ಅಷ್ಟಕ್ಕೂ ಸಲ್ಮಾನ್ ಖಾನ್ ಆಫರ್ ಶ್ರದ್ಧಾ ಕಪೂರ್‌ ರಿಜೆಕಟ್‌ ಮಾಡಿದ್ದೇಕೆ?

First Published Feb 27, 2022, 4:47 PM IST

ಶಕ್ತಿ ಕಪೂರ್ (Shakti Kapoor)  ಪುತ್ರಿ ಶ್ರದ್ಧಾ ಕಪೂರ್  (Shraddha Kapoor) ಚಿತ್ರರಂಗದಲ್ಲಿ 12 ವರ್ಷಗಳನ್ನು ಪೂರೈಸಿದ್ದಾರೆ. 2010ರಲ್ಲಿ ತೀನ್ ಪತ್ತಿ (Teen Patti) ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಆದರೆ, ಈ ಚಿತ್ರವು ಸೂಪರ್ ಫ್ಲಾಪ್ ಎಂದು ಸಾಬೀತಾಯಿತು ಮತ್ತು ಆರಂಭಿಕ ಹಂತದಲ್ಲಿ ಆಕೆಗೆ ತನ್ನ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ.  ನಂತರ ಅವರು ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ತಮ್ಮದೇ ಆದ ಯಶಸ್ಸನ್ನು ಸಾಧಿಸಿದ್ದಾರೆ. 2013 ರ ಚಿತ್ರ ಆಶಿಕಿ 2 ಶ್ರದ್ಧಾ ಅವರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತು. ಅಂದಹಾಗೆ, ಶ್ರದ್ಧಾ ಓದಿನಲ್ಲೂ ಸಹ  ತುಂಬಾ ಚುರುಕಾಗಿದ್ದರು. ಓದುವ ಸಮಯದಲ್ಲಿ ನಾಟಕಗಳಲ್ಲೂ ಪಾಲ್ಗೊಳ್ಳುತ್ತಿದ್ದರು. ಅವರು 16 ವರ್ಷದವರಿದ್ದಾಗ, ನಾಟಕದಲ್ಲಿ ಕೆಲಸ ಮಾಡುತ್ತಿದ್ದುದನ್ನು ನೋಡಿ, ಸಲ್ಮಾನ್ ಖಾನ್ ಅವರಿಗೆ ಚಲನಚಿತ್ರದಲ್ಲಿ ಕೆಲಸ ಮಾಡಲು ಆಫರ್ ನೀಡಿದರು. ಆದರೆ ಆ ಪ್ರಸ್ತಾಪವನ್ನು ತಿರಸ್ಕರಿಸಿದರು.ಅದಕ್ಕೆ ಕಾರಣವೇನು ಗೊತ್ತಾ?

34 ವರ್ಷದ ಶ್ರದ್ಧಾ ಕಪೂರ್ ಅವರು ಜಮುನಾಬಾಯಿ ನಾರಸ್ ಶಾಲೆ ಮತ್ತು ಬಾಂಬೆಯ ಅಮೇರಿಕನ್ ಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಇದಾದ ನಂತರ ಅವರು ಪದವಿಗಾಗಿ USA ಯ ಬೋಸ್ಟನ್ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆದರು.

ಆದರೆ ಚಲನಚಿತ್ರಗಳಿಂದಾಗಿ ಅವರು ತಮ್ಮ ಅಧ್ಯಯನವನ್ನು ಮಧ್ಯದಲ್ಲಿಯೇ ಬಿಟ್ಟರು.ಶ್ರದ್ಧಾ ಕಪೂರ್ ಒಂದು ವರ್ಷ ಓದಿದ ನಂತರ ಭಾರತದಲ್ಲಿ ರಜೆ ಕಳೆಯಲು ಬೋಸ್ಟನ್ ಯೂನಿವರ್ಸಿಟಿಯಿಂದ ಬಂದಿದ್ದರು. ಅದೇ ದಿನ ತೀನ್ ಪತ್ತಿ ಚಿತ್ರದ ನಿರ್ಮಾಪಕಿ ಅಂಬಿಕಾ ಹಿಂದೂಜಾ ಅವರ ಫೋಟೋ ಫೇಸ್‌ಬುಕ್ ಪ್ರೊಫೈಲ್ ನೋಡಿದರು. ನಂತರ ಶ್ರದ್ಧಾ ಅವರನ್ನು ಕರೆದು ಆಡಿಷನ್ ತೆಗೆದುಕೊಂಡರು. ಆದರೆ, ಚಿತ್ರ ಫ್ಲಾಪ್ ಆಗಿತ್ತು.

