Suhani Bhatnagar: ಆಮೀರ್‌ ಖಾನ್‌ 'ದಂಗಲ್‌' ನಟಿ ಸಾವು..ಔಷಧಿಯ ಅಡ್ಡ ಪರಿಣಾಮ ಕಾರಣ?

Published : Feb 17, 2024, 03:05 PM ISTUpdated : Feb 17, 2024, 03:30 PM IST

ಆಮೀರ್ ಖಾನ್ (Aamir Khan)  ಅವರ 'ದಂಗಲ್'  (Dangal) ಚಿತ್ರದಲ್ಲಿ ಯುವ ಬಬಿತಾ ಫೋಗಟ್   ಪಾತ್ರವನ್ನು ನಿರ್ವಹಿಸಿದ್ದ ಸುಹಾನಿ ಭಟ್ನಾಗರ್ (Suhani Bhatnagar) 19 ನೇ ವಯಸ್ಸಿನಲ್ಲಿ ನಿಧನರಾಗಿದ್ದ ಸುದ್ದಿ ಹೊರಬಿದ್ದಿದೆ. ಯುವ ನಟಿ ಅಕಾಲಿಕ ಸಾವಿನ ಸುದ್ದಿ ಅಭಿಮಾನಿಗಳಿಗೆ  ಶಾಕ್‌ ನೀಡಿದೆ. ಇವರ ಸಾವಿಗೆ ಬಳಸುತ್ತಿದ್ದ ಔಷಧಿಯ  ಅಡ್ಡ ಪರಿಣಾಮ ಕಾರಣ ಎನ್ನಲಾಗಿದೆ.

PREV
18
Suhani Bhatnagar: ಆಮೀರ್‌ ಖಾನ್‌ 'ದಂಗಲ್‌' ನಟಿ ಸಾವು..ಔಷಧಿಯ ಅಡ್ಡ ಪರಿಣಾಮ ಕಾರಣ?

ಯುವ ಬಬಿತಾ ಫೋಗಟ್ ಪಾತ್ರದಲ್ಲಿ ನಟಿಸಿದ್ದ ಅಮೀರ್ ಖಾನ್ ಅವರ ದಂಗಲ್ ಸಹನಟಿ ಸುಹಾನಿ ಭಟ್ನಾಗರ್ 19 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

28

ಕೆಲ ಸಮಯದ ಹಿಂದೆ ಸುಹಾನಿ ಭಟ್ನಾಗರ್ ಅವರ ಕಾಲಿನ ಮೂಳೆ ಮುರಿತವಾಗಿದ್ದು, ಚಿಕಿತ್ಸೆಗಾಗಿ ಅವರು ಬಳಸುತ್ತಿದ್ದ ಔಷಧಗಳು ಅಡ್ಡ ಪರಿಣಾಮ ಬೀರಿ ಆಕೆಯ ಹಠಾತ್ ಸಾವಿಗೆ ಕಾರಣವಾಯಿತು ಎನ್ನಲಾಗಿದೆ. 

38
Suhani Bhatnagar

ಆಮೀರ್ ಖಾನ್ ಅವರ ಬ್ಲಾಕ್ಬಸ್ಟರ್ ಚಿತ್ರ 'ದಂಗಲ್' ನಲ್ಲಿ ನಟಿಸಿದ್ದ ಸುಹಾನಿ ಭಟ್ನಾಗರ್‌ಗೆ ಕೇವಲ 19 ವರ್ಷ. ಈ ಸುದ್ದಿ ಆಕೆಯ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.
 

48
Suhani Bhatnagar

ಸುಹಾನಿ ಭಟ್ನಾಗರ್ ಅವರ ಸಾವಿಗೆ ನಿಖರವಾದ ಕಾರಣ ತಕ್ಷಣವೇ ತಿಳಿದುಬಂದಿಲ್ಲವಾದರೂ, ಆಕೆಯ ದೇಹದಾದ್ಯಂತ ದ್ರವದ ಶೇಖರಣೆಯೇ ಕಾರಣ ಎಂದು  ಹೇಳಲಾಗುತ್ತಿದೆ. 

58
Suhani Bhatnagar

ಮೂಲಗಳ ಪ್ರಕಾರ, ಸುಹಾನಿ ಅಪಘಾತಕ್ಕೆ ಒಳಗಾಗಿದ್ದರು ಮತ್ತು ಕಾಲು ಮುರಿತಕ್ಕೆ ಒಳಗಾಗಿದ್ದರು. ಆಕೆಗೆ ಸೂಚಿಸಿದ ಔಷಧಿಗಳು ಆಕೆಯ ಮೇಲೆ ಅಡ್ಡ ಪರಿಣಾಮಗಳನ್ನು ಬೀರಿದ್ದು, ಆಕೆಯ ದೇಹದಲ್ಲಿ ನಿಧಾನವಾಗಿ ದ್ರವದ ಶೇಖರಣೆ ಪ್ರಾರಂಭವಾಯಿತು ಎಂದು ವರದಿಗಳು ತಿಳಿಸಿವೆ. 

68
Suhani Bhatnagar

ಅವರು ಸ್ವಲ್ಪ ಸಮಯದಿಂದ ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಶನಿವಾರ ಫರಿದಾಬಾದ್‌ನಲ್ಲಿ ಆಕೆಯ ಅಂತಿಮ ವಿಧಿವಿಧಾನಗಳು ನಡೆಯಲಿವೆ. 

78

ದಂಗಲ್‌ನಲ್ಲಿ ಕಿರಿಯ ಬಬಿತಾ ಫೋಗಟ್‌ ಪಾತ್ರದಲ್ಲಿ ಕಾನಿಸಿಕೊಂಡ ಸುಹಾನಿ ಭಟ್ನಾಗರ್‌ ಅವರ ನಟನೆ ಹೆಚ್ಚು ಪ್ರಶಂಸಿಸಲ್ಪಟ್ಟಿದೆ. ಇದಲ್ಲದೆ ಸುಹಾನಾ ಅವರು  ಟಿವಿ ಜಾಹೀರಾತುಗಳಲ್ಲೂ ಕೆಲಸ ಮಾಡಿದ್ದಾರೆ. 

88

ದಂಗಲ್ ನಂತರ ಆಫರ್‌ಗಳ ಹೊರತಾಗಿಯೂ, ಅವರು ನಟನೆಯಿಂದ ವಿರಾಮ ತೆಗೆದುಕೊಂಡರು ಮತ್ತು ಬದಲಿಗೆ ತನ್ನ ಅಧ್ಯಯನದತ್ತ ಗಮನ ಹರಿಸಲು ಬಯಸಿದ್ದರು. ಓದು ಮುಗಿಸಿದ ನಂತರ ಮತ್ತೆ ಚಿತ್ರರಂಗಕ್ಕೆ ಮರಳಲು ಆಕೆ ಬಯಸುತ್ತಿದ್ದರು.

Read more Photos on
click me!

Recommended Stories