ಕುಡುಕ ತಂದೆಯಿಂದ ಶಾಲೆ ತೊರೆದು ರಸ್ತೆ ಬದಿ ಪೆನ್‌ ಮಾರಾಟ ಮಾಡ್ತಿದ್ದ ವ್ಯಕ್ತಿ, ಈಗ ಭಾರತದ ನಂ.1 ಹಾಸ್ಯನಟ!

First Published | Oct 18, 2023, 9:32 AM IST

ಭಾರತೀಯ ಚಿತ್ರರಂಗದಲ್ಲಿ ಸದ್ಯ ಸೂಪರ್‌ಸ್ಟಾರ್‌ ಆಗಿರುವ ಅದೆಷ್ಟೋ ನಟ-ನಟಿಯರು ತಮ್ಮ ಬಾಲ್ಯವನ್ನು ತುಂಬಾ ಕಷ್ಟದಿಂದ ಕಳೆದಿದ್ದರು. ಹಾಗೆಯೇ ಈ ನಟ ಕುಡುಕ ತಂದೆಯಿಂದ ಶಾಲೆ ತೊರೆದು ರಸ್ತೆ ಬದಿ ಪೆನ್‌ ಮಾರಾಟ ಮಾಡ್ತಿದ್ದರು. ಈಗ ಭಾರತದ ನಂ.1 ಹಾಸ್ಯನಟರಾಗಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಸದ್ಯ ಸೂಪರ್‌ಸ್ಟಾರ್‌ ಆಗಿರುವ ಅದೆಷ್ಟೋ ನಟ-ನಟಿಯರು ತಮ್ಮ ಬಾಲ್ಯವನ್ನು ತುಂಬಾ ಕಷ್ಟದಿಂದ ಕಳೆದಿದ್ದರು. ಹಲವು ಸಣ್ಣಪುಟ್ಟ ಕೆಲಸವನ್ನು ಮಾಡಿ ಜೀವನವನ್ನು ನಿರ್ವಹಿಸಿದ್ದರು. ಇವರು ಸಹ ಅಂಥಾ ನಟರಲ್ಲಿ ಒಬ್ಬರು.

300ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿ ನಮ್ಮೆಲ್ಲರನ್ನೂ ನಗಿಸಿದ ಜಾನಿ ಲೀವರ್ ಅವರ ಬಾಲ್ಯವು ತುಂಬಾ ಸಂಕಷ್ಟದಿಂದ ಕೂಡಿತ್ತು.  ಸಂದರ್ಶನವೊಂದರಲ್ಲಿ ಜಾನಿ ಲೀವರ್‌, ಮದ್ಯವ್ಯಸನಿ ತಂದೆಯಿಂದಾಗಿ ಬಾಲ್ಯವನ್ನು ತುಂಬಾ ಕಷ್ಟದಿಂದ ಕಳೆದಿದ್ದಾಗಿ ಬಹಿರಂಗಪಡಿಸಿದ್ದರು. ತಂದೆಯಿಂದಾಗಿ  7ನೇ ತರಗತಿಯಲ್ಲೇ ಶಾಲೆ ಬಿಟ್ಟಿದ್ದಾಗಿ ಹೇಳಿಕೊಂಡಿದ್ದರು.

Latest Videos


ಸಂದರ್ಶನದಲ್ಲಿ ನಟ, 'ನನ್ನ ತಂದೆ ಮದ್ಯವ್ಯಸನಿಯಾಗಿದ್ದರು. ಅವರು ನಮ್ಮ ಬಗ್ಗೆ ಎಂದಿಗೂ ಗಮನ ಹರಿಸಲಿಲ್ಲ, ಶಾಲೆಯ ಶುಲ್ಕ ಮತ್ತು ಹೊತ್ತಿನ ಊಟಕ್ಕಾಗಿ ನಮ್ಮ ಚಿಕ್ಕಪ್ಪ ನಮಗೆ ನೆರವಾಗುತ್ತಿದ್ದರು. ಆದರೆ ನನಗೆ ಅವರಿಗೆ ಕಷ್ಟ ಕೊಡುವುದು ಇಷ್ಟವಿರಲ್ಲಿಲ್ಲ. ಹೀಗಾಗಿ ಶಾಲೆಯನ್ನು ಬಿಟ್ಟುಬಿಟ್ಟೆ' ಎಂದು ಜಾನಿ ಲೀವರ್ ಹೇಳಿದರು.

