Chokerನಿಂದ Wide Leg Jeansವರೆಗೆ, 90 ರ ದಶಕದ ಫ್ಯಾಶನ್ ಮತ್ತೆ ಟ್ರೆಂಡ್!
First Published | Mar 25, 2022, 5:07 PM ISTಫ್ಯಾಷನ್ (Fashion) ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಹೊಸದು ಹಳೆಯದಾಗುವ ಹಾಗೇ ಆಗಾಗ ಹಳೆ ಫ್ಯಾಷನ್‌ಗಳು ಮತ್ತೆ ಬೆಳಕಿಗೆ ಬಂದು ಮಾರುಕಟ್ಟೆಯಲ್ಲಿ ಟ್ರೆಂಡ್ ಆಗುವುದು ಸಾಮಾನ್ಯವಾಗಿದೆ. ಆದೇ ರೀತಿ ದಶಕದ ಕೆಲವು ಹಿಂದಿನ ಫ್ಯಾಶನ್‌ಗಳು ಈಗ ಮತ್ತೆ ಟ್ರೆಂಡ್ ಆಗಿವೆ. ಇತ್ತೀಚಿನ ದಿನಗಳಲ್ಲಿ ಕ್ರಾಪ್ ಟಾಪ್ (Crop Top), ವೈಡ್ ಲೆಗ್ ಜೀನ್ಸ್ (Wide leg jeans), ಕುತ್ತಿಗೆಗೆ ಚೋಕರ್ (Choker) ಎಲ್ಲವು ಸಖತ್ ಚಾಲ್ತಿಯಲ್ಲಿರುವ ಫ್ಯಾಷನ್' ಆದರೆ ಈ ಎಲ್ಲಾ ಫ್ಯಾಶನ್ ಸ್ಟೈಲ್‌ಗಳು 90 ರ ದಶಕದಿಂದ ನಕಲು ಮಾಡಲ್ಪಟ್ಟಿದೆ. ಹೌದು, 90ರ ದಶಕದ ಬಾಲಿವುಡ್ ನಾಯಕಿಯರನ್ನು ನೋಡಿದರೆ ಇಂದಿನ ದಿನಗಳಲ್ಲಿ ದೀಪಿಕಾ (Deepika Padukone), ಕರೀನಾ (Kareena Kapoor) ಅದೇ ರೀತಿಯ ಬಟ್ಟೆ ತೋಡುತ್ತಾರೆ ಮತ್ತು ಫ್ಯಾಶನ್ ಸ್ಟೈಲ್‌ಗಳನ್ನು ಅನುಸರಿಸುತ್ತಿರುವುದು ಕಂಡುಬಂದಿದೆ.