ರಾಜಮೌಳಿಯ ಯಶಸ್ಸಿನ ಹಿಂದೆ ಹಲವರ ಶ್ರಮವಿದೆ. ಅದರಲ್ಲಿ ಮುಖ್ಯವಾಗಿ ಅವರ ಅಣ್ಣ, ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ. ರಾಜಮೌಳಿಯ ಪ್ರತಿ ಚಿತ್ರಕ್ಕೂ ಅವರೇ ಸಂಗೀತ ನೀಡುತ್ತಾರೆ. ಆದರೆ, ಬಾಹುಬಲಿ ಸರಣಿಯ ನಂತರ ಕೀರವಾಣಿ ಸಂಗೀತದಿಂದ ನಿವೃತ್ತರಾಗಲು ನಿರ್ಧರಿಸಿದ್ದರು. ಈ ವಿಷಯ ರಾಜಮೌಳಿಗೆ ತುಂಬಾ ನೋವುಂಟು ಮಾಡಿತ್ತು.