1996 ಮತ್ತು 2000 ರ ನಡುವೆ ಅಂದರೆ ನಾಲ್ಕು ವರ್ಷಗಳಲ್ಲಿ ಅವರು ಏಕ್ ಥಾ ರಾಜಾ, ಕೃಷ್ಣ, ಶಾಸ್ತ್ರ, ಸಪೂತ್, ಬಾರ್ಡರ್ (Border), ಪೃಥ್ವಿ, ಭಾಯಿ, ಧಾಲ್, ಕಹಾರ್, ವಿನಾಶಕ್, ಆಕ್ರೋಷ್, ಹಮ್ಸೆ ಭರ್ತೆ ಕೌನ್, ಬಡೇ ದಿಲ್ವಾಲಾ, ಕ್ರೋಧ್ ಹೇರಾ ಫೇರಿ, ರೆಫ್ಯೂಜಿ, ಧಾಡ್, ಆಗಾಜ್ ಜಂಗಲ್ ನಂತಹ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈ ಪೈಕಿ ಬಾರ್ಡರ್ ಬ್ಲಾಕ್ ಬಸ್ಟರ್ ಆಗಿದ್ದು, 39.46 ಕೋಟಿ ಗಳಿಸಿದೆ. ಹೇರಾ ಫೇರಿ ಮತ್ತು ಧಡ್ಕನ್ ಸರಾಸರಿ ಮತ್ತು ಉಳಿದ ಎಲ್ಲಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ನೆಲ ಕಚ್ಚಿದವು.