ಬ್ಲೀಚ್‌ನಿಂದ ಎಲ್ಲಾ ಕಪ್ಪು ಜನ ಒಂದ್ ದಿನ ಬಿಳಿಯಾಗ್ತಾರೆ; ಶಾರುಖ್ ಪುತ್ರಿ ಸುಹಾನಾ ಮತ್ತೆ ಹಿಗ್ಗಾಮುಗ್ಗಾ ಟ್ರೋಲ್

First Published | Jan 15, 2023, 10:59 AM IST

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಮೈ ಬಣ್ಣದ ವಿಚಾರಕ್ಕೆ ಮತ್ತೆ ಟ್ರೋಲ್ ಆಗುತ್ತಿದ್ದಾರೆ. ಬ್ಲೀಚ್ ಮೂಲಕ ಎಲ್ಲಾ ಕಪ್ಪು ಜನ ಬಿಳಿ ಆಗ್ತಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಖ್ಯಾತ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರು. ಸುಹಾನಾ ಖಾನ್ ಸದ್ಯ ದಿ ಆರ್ಚೀಸ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಸುಹಾನಾ ಅವರ ಮೊದಲ ಸಿನಿಮಾ ಇದಾಗಿದ್ದು ನೆಟ್‌ಫ್ಲಿಕ್ಸ್ ನಲ್ಲಿ ರಿಲೀಸ್ ಆಗುತ್ತಿದೆ. ಶಾರುಖ್ ಪುತ್ರಿಯ ಎನ್ನುವ ಕಾರಣಕ್ಕೆ ಭಾರಿ ನಿರೀಕ್ಷೆ ಮೂಡಿಸಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

ಸುಹಾನಾ ಖಾನ್ ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಮೊದಲೇ ಸಿಕ್ಕಾಪಟ್ಟೆ ಫ್ಯಾನ್ ಪಾಲೋವಿಂಗ್ ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನೇಕ ಪಾಲೋವರ್ಸ್ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಸುಹಾನಾ ಖಾನ್ ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಆದರೆ ಅಷ್ಟೇ ಟ್ರೋಲ್ ಕೂಡ ಆಗುತ್ತಾರೆ.

Tap to resize

ಸೆಲೆಬ್ರಿಟಿಗಳಿಗೆ ಟ್ರೋಲ್ ಕೂಡ ಜೀವನದ ಒಂದು ಭಾಗವಾಗಿದೆ. ಏನೆ ಮಾಡಿದರೂ ಸಹ ಟ್ರೋಲ್ ಆಗುತ್ತಾರೆ. ಟ್ರೋಲಿಗರಿಂದ ಶಾರುಖ್ ಪುತ್ರಿ ಏನು  ತಪ್ಪಿಸಿಕೊಂಡಿಲ್ಲ. ಅನೇಕ ಕಾರಣಕ್ಕೆ ಶಾರುಖ್ ಪುತ್ರಿ ಸುಹಾನಾ ಟ್ರೋಲಿಗರ ಬಾಯಿಗೆ ಆಹಾರವಾಗುತ್ತಾರೆ.

 ಫ್ಯಾಷನ್ ಸೆನ್ಸ್ ನಿಂದ ಹೆಚ್ಚು ಗಮನ ಸೆಳೆಯುತ್ತಾರೆ ಸುಹಾನಾ. ಇತ್ತೀಚಿಗಷ್ಟೆ ಸುಹಾನಾ ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯಾ ನಂದ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಸ್ಟಾರ್ ಕಿಡ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚಿಗಷೆ ಸುಹಾನಾ ಶೇರ್ ಮಾಡಿದ್ದ ಪೋಟೋಗಳು ಸಾಮಾಜಿಕ ಜಾಲಾತಣದಲ್ಲಿ ಸಖತ್ ವೈರಲ್ ಆಗಿದ್ದು ನೆಟ್ಟಿಗರು ಮತ್ತೆ ಟ್ರೋಲ್ ಮಾಡುತ್ತಿದ್ದಾರೆ. 

ಸುಹಾನಾ ಕಪ್ಪು ಬಣ್ಣದ ಡ್ರೆಸ್ ಧರಿಸಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಸುಹಾನಾ ಫೋಟೋಗಳಿಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿ ಟ್ರೋಲ್ ಮಾಡಿದ್ದಾರೆ.  ಸುಹಾನಾ ಆಗಾಗ ತನ್ನ ಮೈ ಬಣ್ಣದ ವಿಚಾರಕ್ಕೂ ಟ್ರೋಲ್ ಆಗುತ್ತಾರೆ. ಈ ವಿಚಾರವಾಗಿ ಅನೇಕರು ಕಾಮೆಂಟ್ ಮಾಡಿದ್ದಾರೆ. 

ಸುಹಾನಾ ಫೋಟೋಗೆ ನೆಟ್ಟಿಗರೊಬ್ಬರು 'ಈ ಬ್ಲೀಚ್‌ನಿಂದ ಎಲ್ಲಾ ಕಪ್ಪು ಜನ ಒಂದ್ ದಿನ ಬಿಳಿಯಾಗ್ತಾರೆ' ಎಂದು ಹೇಳಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, ಬ್ಲೀಚ್ ಮಾಡಿಸಿಕೊಂಡಿದ್ದು ಅಲ್ಲ ಬಿಳಿ ಆಗಲು ಇಂಜೆಕ್ಷನ್ ತೆಗೆದುಕೊಂಡಿದ್ದು ಎಂದು ಹೇಳಿದ್ದಾರೆ. ಮತ್ತೋರ್ವ ಕಾಮೆಂಟ್ ನೆಪೋ ಕಿಡ್ ಎಂದು ಹೇಳಿದ್ದಾರೆ. ಹೀಗೆ ಸುಹಾನಾ ಫೋಟೋಗಳಿಗೆ ನೆಟ್ಟಿಗರು ಕಾಮೆಂಟ್ ಮಾಡಿ ಕಾಲೆಳೆಯುತ್ತಿದ್ದಾರೆ. 

ಮಗಳ ಮೈ ಬಣ್ಣದ ವಿಚಾರವಾಗಿ ಶಾರುಖ್ ಖಾನ್ ಇತ್ತೀಚೆಗಷ್ಟೆ ಪ್ರತಿಕ್ರಿಯೆ ನೀಡಿದ್ದು, 'ನಾನು ಸತ್ಯ ಹೇಳುವೆ ನನ್ನ ಮಗಳು ಮೈ ಬಣ್ಣ ಗೋದಿ ಬಣ್ಣ ಆದರೂ ಆಕೆ ಈ ಪ್ರಪಂಚದಲ್ಲಿ ಅತೀ ಸುಂದರವಾದ ಹುಡುಗಿ. ಯಾರು ಇದರ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡುವುದಾಗಲಿ ಅಥವಾ ನನ್ನ ಜೊತೆ ಮಾತನಾಡುವ ಧೈರ್ಯ ಮಾಡುವುದಿಲ್ಲ' ಎಂದಿದ್ದರು.      
 

Latest Videos

click me!