Sunny Leone Birthday; ಮಾದಕ ನಟಿ ಸನ್ನಿ ಲಿಯೋನ್ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ

Published : May 13, 2022, 11:53 AM IST

ಬಾಲಿವುಡ್‌ನ ಹಾಟ್ ಆಂಡ್ ಬೋಲ್ಡ್ ನಟಿ ಸನ್ನಿಲಿಯೋನ್‌ಗೆ ಇಂದು (ಮೇ 13) ಹುಟ್ಟುಹಬ್ಬದ ಸಂಭ್ರಮ. ಮಾಜಿ ನೀಲಿ ತಾರೆಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು ಶುಭಾಶಯ ತಿಳಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸನ್ನಿಲಿಯೋನ್ ಫೋಟೋ ಶೇರ್ ಮಾಡಿ ಅಭಿಮಾನಿಗಳು ಪ್ರೀತಿಯ ವಿಶ್ ಮಾಡುತ್ತಿದ್ದಾರೆ.

PREV
19
Sunny Leone Birthday; ಮಾದಕ ನಟಿ ಸನ್ನಿ ಲಿಯೋನ್ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ

ಬಾಲಿವುಡ್‌ನ ಹಾಟ್ ಆಂಡ್ ಬೋಲ್ಡ್ ನಟಿ ಸನ್ನಿಲಿಯೋನ್‌ಗೆ ಇಂದು (ಮೇ 13) ಹುಟ್ಟುಹಬ್ಬದ ಸಂಭ್ರಮ. ಮಾಜಿ ನೀಲಿ ತಾರೆಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು ಶುಭಾಶಯ ತಿಳಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸನ್ನಿಲಿಯೋನ್ ಫೋಟೋ ಶೇರ್ ಮಾಡಿ ಅಭಿಮಾನಿಗಳು ಪ್ರೀತಿಯ ವಿಶ್ ಮಾಡುತ್ತಿದ್ದಾರೆ. ಭಾರತ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ ಸನ್ನಿ ಲಿಯೋನ್.

 

29

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ಮೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪ್ರೇಕ್ಷಕರ ಮುಂದೆ ಬಂದ ಸನ್ನಿ ಬಳಿಕ ಭಾರತದಲ್ಲಿ ಖ್ಯಾತಿಗಳಿಸಿದರು. ಸನ್ನಿ ಲಿಯೋನ್ ನಟ ಡೇನಿಯಲ್ ವೆಬರ್ ಅವರನ್ನು ವಿವಾಹವಾಗಿದ್ದಾರೆ. ಮೂರು ಮಕ್ಕಳ ತಾಯಿ ಕೂಡ ಹೌದು. ನಿಶಾ, ಆಶರ್ ಮತ್ತು ನೂರ್ ಮಕ್ಕಳ ಪೋಷಕರಾಗಿದ್ದಾರೆ. ಮೂವರು ಮಕ್ಕಳನ್ನು ಸನ್ನಿ ಲಿಯೋನ್ ದಂಪತಿ ದತ್ತು ಪಡೆದಿದ್ದಾರೆ.

 

39

ಸನ್ನಿಲಿಯನ್ ಸಿಖ್ ಕುಟುಂಬದಲ್ಲಿ ಜನಿಸಿದ ಹೆಣ್ಣುಮಗಳು. ಕರಂಜಿತ್ ಕೌರ್ ಆಗಿ ಕೆನಡಾದಲ್ಲಿ ಜನಿಸಿದರು. ಇದೀಗ ಭಾರತದ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

 

49

ಸನ್ನಿ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದಾಗಲೇ ನರ್ಸ್ ಆಗಬೇಕೆಂದು ಓದುತ್ತಿದ್ದರು. ನಂತರ ಸನ್ನಿ ಹೆಸರಿನ ಜೊತೆಗೆ ಲಿಯೋನ್ ಸೇರಿಕೊಂಡು ಸನ್ನಿ ಲಿಯೋನ್ ಆಗಿ ಗುರುತಿಸಿಕೊಂಡರು.

 

59

ಸನ್ನಿ ಲಿಯೋನ್‌ಗೆ ತಿನ್ನುವುದು ಎಂದರೆ ತುಂಬಾ ಇಷ್ಟ. ಆಹಾರ ಪ್ರಿಯೆ ಸನ್ನಿ ಲಿಯೋನ್ ದೆಹಲಿ ಮತ್ತು ಮುಂಬೈ ಬೀದಿಯಲ್ಲಿ ಚಾಟ್ಸ್ ಗಳನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಿರುತ್ತಾರೆ. ಚಾಕೊಲೇಟ್ ಎಂದೆರೆ ಕೂಡ ತುಂಬಾ ಇಷ್ಟಪಡುತ್ತಾರೆ.

 

69

ಪ್ರಾಣಿಗಳೆಂದರೆ ತುಂಬಾ ಇಷ್ಟಪಡುವ ಸನ್ನಿ ಲಿಯೋನ್ ಪ್ರಾಣಿ ಹಕ್ಕುಗಳ ಬೆಂಬಲಿಗರಾಗಿದ್ದಾರೆ. ಇನ್ನು ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಸನ್ನಿ ತನ್ನ ಚಾರಿಟಿ ಮೂಲಕ ಸಹಾಯ ಹಸ್ತ ಚಾಚುತ್ತಿದ್ದಾರೆ.

 

79

ನಟಿ ಸನ್ನಿ ಲಿಯೋನ್ 2016ರಲ್ಲಿ ತನ್ನದೇ ಆದ ಮೊಬೈಲ್ ಅಪ್ಲಿಕೇಷನ್ ಪ್ರಾರಂಭ ಮಾಡಿದರು. ತನ್ನದೇ ಆದ ಮೊಬೈಲ್ ಅಪ್ಲಿಕೇಷನ್ ಪ್ರಾರಂಭ ಮಾಡಿದ ಮೊದಲ ಭಾರತೀಯ ಸೆಲೆಬ್ರಿಟಿಯಾಗಿದ್ದಾರೆ.

 

89

ಸನ್ನಿಲಿಯೋನ್ ಅವರ ನೆಚ್ಚಿನ ಬಾಲಿವುಡ್ ಕಲಾವಿದರೆಂದರೆ ಮಾಧುರಿ ದೀಕ್ಷಿತ್, ಆಮೀರ್ ಖಾನ್, ಸೋನಮ್ ಕಪೂರ್ ಮತ್ತು ರಣವೀರ್ ಸಿಂಗ್. ಬಾಲಿವುಡ್ ಎಂದರೆ ತುಂಬಾ ಇಷ್ಟ ಪಡುವ ಸನ್ನಿ ಲಿಯೋನ್ ಬಾಲಿವುಡ್ ಸ್ಟಾರ್ ಗಳನ್ನು ಇಷ್ಟಪಡುತ್ತಾರೆ.

 

99

ಸನ್ನಿ ಲಿಯೋನ್ ಬಗ್ಗೆ 2016ರಲ್ಲಿ ಸಿನಿಮಾ ನಿರ್ದೇಶಕ ದಿಲೀಪ್ ಮೆಹ್ತಾ ಅವರು ಸಾಕ್ಷ್ಯಚಿತ್ರವನ್ನು ಮಾಡಿದ್ದರು. ಟೊರೊಂಟೊ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತು. ಆದರೆ ಭಾರತದಲ್ಲಿ ಇದನ್ನು ಬಿಡುಗಡೆ ಮಾಡಲು ಸನ್ನಿ ಲಿಯೋನ್ ಒಪ್ಪಿಕೊಂಡಿಲ್ಲ.

 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories