಯೋನ್ ಖಂಡಿತವಾಗಿಯೂ ಸಾವಿರ ಬಾರಿ ಯೋಚಿಸಲಿದ್ದಾರೆ" ಎಂದು ಹೇಳಿದ್ದರು

910

ಇನ್ನು ಈ ಘಟನೆಯನ್ನು ಮುಚ್ಚಿಹಾಕುವಂತಹ ಕೆಲಸಗಳು ನಡೆದವು ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಕುರಿತಂತೆ ಮಿಡ್ ಡೇ ವೆಬ್‌ಸೈಟ್‌ ವರದಿಯನ್ನು ಸನ್ನಿ ಲಿಯೋನ್ ಸಾರಾಸಗಟಾಗಿ ತಳ್ಳಿ ಹಾಕಿದ್ದರು. 

1010

ಇದೊಂದು ಆಧಾರ ರಹಿತ ಸುಳ್ಳು. ಒಂದು ಸುದ್ದಿ ಬರೆಯುವ ಮುನ್ನ ಸರಿಯಾದ ಫ್ಯಾಕ್ಟ್ ಚೆಕ್ ಮಾಡಿ. ಸುಮ್ಮನೇ ಸುದ್ದಿ ಪ್ರಸಾರಕ್ಕಾಗಿ ಏನೋನೇ ಬರೆಯಬೇಡಿ ಎಂದು ಮಾಜಿ ನೀಲಿತಾರೆ ಸನ್ನಿ ಟ್ವೀಟ್ ಮಾಡಿ ಅಸಮಧಾನ ಹೊರಹಾಕಿದ್ದರು.

Read more Photos on
click me!

Recommended Stories