ಡಿನ್ನರ್‌ಗೆ ಜೊತೆಯಾದ ಬಾಲಿವುಡ್‌ನ ಸ್ಟಾರ್‌ಕಿಡ್ಸ್‌ ಅನನ್ಯಾ,ಸುಹಾನಾ, ಶನಯಾ,ಖುಷಿ!

First Published | Feb 27, 2022, 4:50 PM IST

ಬಾಲಿವುಡ್‌ನ ಫೇಮಸ್‌ ಸ್ಟಾರ್‌ಕಿಡ್‌ಗಳಾದ  ಸುಹಾನಾ ಖಾನ್ (Suhana khan), ಅನನ್ಯಾ ಪಾಂಡೆ (Ananya panday),  ಶನಯಾ ಕಪೂರ್  (Shanaya kapoor) ಮತ್ತು ಖುಷಿ ಕಪೂರ್  (Khushi Kapoor) ಬೆಸ್ಟ್‌ ಫ್ರೆಂಡ್ಸ್‌ ಕೂಡ ಹೌದು. ಇವರು ಆಗಾಗ ಒಟ್ಟಿಗೆ ಹೋರಗೆ ಕಾಣಿಸಿಕೊಳ್ಳುತ್ತಾರೆ.  ಅದು ಪಾರ್ಟಿ ಅಥವಾ ಡಿನ್ನರ್ ಆಗಿರಲಿ, ಎಲ್ಲರೂ ಜೊತೆಯಾಗಿ ಇರುತ್ತಾರೆ. ಶನಿವಾರ ರಾತ್ರಿಯೂ ಈ ನಾಲ್ವರು ಒಟ್ಟಿಗೆ ಡಿನ್ನರ್‌ಗೆ ಹೊರಗೆ ಹೋಗಿದ್ದರು. ಈ ಸಮಯದ ಫೋಟೋಗಳು ಸಖತ್‌ ವೈರಲ್‌ ಆಗಿವೆ.
 

ಸುಹಾನಾ ಖಾನ್ ಮತ್ತು ಅನನ್ಯಾ ಪಾಂಡೆ ಒಟ್ಟಿಗೆ ರೆಸ್ಟೋರೆಂಟ್ ತಲುಪಿದರು. ಇದಾದ ನಂತರ ಶನಯಾ ಮತ್ತು ಖುಷಿ ಕಪೂರ್ ಬಂದರು. ನಾಲ್ವರೂ ಪಾಪರಾಜಿಗಳ ಮುಂದೆ ಪೋಸ್ ನೀಡಿದರು. 
 

ಕೆಲವೊಮ್ಮೆ ಅವರು ಕ್ಯಾಮೆರಾದ  ತಪ್ಪಿಸಿಕೊಳ್ಳುವುದನ್ನು ಕಾಣಬಹುದು. ಆದರೆ ಈ ಬಾರಿ ಅವರು ಪೋಸ್ ನೀಡಿದ್ದಾರೆ. ಅವರೆಲ್ಲರೂ ತಮ್ಮ ಫ್ಯಾಶನ್ ಔಟ್‌ಫಿಟ್‌ಗಳಲ್ಲಿ ತುಂಬಾ ಸ್ಟೈಲಿಶ್ ಆಗಿ ಕಾಣುತ್ತಿದ್ದರು. 

Tap to resize

ಲ್ಯಾವೆಂಡರ್ ಬಣ್ಣದ ಬಾಡಿಕಾನ್ ಡ್ರೆಸ್‌ನಲ್ಲಿ ಅನನ್ಯಾ  ಕಾಣಿಸಿಕೊಂಡರು. ಅವರು ಅದರೊಂದಿಗೆ ಸ್ನೀಕರ್ಸ್ ಧರಿಸಿದ್ದರು. ತೆರೆದ ಕೂದಲಿನಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಳು.ಇತ್ತೀಚೆಗಷ್ಟೇ ಅನನ್ಯಾ  ಅಭಿನಯದ 'ಗಹ್ರಿಯಾನ್' ಚಿತ್ರ ಬಿಡುಗಡೆಯಾಗಿದೆ. ಅನನ್ಯಾಗೆ ಅಷ್ಟು ಮೆಚ್ಚುಗೆ ಸಿಗಲಿಲ್ಲ. ಆದರೆ ಸಿನಿಮಾದುದ್ದಕ್ಕೂ ತುಂಬಾ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
 

