ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಮಹಾಲಕ್ಷ್ಮಿ ದಂಪತಿ; ದುಡ್ಡಿದ್ರೆ ಎಲ್ಲಾ ನಡೆಯತ್ತೆ ಎಂದ ನೆಟ್ಟಿಗರು

Published : Jan 14, 2023, 03:08 PM IST

ಟಾಲಿವುಡ್ ಖ್ಯಾತ ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಮತ್ತು ಕಿರುತೆರೆ ನಟಿ ಮಹಾಲಕ್ಷ್ಮಿ ಜೋಡಿ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ಮತ್ತೆ ಟ್ರೋಲ್ ಆಗಿದ್ದಾರೆ. 

PREV
16
ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಮಹಾಲಕ್ಷ್ಮಿ ದಂಪತಿ; ದುಡ್ಡಿದ್ರೆ ಎಲ್ಲಾ ನಡೆಯತ್ತೆ ಎಂದ ನೆಟ್ಟಿಗರು

ಟಾಲಿವುಡ್ ಖ್ಯಾತ ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಮತ್ತು ಕಿರುತೆರೆ ನಟಿ ಮಹಾಲಕ್ಷ್ಮಿ ಜೋಡಿ ಕಳೆದ ವರ್ಷ ಸಂಚಲ ಸೃಷ್ಟಿಮಾಡಿದ್ದರು. ಮದುವೆಯಾಗುವ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಈ ಜೋಡಿ ಸಖತ್ ಟ್ರೋಲ್ ಕೂಡ ಆಗಿದ್ದರು. ಇಂದಿಗೂ ಈ ಜೋಡಿ ಟ್ರೋಲ್ ಆಗುತ್ತಲೇ ಇದೆ. 

26

ಎಷ್ಟೇ ಟ್ರೋಲ್ ಮಾಡಿದರೂ ಮಹಾಲಕ್ಷ್ಮಿ ಮತ್ತು ರವೀಂದ್ರ ಚಂದ್ರಶೇಖರ್ ಜೋಡಿ ಡೋಂಟ್ ಕೇರ್ ಎನ್ನುತ್ತಾ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಸದಾ ಒಂದಲ್ಲೊಂದು ಪೋಟೋಗಳನ್ನು ಇಬ್ಬರೂ ಶೇರ್ ಮಾಡುತ್ತಿರುತ್ತಾರೆ. ಮಹಾಲಕ್ಷ್ಮಿ ಪತಿ ರವೀಂದ್ರ ಚಂದ್ರಶೇಖರ್ ಅವರನ್ನು ಆಗಾಗ ಹೊಗಳುತ್ತಾ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ. 

36

ಇದೀಗ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಈ ಸ್ಟಾರ್ ಜೋಡಿ. ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿದ ಮಹಾಲಕ್ಷ್ಮಿ ಮತ್ತು ರವೀಂದ್ರ ಅವರನ್ನು ಮತ್ತಷ್ಟು ಟ್ರೋಲ್ ಮಾಡಲಾಗಿದೆ. ನೆಟ್ಟಿಗರು ಕಾಮೆಂಟ್ ಮಾಡಿ ದುಡ್ಡಿದ್ದರೆ ಎಲ್ಲವೂ ನಡೆಯುತ್ತೆ ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, ಹಣದ ಶಕ್ತಿ ಅಷ್ಟೆ ಎನ್ನುತ್ತಿದ್ದಾರೆ. 

46

ಎಷ್ಟೇ ಟ್ರೋಲ್ ಆದರೂ ಮಹಾಲಕ್ಷ್ಮಿ ಮತ್ತು ರವೀಂದ್ರ ದಂಪತಿ ಫೋಟೋ ಹಂಚಿಕೊಳ್ಳುವುದನ್ನು ಬಿಟ್ಟಿಲ್ಲ. ಟ್ರೋಲಿಗರಿಗೆ ಹೆದರಿ ಕುಳಿತಿಲ್ಲ. ಸಂತೋಷದ ಜೀವನ ನಡೆಸುತ್ತಿರುವ ಈ ಜೋಡಿ ಫೋಟೋ ಶೇರ್ ಮಾಡುತ್ತಾ ಸಂಭ್ರಮಿಸುತ್ತಿದೆ. 
 

56

ಸರಳವಾಗಿ ಮದುವೆಯಾದ ಈ ಜೋಡಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಮದುವೆಗೂ ಮುನ್ನವೇ ಮಹಾಲಕ್ಷ್ಮಿ ಜೀವನಕ್ಕೆ ಯಾವುದೇ ತೊಂದರೆ ಆಗದಂತೆ ಆಸ್ತಿ ಸಂಪತ್ತನ್ನು ರವೀಂದ್ರ ಬರೆದಿಟ್ಟಿದ್ದರು ಎನ್ನಲಾಗಿದೆ.  
 

66

ಕೆಲವು ದಿನಗಳ ಹಿಂದೆ ಮಹಾಲಕ್ಷ್ಮಿಗೆ ಕಿರುತೆರೆ ಮತ್ತೊಬ್ಬ ನಟ ಈಶ್ವರ್ ರಘುನಾಥ್ ಜೊತೆ ಅಫೇರ್ ಇದೆ ಎಂದು ಸುದ್ದಿ ಹರಿದಾಡಿತ್ತು. ಈ ಬಗ್ಗೆ ಈಶ್ವರ್ ಪತ್ನಿ ಜಯಶ್ರೀ ಆಕ್ರೋಶ ವ್ಯಕ್ತ ಪಡಿಸಿದ್ದರು. ಆದರೆ ಮಹಾಲಕ್ಷ್ಮಿ ಅಥವಾ ರವೀಂದ್ರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. 
 

Read more Photos on
click me!

Recommended Stories