ಹೀರಾ ಮಣಿ ಪಾಕಿಸ್ತಾನದ 33 ವರ್ಷ ನಟಿ. ಈಕೆ ತನ್ನ ಸಹನಟ ಸಲ್ಮಾನ್ ಸಾಕಿಬ್ ಅವರನ್ನು 2008 ರಲ್ಲಿ ಕೇವಲ 19 ನೇ ವಯಸ್ಸಿನಲ್ಲಿ ವಿವಾಹವಾದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹೀರಾ ಅನೇಕ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಪಗ್ಲಿ, ಮೇರಾ ಖುದಾ ಜಾನೆ, ಬಂದಿಶ್, ದೋ ಬೋಲ್, ಮೇರೆ ಪಾಸ್ ತುಮ್ ಹೋ, ಮೇರಿ ತೇರಿ ಕಹಾನಿ, ಜಬ್ ವೀ ವೆಡ್, ಫಿರಾಕ್, ಪ್ರೀತ್ ನಾ ಕರಿಯೋ ಕೋಯಿ ಮುಂತಾದ ಶೋಗಳಲ್ಲಿ ಕೆಲಸ ಮಾಡಿದ್ದಾರೆ.