ಜಾನಿ ಲಿವರ್ ಜೀವನೋಪಾಯಕ್ಕಾಗಿ ತುಂಬಾ ಕಷ್ಟಪಟ್ಟರು. ಬೀದಿಯಲ್ಲಿ ಪೆನ್ನುಗಳನ್ನು ಮಾರಾಟ ಮಾಡಿದರು. ಅವರು ಸಕ್ರಿಯವಾಗಿ ಕೆಲಸ ಮಾಡುವಾಗ ಹಾಸ್ಯಕ್ಕೆ ಹೆಚ್ಚಿನ ಗೌರವವನ್ನು ನೀಡಲಾಯಿತು ಎಂದು ಅವರು ಹೇಳಿದರು.

ಜಾನಿ ಲೀವರ್ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಇತ್ತೀಚಿಗೆ ಸಿನಿಮಾದಲ್ಲಿ ಹೆಚ್ಚು ಅವಕಾಶ ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ಜಾನಿ ಲೀವರ್‌ ತಾನು ಎಂಥಾ ಕಷ್ಟದ ಸಮಯದಲ್ಲಿಯೂ ಹೇಗೆ ಹಾಸ್ಯ ಪಾತ್ರವನ್ನು ನಿರ್ವಹಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. 'ನಾನು ಕೆಲವು ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾಗ ಹಾಸ್ಯ ದೃಶ್ಯವನ್ನು ಚಿತ್ರೀಕರಿಸಬೇಕಾಗಿತ್ತು. ನನ್ನ ತಂದೆಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗಿದ್ದಾಗ, ನಾನು ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿತ್ತು. ನಾನು ಅದನ್ನು ಮಾಡಿದೆ' ಎಂದಿದ್ದಾರೆ.

ಚಿತ್ರರಂಗದಲ್ಲಿ ನಿಮಗೆ ಸ್ನೇಹಿತರಿದ್ದಾರೆಯೇ ಎಂದು ಕೇಳಿದಾಗ, ನಟ ಜಾನಿ ಲಿವರ್ ಈ ಉದ್ಯಮದಲ್ಲಿ ದೋಸ್ತಿ ಇದೆ ಆದರೆ ದೋಸ್ತ್‌ಗಳಿಲ್ಲ ಎಂದು ದುಃಖಿಸುತ್ತಾರೆ. ಜನರು ಕೆಲಸದಲ್ಲಿರುವಾಗ ಎಲ್ಲಾ ರೀತಿಯ ಭರವಸೆಗಳನ್ನು ನೀಡುತ್ತಾರೆ. ಆದರೆ ಒಮ್ಮೆ ಚಲನಚಿತ್ರ ಮುಗಿದ ನಂತರ ಯಾರೊಬ್ಬರೂ ನೆರವಿಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.

ಜಾನ್ ಪ್ರಕಾಶ್ ರಾವ್, ಜಾನಿ ಲಿವರ್ ಜನುಮಲಾ ಅವರು ಆಗಸ್ಟ್ 14, 1957ರಂದು ಆಂಧ್ರಪ್ರದೇಶದ ಕನಿಗಿರಿಯಲ್ಲಿ ಜನಿಸಿದರು. ಮುಂಬೈನ ಕಿಂಗ್ಸ್ ಸರ್ಕಲ್ ಪ್ರದೇಶದಲ್ಲಿ (ಧಾರಾವಿ) ಬೆಳೆದರು. ಅವರು ಬಾಲಿವುಡ್‌ನಲ್ಲಿ ಭಾರತೀಯ ನಟ ಮತ್ತು ಹಾಸ್ಯನಟ. ಅವರ ಮಾತೃಭಾಷೆ ತೆಲುಗು.

ಲಿವರ್ ಏಳನೇ ತರಗತಿಯವರೆಗೆ ಆಂಧ್ರ ತೆಲುಗು ಶಾಲೆಯಲ್ಲಿ ಓದಿದರು. ಆದರೆ ಅವರ ಕುಟುಂಬದಲ್ಲಿನ ಆರ್ಥಿಕ ಸಮಸ್ಯೆಗಳಿಂದ ಮುಂದೆ ಓದಲು ಸಾಧ್ಯವಾಗಲಿಲ್ಲ, ನಂತರ ಅವರು ಶಾಲೆಯನ್ನು ಬಿಡಲು ನಿರ್ಧರಿಸಿದರು. ಬಾಂಬೆಯ ಬೀದಿಗಳಲ್ಲಿ ಪೆನ್ನುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು.

click me!