ಅಂದ, ನಟನೆ ಹೀಗೆ ಯಾವುದೇ ವಿಷಯದಲ್ಲೂ ಶ್ರೀದೇವಿಗೆ ಸಾಟಿ ಯಾರೂ ಇಲ್ಲ. ತಮಿಳು, ತೆಲುಗು ಪರದೆಯಲ್ಲಿ ಒಳ್ಳೆ ಹೆಸರು ಮಾಡಿದ್ದ ಅವರು, ಬಾಲಿವುಡ್‌ಗೂ ಹೋಗಿ ಅಲ್ಲೂ ಸೈ ಎನಿಸಿಕೊಂಡರು. ಭಾರತದ ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿ ಮೆಚ್ಚುಗೆ ಗಳಿಸಿದರು. ಮುಂಬೈನಲ್ಲೇ ನೆಲೆಸಿ, ನಿರ್ಮಾಪಕ ಬೋನಿ ಕಪೂರ್‌ರನ್ನ ಪ್ರೀತಿಸಿ ಮದುವೆಯಾದರು.