ಸುಹಾನಾ ಖಾನ್ ಇತ್ತೀಚೆಗೆ ನ್ಯೂಯಾರ್ಕ್‌ನಿಂದ ಮುಂಬೈಗೆ ಮರಳಿದ್ದಾರೆ. ಬಹಳ ದಿನಗಳ ನಂತರ ಈಗ ಪಾಪರಾಜಿಗಳ ಕಣ್ಣಿಗೆ ಬೀಳಲಾರಂಭಿಸಿದ್ದಾಳೆ. ರಾತ್ರಿ ಊಟಕ್ಕೆ ಬಂದ ಸುಹಾನಾ ತನ್ನ ಉಳಿದ ಸ್ನೇಹಿತರಂತೆ ಸ್ಟೈಲಿಶ್‌ ಆಗಿ ಕಾಣುತ್ತಿದ್ದರು. 

ಡಿನ್ನರ್‌ಗೆ ಸುಹಾನಾ ಖಾನ್‌ ಬಿಳಿ ಟ್ಯೂಬ್ ಟಾಪ್ ಅನ್ನು ಧರಿಸಿದ್ದರು. ಅದನ್ನು ಅವರು ಬ್ಲ್ಯಾಕ್‌ ಸ್ಟ್ರೈಪ್‌  ಪ್ಯಾಂಟ್‌ನೊಂದಿಗೆ ಪೇರ್‌ ಮಾಡಿಕೊಂಡಿದ್ದರು. ಮೇಕಪ್ ಮತ್ತು ಕರ್ಲಿ ಹೇರ್‌ನಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು. ಸುಹಾನಾ ಖಾನ್ ಶೀಘ್ರದಲ್ಲೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ . ಅವರು ಜೋಯಾ ಅಖ್ತರ್ ಅವರ ಚಿತ್ರ ಆರ್ಚೀಸ್ ಮೂಲಕ ತಮ್ಮ ಮೊದಲ ನಟನೆಯನ್ನು ಪ್ರಾರಂಭ ಮಾಡುತ್ತಾರೆ.

ನಾಲ್ವರು ಸ್ನೇಹಿತರು ಮುಂಬೈನ ಬಾಂದ್ರಾ ಪ್ರದೇಶದ ಮಿಜು ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ಮತ್ತು ಮಹೀಪ್ ಕಪೂರ್ ಅವರ ಪುತ್ರಿ ಶನಯಾ ಕೂಡ ಸ್ಟೈಲಿಶ್ ಲುಕ್‌ನಲ್ಲಿ ಇಲ್ಲಿಗೆ ತಲುಪಿದ್ದಾರೆ. ಶನಯಾ ಕಟ್ ಔಟ್ ಡೀಟೈಲಿಂಗ್ ಇರುವ ಬಿಳಿ ಡ್ರೆಸ್ ಧರಿಸಿದ್ದರು.

ಅದೇ ಸಮಯದಲ್ಲಿ, ಬೋನಿ ಕಪೂರ್ ಅವರ ಮಗಳು ಖುಷಿ ಕಪೂರ್ ಕೂಡ ತಮ್ಮ ಸ್ನೇಹಿತರೊಂದಿಗೆ ಕಾಣಿಸಿಕೊಂಡರು. ಖುಷಿ ಕಪೂರ್‌ ಈ ಸಮಯದಲ್ಲಿ ಕಪ್ಪು ಬಣ್ಣದ ಕೋ-ಆರ್ಡರ್ ಸೆಟ್‌ನಲ್ಲಿ ಅವರು ಸುಂದರವಾಗಿ ಕಾಣುತ್ತಿದ್ದರು.

ತಮ್ಮ ಕಿರಿಯ ಮಗಳು ಖುಷಿ ಏಪ್ರಿಲ್ ನಿಂದ ಶೂಟಿಂಗ್ ಆರಂಭಿಸಲಿದ್ದಾರೆ ಎಂದು ಬೋನಿ ಕಪೂರ್ ತಿಳಿಸಿದ್ದಾರೆ. ಸುಹಾನಾ ಖಾನ್ ಅವರ ಸಿನಿಮಾದಲ್ಲಿ ಖುಷಿ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

Latest Videos

click me!