ವ್ಯಾಲೆಂಟೈನ್ಸ್ ಡೇ ಪಾರ್ಟಿಯಲ್ಲಿ ಗ್ಲಾಮರ್‌ಸ್ ಬಾಲಿವುಡ್‌ ತಾರೆಯರು

Published : Feb 09, 2024, 05:43 PM IST

ಇದೇ ತಿಂಗಳ 14ರಂದು ಆಚರಿಸುವ ಪ್ರೇಮಿಗಳ ದಿನ ಮುನ್ನವಾಗಿ ಲೈಫ್‌ಸ್ಟೈಲ್ ಏಷ್ಯಾ ಮ್ಯಾಗಜೀನ್‌ನ ವ್ಯಾಲೆಂಟೈನ್ಸ್ ಡೇ ಪಾರ್ಟಿಯನ್ನು  ಹಮ್ಮಿಕೊಂಡಿತ್ತು. ಈ ಸಮಯದಲ್ಲಿ ಬಾಲಿವುಡ್‌ನ ಆನೇಕ ಸೆಲೆಬ್ರಿಟಿಗಳು ಗ್ಲಾಮರಸ್ ಲುಕ್‌ನಲ್ಲಿ ಆಗಮಿಸಿದ್ದರು.  ಈ ವ್ಯಾಲೆಂಟೈನ್ಸ್ ಡೇ ಪಾರ್ಟಿಗಾಗಿ, ಸೆಲೆಬ್ರಿಟಿಗಳು ಹೆಚ್ಚಾಗಿ ತಮ್ಮ ಉಡುಗೆಗಳಿಗೆ ಕೆಂಪು, ಕಪ್ಪು, ಬಿಳಿ ಮತ್ತು ಮರೂನ್ ಬಣ್ಣಗಳನ್ನು ಆರಿಸಿಕೊಂಡರು. ಫ್ಯಾಷನ್ ಮತ್ತು  ಗ್ಲಾಮರ್ ಎರಡರ ಸಮ್ಮೇಳನ ಈ ಪಾರ್ಟಿಯಲ್ಲಿ ಕಂಡುಬಂದಿದ್ದು ಸೆಲೆಬ್ರೆಟಿಗಳ ಪೋಟೋಗಳು ಇಲ್ಲಿವೆ.  

PREV
18
ವ್ಯಾಲೆಂಟೈನ್ಸ್ ಡೇ ಪಾರ್ಟಿಯಲ್ಲಿ ಗ್ಲಾಮರ್‌ಸ್  ಬಾಲಿವುಡ್‌ ತಾರೆಯರು

ಸೋನಾಕ್ಷಿ ಸಿನ್ಹಾ ವ್ಯಾಲೆಂಟೈನ್ಸ್ ಡೇ ಪಾರ್ಟಿಯಲ್ಲಿ ಹಾಟ್‌ ರೆಡ್‌ ಪ್ಯಾಂಟ್‌ಸೂಟ್‌ನಲ್ಲಿ ತಮ್ಮ ಫ್ಯಾಶನ್ ಸೆನ್ಸ್ ಅನ್ನು ಪ್ರದರ್ಶಿಸಿದರು ಮತ್ತು ತನ್ನ ಸೊಗಸಾದ ನೋಟದಿಂದ ಎಲ್ಲರ ಗಮನವನ್ನು ಸೆಳೆದರು.

28

ಅವನೀತ್ ಕೌರ್ ಬೆರಗುಗೊಳಿಸುವ ಕೆಂಪು ಬಾಡಿ ಹಗಿಂಗ್‌ ಉದ್ದ ಉಡುಪಿನಲ್ಲಿ ತನ್ನ ಪರ್ಪೇಕ್ಟ್‌ ಫಿಗರ್‌ ಅನ್ನು ಪ್ರದರ್ಶಿಸಿದರು.  

