ಹಸಿರು ಡ್ರೆಸ್‌ನಲ್ಲಿ ಪಳಪಳನೆ ಹೊಳೆದ ಮದುಮಗಳು: ರಾಕುಲ್‌ ಪ್ರೀತ್‌ ಪ್ಲೀಸ್ ಮದುವೆಯಾಗಬೇಡಿ ಎಂದು ಅತ್ತ ಫ್ಯಾನ್ಸ್!

Published : Feb 17, 2024, 12:30 AM IST

ಬಹುಭಾಷಾ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಸದ್ಯ ಮದುವೆ ತಯಾರಿಯಲ್ಲಿ ಬಿಜಿಯಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ನಟಿ ಬಾಳ ಬಂಧನಕ್ಕೆ ಬಲಗಾಲಿಡಲಿದ್ದಾಳೆ. ಈ ನಡುವೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

PREV
17
ಹಸಿರು ಡ್ರೆಸ್‌ನಲ್ಲಿ ಪಳಪಳನೆ ಹೊಳೆದ ಮದುಮಗಳು: ರಾಕುಲ್‌ ಪ್ರೀತ್‌ ಪ್ಲೀಸ್ ಮದುವೆಯಾಗಬೇಡಿ ಎಂದು ಅತ್ತ ಫ್ಯಾನ್ಸ್!

ಕೆಲ ದಿನಗಳ ಹಿಂದಷ್ಟೇ ಬ್ರೈಡ್‌ ಟು ಬಿ ಮಾಡಿಸಿಕೊಂಡ ರಾಕುಲ್‌ ಈಗ ಹಸಿರು ಬಣ್ಣದ ಶರಾರಾ ಉಡುಪು ತೊಟ್ಟ ಫೋಟೊ ಹಂಚಿಕೊಂಡಿದ್ದಾರೆ. ಇದು ಬರೀ ಹಸಿರು ಬಣ್ಣದ ಕಾಸ್ಟೂಮ್‌ ಮಾತ್ರ ಅಲ್ಲ. ಇದೇ ಕಾಸ್ಟೂಮ್‌ನಲ್ಲಿ ಪುಟಾಣಿ ಕನ್ನಡಿಯ ತುಣುಕುಗಳನ್ನೂ ಅಳವಡಿಸಲಾಗಿದೆ.

27

ಹಸಿರು ಬಣ್ಣದ ಶರಾರಾಕ್ಕೆ ಒಪ್ಪುವಂತೆ ಹಸಿರು ಬಣ್ಣದ ಕುಂದನ್‌ ಚೋಕರ್‌ ಮತ್ತು ಹಸಿರು ಬಣ್ಣದ ಕಿವಿಯೋಲೆ ಧರಿಸಿದ್ದಾರೆ. ಪುಟ್ಟ ಪುಟ್ಟ ಕನ್ನಡಿಗಳನ್ನು ಒಳಗೊಂಡ ರಾಕುಲ್‌ ಅವರ ಶರಾರಾ ಬೆಲೆ ಬರೋಬ್ಬರಿ ₹1 ಲಕ್ಷಕ್ಕೂ ಹೆಚ್ಚು ಎಂದು ವರದಿಗಳು ತಿಳಿಸಿವೆ.

37

ರಾಕುಲ್‌ ಫೋಟೊ ನೋಡಿ ಪ್ಲೀಸ್ ಮದುವೆಯಾಗಬೇಡಿ ಎಂದು ಅಭಿಮಾನಿಯೊಬ್ಬರು ಅಳುವ ಎಮೋಜಿಯೊಂದಿಗೆ ಕಾಮೆಂಟ್‌ ಮಾಡಿದ್ದಾರೆ. ಇನ್ನು ಕೆಲವು ನೆಟ್ಟಿಗರು ಸೂಪರ್, ಬ್ಯೂಟಿಫುಲ್, ಲುಕಿಂಗ್ ಲೈಕ್ ಎ ವಾವ್ ಅಂತೆಲ್ಲಾ ತರೇಹವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. 

47

ಬಾಲಿವುಡ್‌ನಲ್ಲಿ ಸಕ್ರಿಯರಾಗಿರವ ರಾಕುಲ್‌ ಬಹುಬೇಡಿಕೆಯ ನಟಿಯಾಗಿದ್ದು, ಇದೇ ತಿಂಗಳ 21 ರಂದು ಗೋವಾದಲ್ಲಿ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಅವರು ಬಾಲಿವುಡ್‌ ನಟ, ನಿರ್ಮಾಪಕ ಜಾಕಿ ಭಗ್ನಾನಿ ಜತೆಗೆ ವಿವಾಹವಾಗುತ್ತಿದ್ದಾರೆ.

57

ಗೋವಾದಲ್ಲಿನ ITC ಗ್ರ್ಯಾಂಡ್‌ ಹೊಟೇಲ್‌ನಲ್ಲಿ ಈ ಜೋಡಿಯ ವಿವಾಹವಾಗಲಿದ್ದು, ಎರಡೂ ಕುಟುಂಬಗಳ ಆಪ್ತರು, ಸಿನಿಮಾ ಸ್ನೇಹಿತರಷ್ಟೇ ಈ ಮದುವೆಯಲ್ಲಿ ಭಾಗವಹಿಸಲಿದ್ದಾರೆ. ಮುಂಬೈನಲ್ಲೂ ಗ್ರ್ಯಾಂಡ್‌ ರಿಸೆಪ್ಷನ್‌ ನಡೆಯಲಿದೆ. 

67

ರಾಕುಲ್-ಜಾಕಿ ಕೂಡ ತಮ್ಮ ಮದುವೆಗೆ ವಿನ್ಯಾಸಕಾರರನ್ನು ಫಿಕ್ಸ್ ಮಾಡಿದ್ದಾರೆ. ಇವರ ಮದುವೆ ಸಮಾರಂಭ ಮೂರು ದಿನಗಳ ಕಾಲ ನಡೆಯಲಿದೆ. ನಟಿ ಪ್ರತಿದಿನ ಡಿಸೈನರ್ ಬಟ್ಟೆಗಳನ್ನು ಧರಿಸಲಿದ್ದಾರೆ. ಸಬ್ಯಸಾಚಿ, ತರುಣ್ ತಹಿಲ್ಯಾನಿ ಮತ್ತು ಮನೀಶ್ ಮಲ್ಹೋತ್ರಾ ಮದುವೆಯ ದಿರಿಸುಗಳನ್ನು ವಿನ್ಯಾಸಗೊಳಿಸಿದ್ದಾರೆ.

77

ರಾಕುಲ್ ಪ್ರೀತ್ ಸಿಂಗ್ ಟಾಪ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಾಮ್ ಚರಣ್, ಅಲ್ಲು ಅರ್ಜುನ್, ಮಹೇಶ್ ಬಾಬು, ಜೂನಿಯರ್ ಎನ್ಟಿಆರ್ ಮುಂತಾದ ಸ್ಟಾರ್ ಹೀರೋಗಳೊಂದಿಗೆ ಚಿತ್ರಗಳನ್ನು ಮಾಡಿದ್ದಾರೆ.

Read more Photos on
click me!

Recommended Stories