ಮಲೈಕಾ ಅರೋರಾ ಮಾತ್ರವಲ್ಲ ಅವರ ಮನೆ ಕೂಡ ಕ್ಲಾಸಿ ಮತ್ತು ಸ್ಟೈಲಿಶ್‌

First Published | Nov 24, 2022, 4:57 PM IST

ಮಲೈಕಾ ಅರೋರಾ (Malaika Arora) ಈ ದಿನಗಳಲ್ಲಿ ತಮ್ಮ ರಿಯಾಲಿಟಿ ಸರಣಿ ಮೂವಿಂಗ್ ಇನ್ ವಿತ್ ಮಲೈಕಾ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಈ ಶೋನ  ಚಿತ್ರೀಕರಣವೂ ಆರಂಭವಾಗಿದ್ದು, ಈ ಚಿತ್ರೀಕರಣದ ವೇಳೆಯೇ ಮಲೈಕಾ ಅವರ ಐಷಾರಾಮಿ ಮನೆಯ ದರ್ಶನವೂ ಆಗಿದೆ. ಮಲೈಕಾ ಅವರ ಐಷಾರಾಮಿ ಮನೆಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಮಲೈಕಾ ಅರೋರಾ ಅವರು ತಮ್ಮ ಮೊದಲ ಡಿಜಿಟಲ್ ಕಾರ್ಯಕ್ರಮದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ ಅದರಲ್ಲಿ ಅವರ ಐಷಾರಾಮಿ ಮನೆಯ ಒಳಗಿನ ನೋಟವನ್ನು ಸಹ ತೋರಿಸಲಾಗಿದೆ.

ಈ ಕಾರ್ಯಕ್ರಮದ ಬಗ್ಗೆ ಮಲೈಕಾ ಅವರು ತುಂಬಾ ಉತ್ಸುಕರಾಗಿದ್ದಾರೆ. ಮೂವಿಂಗ್ ಇನ್ ವಿತ್ ಮಲೈಕಾ ಬಿಡುಗಡೆಗೂ ಮುನ್ನ ತನ್ನ ಮನೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Tap to resize

ಮಲೈಕಾ ಅರೋರಾ ಅವರ ಮನೆಯು ಒಳಗಿನಿಂದ ಸೂಪರ್ ಕ್ಲಾಸಿ ಮತ್ತು ಸೊಗಸಾಗಿದೆ. ಅವರು ತಮ್ಮ ಮನೆಯನ್ನು ಸೊಗಸಾದ ಹ್ಯಾಂಗಿಂಗ್‌ಗಳು ಮತ್ತು ಕ್ಲಾಸಿ ಪೀಠೋಪಕರಣಗಳಿಂದ ಅಲಂಕರಿಸಿದ್ದಾರೆ. ಅವರು ತಮ್ಮ ಮನೆಯ ಪ್ರತಿಯೊಂದು ಮೂಲೆಯನ್ನು ಹೂವಿನ ಕುಂಡಗಳು ಮತ್ತು ಇತರ ಅಲಂಕಾರಗಳಿಂದ ಅಲಂಕರಿಸಿದ್ದಾರೆ.

 ಅವರ ಡೈನಿಂಗ್ ಹಾಲ್ (Dining Hall) ಕೂಡ ತುಂಬಾ ಐಷಾರಾಮಿಯಾಗಿದೆ. ಮಲೈಕಾ ಅರೋರಾ ತನ್ನ ಮಲಗುವ ಕೋಣೆಗೆ ಸರಳ ನೋಟವನ್ನು ನೀಡಿದ್ದಾರೆ. ಗೋಡೆಗಳಿಗೆ ಲೈಟ್ ಕಲರ್ ಬಳಸಲಾಗಿದ್ದು, ಅದಕ್ಕೆ ಹೊಂದುವ ಬಣ್ಣದ ಕರ್ಟನ್ (Curtain) ಗಳನ್ನು ಕೂಡ ಆಳವಡಿಸಿದ್ದಾರೆ.

ಮಲೈಕಾ ಅರೋರಾ ತಮ್ಮ ಹೆಸರಿನ ನೇಮ್‌ಪ್ಲೇಟ್‌ ಅನ್ನು ಮನೆಯ ಪ್ರವೇಶ ದ್ವಾರದ (Entrance Door) ಮೇಲೆ ತುಂಬಾ ಸ್ಟೈಲಿಶ್‌ ಆಗಿ ಬರೆಸಿದ್ದಾರೆ. ಮನೆಯ ಪ್ರತಿ ಮೂಲೆಯನ್ನು ಮಲೈಕಾ ಬಹಳ ಕಾಳಜಿಯಿಂದ ಡೇಕೋರೇಟ್‌ ಮಾಡಿದ್ದಾರೆ.

ಅವರ ಮನೆಯ ಅಡುಗೆಮನೆಯು ಬೂದು-ನೀಲಿ ಬಣ್ಣದ ಥೀಮ್‌ನಲ್ಲಿದೆ. ಇದು ಬಹಳಷ್ಟು ಕಪಾಟುಗಳನ್ನು ಹೊಂದಿದೆ ಮತ್ತು ವಿಶಾಲವಾಗಿದೆ.

ಮಲೈಕಾ ಅವರ ಶೋ ಮೂವಿಂಗ್ ಇನ್ ವಿತ್ ಮಲೈಕಾದಲ್ಲಿ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ . ಈ ಕಾರ್ಯಕ್ರಮದಲ್ಲಿ ಫರಾ ಖಾನ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಮುಂದಿನ ತಿಂಗಳ 5 ರಿಂದ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಮೂವಿಂಗ್ ಇನ್ ವಿತ್ ಮಲೈಕಾ ಸೋಮವಾರದಿಂದ ಗುರುವಾರದವರೆಗೆ ಸ್ಟ್ರೀಮ್‌ ಆಗಲಿದೆ.

Latest Videos

click me!