Published : Oct 18, 2023, 10:47 AM ISTUpdated : Oct 18, 2023, 11:32 AM IST
ಸಿನಿ ರಂಗದಲ್ಲಿ ಕೆರಿಯರ್ ಆರಂಭಿಸುವ ನಟ-ನಟಿಯರು ಸೂಪರ್‌ಸ್ಟಾರ್ ಆಗಿ ಚಿತ್ರರಂಗದಲ್ಲಿ ನೆಲೆ ನಿಲ್ಲುವಾಗ ಮೂವತ್ತು ವರ್ಷ ಆಗಿರುತ್ತದೆ. ಆದ್ರೆ ಸೌತ್‌ನ ಈ ನಟ 30 ವರ್ಷಕ್ಕೆ ಕಾಲಿಡುವ ಮೊದಲು ದೊಡ್ಡ ಹಿಟ್‌ಗಳನ್ನು ನೀಡಿದ್ದರು. ಅಷ್ಟೇ ಅಲ್ಲ ತಮ್ಮ30ನೇ ವರ್ಷಕ್ಕಿಂತ ಮೊದಲು 30 ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ ಹೆಗ್ಗಳಿಕೆ ಇವರದು. ಯಾರು ಆ ನಟ?
ಚಿತ್ರರಂಗದಲ್ಲಿ ಇವತ್ತಿಗೆ ಸೂಪರ್‌ಸ್ಟಾರ್ ಆಗಿರುವ ಅದೆಷ್ಟೋ ನಟ-ನಟಿಯರು ಸಿನಿಮಾರಂಗಕ್ಕೆ ಬರುವ ಮುನ್ನ ಸಾಕಷ್ಟು ಕಷ್ಟಪಟ್ಟಿದ್ದರು. ಕೆಲವೊಬ್ಬರು ಸಿನಿಮಾ ಹಿನ್ನೆಲೆಯ ಕುಟುಂಬದಿಂದಲೇ ಬಂದವರಾದರೆ, ಇನ್ನು ಕೆಲವರು ಸಂಪೂರ್ಣ ಬಡತನದ ಕುಟುಂಬದಿಂದ ಬಂದು ಕಷ್ಟಪಟ್ಟವರು. ಸಣ್ಣಪುಟ್ಟ ಪಾತ್ರಗಳನ್ನು ಮಾಡಿ ನಾಯಕ ನಟನಾಗಿ ಸಕ್ಸಸ್ ಆದವರು.
211
ದಕ್ಷಿಣಭಾರತದ ಈ ನಟ ಕೂಡಾ ಹೀಗೆ ಸಣ್ಣಪುಟ್ಟ ಪಾತ್ರಗಳನ್ನು ಮಾಡಿ ಬೆಳೆಯುತ್ತಾ ಸೂಪರ್‌ಸ್ಟಾರ್ ಆದ ನಟ. ಸಿನಿಮಾರಂಗದಲ್ಲಿ ಕೆರಿಯರ್ ಆರಂಭಿಸಿದ ಆ ದಿನಗಳಲ್ಲಿ ಸೆಟ್‌ಗಳಲ್ಲಿ ಕೇವಲ 500 ರೂ. ಗಳಿಗೆ ಕೆಲಸ ಮಾಡಿದ್ದರು. ಸದ್ಯ ಅವರು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ, ಪ್ರತಿ ಚಿತ್ರಕ್ಕೆ 200 ಕೋಟಿ ರೂ. ಪಡೆಯುತ್ತಾರೆ.
311
ಸಿನಿ ರಂಗದಲ್ಲಿ ಕೆರಿಯರ್ ಆರಂಭಿಸುವ ನಟ-ನಟಿಯರು ಸೂಪರ್‌ಸ್ಟಾರ್ ಆಗಿ ಚಿತ್ರರಂಗದಲ್ಲಿ ನೆಲೆ ನಿಲ್ಲುವಾಗ ಮೂವತ್ತು ವರ್ಷ ಆಗಿರುತ್ತದೆ. ಆದ್ರೆ ಸೌತ್‌ನ ಈ ನಟ 30 ವರ್ಷಕ್ಕೆ ಕಾಲಿಡುವ ಮೊದಲು ದೊಡ್ಡ ಹಿಟ್‌ಗಳನ್ನು ನೀಡಿದ್ದರು. ಅಷ್ಟೇ ಅಲ್ಲ ತಮ್ಮ30ನೇ ವರ್ಷಕ್ಕಿಂತ ಮೊದಲು 30 ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ ಹೆಗ್ಗಳಿಕೆ ಇವರದು.