38

ಪ್ರಜ್ಞಾ ಜೈಸ್ವಾಲ್‌ ತಮ್ಮ ಆತ್ಮವಿಶ್ವಾಸ ಮತ್ತು ಸ್ಟೈಲ್‌ನಿಂದ ಮಿಂಚಿದರು.  ಗ್ಲಿಟರ್ಸ್‌ನಿಂದ ಅಲಂಕೃತವಾದ ಆಕರ್ಷಕವಾದ ಚಿಕ್ಕ ಕಪ್ಪು ಉಡುಪಿನಲ್ಲಿ ಅವಳು ಎಲ್ಲರನ್ನೂ ತಮ್ಮತ್ತ ಸೆಳೆದರು.

48

ನಟ ಜಹೀರ್ ಇಕ್ಬಾಲ್ ವ್ಯಾಲೆಂಟೈನ್ಸ್ ಡೇ ಪಾರ್ಟಿಯನ್ನು ಸ್ಟೈಲಿಶ್ ಆಗಿ ಪ್ರವೇಶಿಸಿದರು, ಕಪ್ಪು ಪ್ಯಾಂಟ್ ಜೊತೆಗೆ ಕಪ್ಪು ಟಿ-ಶರ್ಟ್ ಅನ್ನು ಧರಿಸಿದ ನಟ  ಲುಕ್‌ ಸಖತ್‌   ಕೂಲ್‌ ಆಗಿತ್ತು.

58

 ಅತ್ಯಾಧುನಿಕ ಕೆಂಪು ಗೌನ್‌ನಲ್ಲಿ  ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡ  ಅಂಶುಲಾ ಕಪೂರ್  ತಮ್ಮ  ಫ್ಯಾಶನ್ ಸೆನ್ಸ್ ಅನ್ನು ಪ್ರದರ್ಶಿಸಿದ್ದಾರೆ.

68

ಇಂಟರ್‌ನೆಟ್ ಸೆನ್ಸೇಷನ್ ಎಂದು ಖ್ಯಾತಿ ಗಳಿಸಿರುವ ಓರಿ, ವ್ಯಾಲೆಂಟೈನ್ಸ್ ಡೇ ಪಾರ್ಟಿಯಲ್ಲಿ ಡೆನಿಮ್ ಪ್ಯಾಂಟ್‌ನೊಂದಿಗೆ ಗುಲಾಬಿ ಬಣ್ಣದ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು.

78

ಫಿಟ್‌ನೆಸ್‌ ಫ್ರೀಕ್‌  ಕೃಷ್ಣ ಶ್ರಾಫ್ ತಮ್ಮ ಐಕಾನಿಕ್‌  ಲುಕ್‌ನಿಂದ ಎಲ್ಲರನ್ನೂ  ಆಕರ್ಷಸಿದರು.  ದಿವಾ ಬಿಳಿ ಪ್ಯಾಂಟ್‌ಗೆ ಹೊಂದಿಕೆಯಾಗುವ ಕೆಂಪು ಕ್ರಾಪ್ ಟಾಪ್ ಮತ್ತು   ಜಾಕೆಟ್ ಅನ್ನು ಧರಿಸಿದ್ದರು.

88

ಕಿರುತೆರೆ ನಟಿ ಹಾಗೂ ರೂಪದರ್ಶಿ ಡೊನಾಲ್ ಬಿಶ್ತ್ ಮರೂನ್ ಬಣ್ಣದ ಟ್ಯೂಬ್ ಡ್ರೆಸ್ ಧರಿಸಿ ಪಾರ್ಟಿಗೆ ಆಗಮಿಸಿದ್ದರು. ಈ ಟ್ಯೂಬ್ ಡ್ರೆಸ್‌ನಲ್ಲಿ ಡೊನಾಲ್ ಅವರ   ಗ್ಲಾಮರ್ ಎಲ್ಲರ ಗಮನ ಸೆಳೆಯಿತು

Read more Photos on
click me!

Recommended Stories