ಮೊದಲನೇಯದಾಗಿ ಪುಷ್ಕಕ ವಿಮಾನ, ಕಮಲ್ ಹಾಸನ್ ನಟನೆಯ 1987 ರಲ್ಲಿ ತೆರೆಗೆ ಬಂದ ಈ ಪುಷ್ಪಕ ವಿಮಾನವನ್ನು ನಿರ್ದೇಶನ ಮಾಡಿದ್ದು, ಸಂಗೀತಂ ಶ್ರೀನಿವಾಸ ರಾವ್, ಮೂಕಿ ಸಿನಿಮಾ ಎಂದೇ ಖ್ಯಾತಿ ಗಳಿಸಿರುವ ಈ ಸಿನಿಮಾದಲ್ಲಿ ಯಾವುದೇ ಡೈಲಾಗ್‌ಗಳಿಲ್ಲ, ಆದರೆ ಬೆಂಗಳೂರನ್ನು ಈ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ತೋರಿಸಲಾಗಿದೆ.
2ನೇಯದಾಗಿ ಬೆಂಗಳೂರು ಡೇಸ್, ಅಂಜಲಿ ಮೆನನ್ ನಟನೆಯ ಈ ಮಲೆಯಾಳಂ ಸಿನಿಮಾದ 2014ರಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾ, ಬೆಂಗಳೂರು ಜನಜೀವನ ಹಾಗೂ ಬೆಂಗಳೂರಿನಲ್ಲಿ ಬಂದು ನೆಲೆಸಿದ ಕೇರಳದ ಸೋದರ ಸಂಬಂಧಿಗಳ ಜೀವನದ ಕತೆ ಇರುವ ಸಿನಿಮಾ ಇದು.
ಗೋರಿ ತೆರೆ ಪ್ಯಾರ್ ಮೇ, ಪುನೀತ್ ಮಲ್ಹೋತ್ರಾ ನಿರ್ದೇಶನದ 2013ರಲ್ಲಿ ತೆರೆಕಂಡ ಈ ಹಿಂದಿ ಸಿನಿಮಾದಲ್ಲೂ ಬೆಂಗಳೂರು ಎದ್ದು ಕಾಣುತ್ತದೆ. ಬಾಲಿವುಡ್ ನಟರಾದ ಇಮ್ರಾನ್ ಖಾನ್, ಕರೀನಾ ಕಪೂರ್ ಶ್ರದ್ಧಾ ಕಪೂರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಬಾಲಿವುಡ್ ನಟ ಆಮೀರ್ ಖಾನ್ ಹಾಗೂ ಜೂಹಿ ಚಾವ್ಲಾ ನಟನೆಯ 1988ರಲ್ಲಿ ತೆರೆಕಂಡ ಖಾಯಮಾತ್ ಸೇ ಖಾಯಮಾತ್ ತಕ್ ಸಿನಿಮಾದಲ್ಲೂ ಅಂದಿನ ಬೆಂಗಳೂರಿನ ಸೌಂದರ್ಯವನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ.
ಅಮಿತಾಭ್ ಬಚ್ಚನ್, ಧರ್ಮೇಂದ್ರ, ಹೇಮಾ ಮಾಲಿನಿ ನಟನೆಯ 1975ರಲ್ಲಿ ತೆರೆಕಂಡ ಶೋಲೆ ಸಿನಿಮಾದಲ್ಲಿ ಬೆಂಗಳೂರು ಸುತ್ತಮುತ್ತಲ ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ. ರಮೇಶ್ ಸಿಪ್ಪಿ ನಿರ್ದೇಶನದ ಈ ಸಿನಿಮಾ ಅಂದಿನ ಕಾಲದಲ್ಲಿ ಸೂಪರ್ ಹಿಟ್ ಆಗಿತ್ತು.
3 ಈಡಿಯೆಟ್ಸ್, ರಾಜ್‌ಕುಮಾರ್ ಹಿರಾನಿ ನಿರ್ದೇಶನದ 2009ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿಯೂ ನೀವು ಬೆಂಗಳೂರು ನಗರವನ್ನು ಕಣ್ತುಂಬಿಕೊಳ್ಳಬಹುದು. ಆಮೀರ್ ಖಾನ್, ಆರ್ ಮಾಧವನ್, ಕರೀನಾ ಕಪೂರ್, ಶರ್ಮನ್ ಜೋಷಿ ಈ ಸಿನಿಮಾದ ಪ್ರಮುಖ ತಾರಾಗಣದಲ್ಲಿದ್ದಾರೆ.
ಪಲ್ಲವಿ ಅನುಪಲ್ಲವಿ, ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ 1983ರಲ್ಲಿ ತೆರೆಕಂಡ ಪಲ್ಲವಿ ಅನುಪಲ್ಲವಿ ಸಿನಿಮಾದಲ್ಲೂ ನಾವು ಆ ಕಾಲದ ಬೆಂಗಳೂರನ್ನು ನೋಡಬಹುದು. ಕನ್ನಡದ ಈ ಸಿನಿಮಾದಲ್ಲಿ ಬಾಲಿವುಡ್ ನಟ ಅನಿಲ್‌ಕಪೂರ್ ಹಾಗೂ ಲಕ್ಷ್ಮಿ ನಟಿಸಿದ್ದಾರೆ.
ಕೂಲಿ, ಮನಮೋಹನ್ ದೇಸಾಯಿ ನಿರ್ದೇಶನದ ಈ ಬಾಲಿವುಡ್ ಸಿನಿಮಾದಲ್ಲೂ ಬೆಂಗಳೂರು ನಗರವನ್ನು ಕಾಣಬಹುದು, ಅಮಿತಾಭ್ ಬಚ್ಚನ್ ರಿಷಿ ಕಪೂರ್ ಅವರಿದ್ದ ಈ ಸಿನಿಮಾ 1983ರಲ್ಲಿ ತೆರೆ ಕಂಡು ಸೂಪರ್ ಹಿಟ್ ಆಗಿತ್ತು.
ಕೊನೆಯದಾಗಿ ಮೇಡ್ ಇನ್ ಬೆಂಗಳೂರು, ಪ್ರದೀಪ್ ಶಾಸ್ತ್ರಿ ನಿರ್ದೇಶನ 2022ರಲ್ಲಿ ತೆರೆಕಂಡ ಸಿನಿಮಾ ಇದು, ಸಾವಿರಾರು ಸ್ಟಾರ್ಟ್‌ಅಪ್‌ಗಳಿಗೆ ನೆರಳಾದ ಬೆಂಗಳೂರಿನ ಕತೆಯನ್ನು ಹೊಂದಿದೆ. ಪ್ರಕಾಶ್ ಬೆಳವಾಡಿ, ಸುಧಾ ಬೆಳವಾಡಿ ಸೇರಿದಂತೆ ಅನೇಕ ಖ್ಯಾತ ಕನ್ನಡದ ನಟರು ನಟಿಸಿದ್ದಾರೆ.