ಟಾಲಿವುಡ್ ಬ್ಯೂಟಿ ಸಮಂತಾ ರುತ್ ಪ್ರಭು ಬಣ್ಣದ ಜರ್ನಿ ಅರಂಭಿಸಿ, 12 ವರ್ಷಗಳು ಪೂರೈಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಹಾಕಿದ್ದಾರೆ.
'ಇಂದು ಬೆಳಗ್ಗೆ ನಾನು ಎದ್ದ ತಕ್ಷಣ ತಿಳಿಯಿತು, ನಾನು ಚಿತ್ರರಂಗದಲ್ಲಿ 12 ವರ್ಷ ಪೂರೈಸಿರುವೆ ಎಂದು. ಲೈಟ್, ಕ್ಯಾಮೆರಾ, ಆ್ಯಕ್ಷನ್ ಮತ್ತು ಮರೆಯಲಾಗದ ನೆನಪುಗಳ ನಡುವೆ ನನ್ನ ಜರ್ನಿ ಸಾಗಿದೆ. ಪ್ರೀತಿ ಮತ್ತು ಆಶೀರ್ವಾದ ತುಂಬಿರುವ ಈ ಜರ್ನಿ ಬಗ್ಗೆ ಸಂತೋಷವಿದೆ,' ಎಂದು ಸಮಂತಾ ಬರೆದುಕೊಂಡಿದ್ದಾರೆ.
'ದೇಶದಲ್ಲಿ ಇರುವ ಎಲ್ಲಾ ಲಾಯಲ್ ಅಭಿಮಾನಿಗಳು ನನಗೆ ಇದ್ದಾರೆ. ಸಿನಿಮಾ ಜೊತೆಗಿರುವ ನನ್ನ ಲವ್ ಸ್ಟೋರಿ ಹೀಗೆ ಮುಂದುವರೆಯಲಿ. ದಿನ ಕಳೆಯುತ್ತಿದ್ದಂತೆ ಇನ್ನೂ ಹೆಚ್ಚು ಶಕ್ತಿ ನೀಡಲಿ,' ಎಂದಿದ್ದಾರೆ.
ಹಾಗೂ ಸಮಂತಾಗೆ 'Champions of Change Telangana 2021' ಪ್ರಶಸ್ತಿ ಕೂಡ ಸಿಕ್ಕಿದೆ. ನಮ್ಮ ಸಮಾಜಮುಖಿ ಕೆಲಸಗಳನ್ನು ಗುರುತಿಸುತ್ತಿರುವುದಕ್ಕೆ ತುಂಬಾ ಸ್ಪೆಷಲ್ ಫೀಲ್ ಅಗುತ್ತಿದೆ, ಎಂದಿದ್ದಾರೆ ಸ್ಯಾಮ್.
ಈ ಪ್ರಶಸ್ತಿ ಪಡೆಯುವಾಗ ಸಮಂತಾ ಹ್ಯಾಂಡ್ ಪ್ರಿಂಟ್ ಸೀರೆ ಧರಿಸಿದ್ದರು. ಇದು ಆರ್ಗೆಂಜಾ ಸಿಲ್ಕ್ ಸ್ಯಾರಿ. ಅರ್ಚನಾ ಜಾಜು ಡಿಸೈನ್ ಮಾಡಿದ್ದಾರೆ.
ಲೈಟ್ ಬಣ್ಣದಲ್ಲಿ ಇರುವ ಈ ಸೀರೆಯ ಬೆಲೆ 1 ಲಕ್ಷ 14 ಸಾವಿರ 999 ರೂ. ಎನ್ನಲಾಗಿದೆ. ಇದು ಅರ್ಚನಾ ಅವರ ಬಟ್ಟೆ ವೆಬ್‌ಸೈಟ್‌ನಲ್ಲಿ ತೋರಿಸುತ್ತಿರುವ ಬೆಲೆ ಎನ್ನಲಾಗಿದೆ.
'Ye Maaya Chesave' ತೆಲುಗು ಚಿತ್ರದ ಮೂಲಕ ಸಮಂತಾ ತಮ್ಮ ಜರ್ನಿ ಶುರು ಮಾಡಿದ್ದರು. ಇದೇ ವರ್ಷ ತಮಿಳಿನಲ್ಲಿ Vinnaithaandi Varuvaayaa ಚಿತ್ರದಲ್ಲಿ ನಟಿಸಿದ್ದರು.
ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ ಕಿರುತೆರೆ ಬಿಗ್ ಬಾಸ್ ರಿಯಾಲಿಟಿ ಶೋ ಮತ್ತು ಅನೇಕ ಜಾಹೀರಾತುಗಳು ಮತ್ತು ವೆಬ್ ಸೀರಿಸ್‌ನಲ್ಲಿ ಅಭಿನಯಿಸಿದ್ದಾರೆ.