ತನ್ನ ಮೊದಲ ಚಿತ್ರ ಸೋತಾಗ ಶ್ರದ್ಧಾ ಕಪೂರ್ ತುಂಬಾ ದುಃಖಿತಳಾಗಿದ್ದರು. ಅವರು ತುಂಬಾ ನಿರಾಶೆಗೊಂಡರು ಮತ್ತು ಮನೆಗೆ ಬಂದ ನಂತರ ಅಳಲು ಪ್ರಾರಂಭಿಸಿದರು. ಇದಾದ ನಂತರ ಅವರ ತಾಯಿ ಸಮಾಧಾನಮಾಡಿದರು.ಪಾಲಕರ ಪ್ರೋತ್ಸಾಹದಿಂದ ಮತ್ತೆಸಿನಿಮಾದಲ್ಲಿ ಕೆಲಸ ಮಾಡತೊಡಗಿದರು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಶ್ರದ್ಧಾ 16 ವರ್ಷದವರಿದ್ದಾಗ, ಶಾಲೆಯ ನಾಟಕವೊಂದರಲ್ಲಿ ಅವರ ಅಭಿನಯವನ್ನು ನೋಡಿದ   ಸಲ್ಮಾನ್ ಖಾನ್ ಅವರಿಗೆ ಚಲನಚಿತ್ರವನ್ನು ನೀಡಿದರು. ಶ್ರದ್ಧಾ ಓದಿ ಮನಶ್ಶಾಸ್ತ್ರಜ್ಞನಾಗಲು ಬಯಸಿದ್ದರು ಆದ್ದರಿಂದ ಅವರು ಪ್ರಸ್ತಾಪವನ್ನು ತಿರಸ್ಕರಿಸಿದರು. ನಾಯಕಿಯ ಜೊತೆಯಲ್ಲಿ ಆಕೆ ಒಬ್ಬ ಶ್ರೇಷ್ಠ ಗಾಯಕಿ ಹೌದು.

ನಟನೆಯ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಚರ್ಚೆಯಾಗಿದ್ದಾರೆ. ಫರ್ಹಾನ್ ಅಖ್ತರ್ ಜೊತೆಗಿನ ಆಕೆಯ ಸಂಬಂಧದ ಬಗ್ಗೆ ಸಾಕಷ್ಟು ವದಂತಿಗಳಿವೆ. ಆದರೆ ಈ ವದಂತಿಗಳಿಗೆ ತೆರೆ ಎಳೆದಿರುವ ಅವರು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.

ಕೆಲವು ತಿಂಗಳ ಹಿಂದೆ, ಶ್ರದ್ಧಾ ಕಪೂರ್ ತನ್ನ ರೂಮರ್ಡ್‌ ಬಾಯ್‌ಫ್ರೆಂಡ್‌ ಮತ್ತು ಛಾಯಾಗ್ರಾಹಕ ರೋಹನ್ ಶ್ರೇಷ್ಠಾನನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಜೋರಾಗಿ ಹರಡಿತ್ತು. ಇಂಟರ್ನೆಟ್‌ನಲ್ಲಿ ಯಾವ ರೀತಿಯ ವರದಿಗಳು ಹೋಗುತ್ತಿವೆ ಎಂದು ನನಗೆ ತಿಳಿದಿಲ್ಲ. ಹೌದು, ಮಗಳ ಬೆಂಬಲಕ್ಕೆ ನಿಲ್ಲುವುದು ಖಂಡಿತ' ಎಂದು ಮಗಳ ಮದುವೆಯ ಬಗ್ಗೆ, ಶಕ್ತಿ ಕಪೂರ್ ಸಂದರ್ಶನವೊಂದರಲ್ಲಿ ಹೇಳಿದ್ದರು.

ಮಗಳು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದಲ್ಲೂ ಅವರು ಶ್ರದ್ಧಾ ಜೊತೆ ಇರುತ್ತಾರೆ. ಇದರಲ್ಲಿ ಅವರ ಮದುವೆಯೂ ಸೇರಿದೆ. ರೋಹನ್ ಮಾತ್ರವಲ್ಲ  ತಾನು ಯಾರನ್ನಾದರೂ ಆರಿಸಿಕೊಂಡಿದ್ದೇನೆ ಮತ್ತು ತಾನು ಅವನೊಂದಿಗೆ ಸೆಟಲ್ ಆಗಬೇಕೆಂದು ಅವಳು ಬಂದು  ಹೇಳಿದರೆ, ನನಗೆ ಯಾವ ತೊಂದರೆಯೂ ಇಲ್ಲ ಎಂದು ಶಕ್ತಿ ಕಪೂರ್ ಹೇಳಿದ್ದರು.

ಶ್ರದ್ಧಾ ಕಪೂರ್ ತಮ್ಮ ವೃತ್ತಿಜೀವನದಲ್ಲಿ ಲವ್ ಕಾ ದಿ ಎಂಡ್, ಆಶಿಕಿ 2, ಏಕ್ ವಿಲನ್, ಹೈದರ್, ಫಿಂಗರ್, ಎಬಿಸಿಡಿ 2, ಬಾಘಿ, ಓಕೆ ಜಾನು, ಹಾಫ್ ಗರ್ಲ್ ಫ್ರೆಂಡ್ ಹಸೀನಾ ಪಾರ್ಕರ್, ಸ್ತ್ರೀ, ಚಿಚೋರೆ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ, ರಣಬೀರ್ ಕಪೂರ್ ಜೊತೆ ಲವ್ ರಂಜನ್ ಅವರ ಹೆಸರಿಡದ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

click me!