411
ಆ ಸೂಪರ್‌ಸ್ಟಾರ್ ನಟ, ಮತ್ಯಾರೂ ಅಲ್ಲ ವಿಜಯ್. ಅಭಿಮಾನಿಗಳು ಇವರನ್ನು ಪ್ರೀತಿಯಿಂದ ದಳಪತಿ ವಿಜಯ್ ಎಂದು ಕರೆಯುತ್ತಾರೆ. ಬಾಲ ಕಲಾವಿದನಾಗಿ ಅಭಿನಯ ಆರಂಭಿಸಿದ ವಿಜಯ್, ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿ ನಂತರ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
511
ತಮಿಳು ಚಲನಚಿತ್ರ ನಿರ್ಮಾಪಕ ಎಸ್.ಎ ಚಂದ್ರಶೇಖರ್ ಅವರ ಪುತ್ರ, ವಿಜಯ್ ಅವರ ಮೊದಲ ಚಿತ್ರ 1984ರಲ್ಲಿ ಬಿಡುಗಡೆಯಾದ ವೆಟ್ರಿ, ಇದನ್ನು ಅವರ ತಂದೆ ನಿರ್ದೇಶಿಸಿದ್ದರು. 2017ರಲ್ಲಿ ಸಂದರ್ಶನವೊಂದರಲ್ಲಿ, ಚಂದ್ರಶೇಖರ್ ಅವರು 10 ವರ್ಷದ ವಿಜಯ್ ಅವರು ನಟ-ನಿರ್ಮಾಪಕ ಪಿ.ಎಸ್.ವೀರಪ್ಪ ಅವರು ಚಿತ್ರದಲ್ಲಿನ ಅಭಿನಯಕ್ಕಾಗಿ (Acting) 500 ರೂ. ನೀಡಿದ್ದರು ಎಂಬುದನ್ನು ತಿಳಿಸಿದ್ದರು.
611
2000ರಲ್ಲಿ, ಅವರು ಕೇವಲ 26 ವರ್ಷದವರಾಗಿದ್ದಾಗ, ವಿಜಯ್ ತಮ್ಮ 25ನೇ ಹಿಟ್ ಆದ ಕಣ್ಣುಕ್ಕುಲ್ ನಿಲವು ಚಿತ್ರದಲ್ಲಿ ಕಾಣಿಸಿಕೊಂಡರು. ಮುಂದಿನ ನಾಲ್ಕು ವರ್ಷಗಳಲ್ಲಿ, ಅವರು ಕುಶಿ, ತಮಿಝನ್ ಮತ್ತು ಘಿಲಿ ಸೇರಿದಂತೆ ಇನ್ನೂ ಹಲವು ಹಿಟ್ ಸಿನಿಮಾಗಳನ್ನು ಮಾಡಿದರು.
711
30 ವರ್ಷಕ್ಕಿಂತ ಮೊದಲು ವಿಜಯ್ ಅವರ 30 ಸೂಪರ್ ಹಿಟ್ ಸಿನಿಮಾ ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಕೇವಲ ಒಂದು ಸೋಲೋ ಹಿಟ್ ಮಾಡಿದ್ದರು. ಶಾರುಖ್ ಖಾನ್ ಐದು ಹಿಟ್‌ಗಳನ್ನು ಹೊಂದಿದ್ದರು.
811
ಇತರ ಇಬ್ಬರು ಸ್ಟಾರ್‌ಗಳಿಗಿಂತ ಮುಂಚೆಯೇ ಸಿನಿಮಾ ಕೆರಿಯರ್ ಪ್ರಾರಂಭಿಸಿದ ಸಲ್ಮಾನ್, 30 ನೇ ವರ್ಷಕ್ಕೆ ಕಾಲಿಡುವ ಮೊದಲು ಕೇವಲ ಐದು ಹಿಟ್‌ಗಳನ್ನು ಹೊಂದಿದ್ದರು.
911
90ರ ದಶಕ ಮತ್ತು 2000ರ ದಶಕದ ಆರಂಭದಲ್ಲಿ, ವಿಜಯ್ ಅವರು ತಮಿಳು ಚಿತ್ರರಂಗದಲ್ಲಿ ಪ್ರಮುಖ ನಟನಾಗಿ ಗುರುತಿಸಿಕೊಂಡರು. 2000ರ ದಶಕದ ನಂತರ ಸ್ಟಾರ್‌ಡಮ್ ಗಳಿಸಿದರು. 2010ರ ದಶಕದ ಮಧ್ಯಭಾಗದಲ್ಲಿ, ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರನ್ನು ತಮಿಳು ಚಿತ್ರರಂಗದಲ್ಲಿ ಅತಿದೊಡ್ಡ ಸೂಪರ್‌ಸ್ಟಾರ್ ಎಂದು ಕರೆಯಲ್ಪಟ್ಟರು. ವಿಜಯ್, ತುಪಾಕಿ, ಮೆರ್ಸಲ್, ಸರ್ಕಾರ್, ಬಿಗಿಲ್, ಮತ್ತು ಮಾಸ್ಟರ್‌ನಲ್ಲಿ ಸತತ ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ್ದಾರೆ.
1011
2014 ರಿಂದ, ನಟ ಥೇರಿ, ಪುಲಿ, ಮೆರ್ಸಲ್, ಸರ್ಕಾರ್ ಮತ್ತು ಮಾಸ್ಟರ್‌ನಂತಹ ಕೆಲವು ಸತತ ಹಿಟ್‌ಗಳನ್ನು ನೀಡಿದ್ದಾರೆ. ಅವರ ಇತ್ತೀಚಿನ ಎರಡು ಚಿತ್ರಗಳು ವಾರಿಸು ಮತ್ತು ಬೀಸ್ಟ್ ಕೆಟ್ಟ ವಿಮರ್ಶೆಗಳನ್ನು ಸ್ವೀಕರಿಸಿದರೂ ಗಲ್ಲಾಪೆಟ್ಟಿಗೆಯಲ್ಲಿ ಹಣವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.
1111
ವಿಜಯ್ ಅವರ ಬಹುನಿರೀಕ್ಷಿತ ಚಿತ್ರ, ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೋ ನಾಳೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ತ್ರಿಶಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.