ರೋಹನ್ ಶ್ರೇಷ್ಠಾ ಅವರೊಂದಿಗಿನ ಲವ್ ಆಫೇರ್‌ಗೆ ಸಂಬಂಧ ಪಟ್ಟ ವದಂತಿಗಳಿಗಾಗಿ ಶ್ರದ್ಧಾ ಆಗಾಗ ಸುದ್ದಿ ಮಾಡುತ್ತಾರೆ. ಇತ್ತೀಚಿನ ವರದಿಯ ಪ್ರಕಾರ, ಸುಮಾರು 4 ವರ್ಷಗಳ ಡೇಟಿಂಗ್ ನಂತರ ಬೇರ್ಪಟ್ಟಿದ್ದಾರೆ.
ಇಬ್ಬರೂ ಯಾವಾಗಲೂ ತಮ್ಮ ರಿಲೆಷನ್‌ಶಿಪ್ ಸ್ಟೇಟಸ್ ಅನ್ನು ಖಾಸಗಿಯಾಗಿ ಇಟ್ಟುಕೊಂಡಿದ್ದರೂ ಸಹ ಅವರ ವಿವಾಹದ ವದಂತಿಗಳು ಆಗಾಗ ಅಂತರ್ಜಾಲದಲ್ಲಿ ಪ್ರಸಾರವಾಗುತ್ತವೆ. ವರದಿಗಳ ಪ್ರಕಾರ, ಇಬ್ಬರು ಸೆಲೆಬ್ರಿಟಿಗಳು ಬೇರೆಯಾಗಿದ್ದಾರೆ.
ಇವರಿಬ್ಬರ ಬೇರೆಯಾಗಲು ಕಾರಣ ತಿಳಿದಿಲ್ಲವಾದರೂ, ಈ ವರ್ಷ ಶ್ರದ್ಧಾ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ರೋಹನ್ ಭಾಗವಹಿಸಿರಲಿಲ್ಲ. ಮಾರ್ಚ್ 3 ರಂದು ಶ್ರದ್ಧಾ, ಗೋವಾದಲ್ಲಿ ತನ್ನ ಕುಟುಂಬದೊಂದಿಗೆ ತನ್ನ ವಿಶೇಷ ದಿನವನ್ನು ಆಚರಿಸಿದರು.
ಈ ಕಪಲ್ ನಡುವೆ ಜನವರಿಯಿಂದ ಎಲ್ಲಾ ಸರಿಯಿರಲಿಲ್ಲ ಮತ್ತು ಫೆಬ್ರವರಿಯಲ್ಲಿ ಅವರ ವಿಘಟನೆ ಸಂಭವಿಸಿದೆ ಎಂದು ಪಿಂಕ್ವಿಲ್ಲಾದಲ್ಲಿ ಹೇಳಲಾಗಿದೆ. ಈ ನಡುವೆ, ಆಗಸ್ಟ್ 2021 ರಲ್ಲಿ ಶ್ರದ್ಧಾ ಮತ್ತು ರೋಹನ್ ಅವರ ವಿವಾಹದ ಸುದ್ದಿ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಾಗ, ನಟಿಯ ತಂದೆ ಶಕ್ತಿ ಕಪೂರ್ ಅದರ ಬಗ್ಗೆ ಮಾತನಾಡಿದರು.
'ರೋಹನ್ ಫ್ಯಾಮಿಲಿ ಫ್ರೆಂಡ್ ಆಗಿದ್ದು, ತಂದೆಯನ್ನು ಹಲವು ವರ್ಷಗಳಿಂದ ಬಲ್ಲೆ ಎಂದು ಹೇಳಿದ ಅವರು, ಶ್ರದ್ಧಾಳ ಮದುವೆಗೆ ಪ್ರಪೋಸಲ್ ಬಂದಿಲ್ಲ. ತನಗಾಗಿ ಜೀವನ ಸಂಗಾತಿಯನ್ನು ಆರಿಸಿಕೊಂಡಿದ್ದೇನೆ ಎಂದು ಅವಳು ಹೇಳಿದರೆ ಅಥವಾ ಅವಳು ಆರಿಸಿಕೊಂಡಿದ್ದರೆ, ನಾನು ತಕ್ಷಣ ಒಪ್ಪುತ್ತೇನೆ' ಎಂದು ಕಪೂರ್ ಹೇಳಿದರು.
ಮಗಳು ಹೇಳಿದರೆ ಅಥವಾ ತನಗೆ ಜೀವನ ಸಂಗಾತಿಯನ್ನು ನಿರ್ಧರಿಸಿದರೆ, ಅವರು ಸಂತೋಷದಿಂದ ಅದನ್ನು ಅನುಮೋದಿಸುತ್ತಾರೆ ಎಂದೂ ಶಕ್ತಿ ಕಪೂರ್ ಅವರು ಹೇಳಿದ್ದರು.
ಶ್ರದ್ಧಾ ಶೀಘ್ರದಲ್ಲೇ ರಣಬೀರ್ ಕಪೂರ್ ಜೊತೆಗೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಮುಂದಿನ ಚಿತ್ರ ಲವ್ ರಂಜನ್‌ನಲ್ಲಿ ತಾರೆಯರು ಜೋಡಿಯಾಗಿದ್ದಾರೆ.ನಿಖಿಲ್ ದ್ವಿವೇದಿ ನಿರ್ದೇಶನದ ಟ್ರೈಲಾಜಿಯಲ್ಲಿ ಆಕಾರ ಬದಲಾಯಿಸುವ ಹಾವಿನ ಪಾತ್ರವನ್ನು ಮಾಡಲು ನಟಿ ಸಹಿ ಹಾಕಿದ್ದಾರೆ.