ಟಾಲಿವುಡ್‌ನಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆಯುತ್ತಿರುವ ಕಿಸ್ ಬೆಡಗಿ ಶ್ರೀಲೀಲಾ ಇದೀಗ ಬಾಲಿವುಡ್‌ನಲ್ಲಿಯೂ ಸಾಕಷ್ಟು ಬ್ಯುಸಿಯಾಗಿದ್ದಾರೆ. ಮೊನ್ನೆ ತಾನೇ ರಿಲೀಸ್ ಆದ ಕಿರೀಟಿ ನಟನೆಯ ಕನ್ನಡ ಸಿನಿಮಾ ‘ಜೂನಿಯರ್’ನಲ್ಲಿ ನಾಯಕಿಯಾಗಿ ನಟಿಸಿದ್ದರು.
26
ಇದೀಗ ಬಾಲಿವುಡ್ ಸಿನಿಮಾವೊಂದರಲ್ಲಿ ರಣವೀರ್ ಸಿಂಗ್ ಜೊತೆಗೆ ನಟಿ ಶ್ರೀಲೀಲಾ ತೆರೆ ಹಂಚಿಕೊಳ್ಳಲಿದ್ದಾರೆ. ಪ್ರಖ್ಯಾತ ನಟ ಬಾಬ್ಬಿ ಡಿಯೋಲ್ ಈ ಚಿತ್ರದ ಮುಖ್ಯ ಪಾತ್ರದಲ್ಲಿದ್ದಾರೆ.
36
ಈಗಾಗಲೇ ಕಾರ್ತಿಕ್ ಆರ್ಯನ್ ಅವರೊಂದಿಗೆ ಚೊಚ್ಚಲ ಹಿಂದಿ ಸಿನಿಮಾದಲ್ಲಿ ನಟಿಸುತ್ತಿರುವ ಶ್ರೀಲೀಲಾ ಅವರನ್ನು ಮತ್ತೊಂದು ಬಂಪರ್ ಅವಕಾಶ ಹುಡುಕಿಕೊಂಡು ಬಂದಿದೆ.
ಮುಂಬೈನ ಮೊಹಬಾಬ್ ಸ್ಟುಡಿಯೋದಲ್ಲಿ ರಣವೀರ್ ಸಿಂಗ್, ಶ್ರೀಲೀಲಾ ಹಾಗೂ ಬಾಬ್ಬಿ ಡಿಯೋಲ್ ಜೊತೆಯಾಗಿ ಕಾಣಿಸಿಕೊಂಡಿದ್ದು, ಶೀಘ್ರ ಸಿನಿಮಾದ ಫಸ್ಟ್ ಲುಕ್ ಹೊರಬರಲಿದೆ ಎನ್ನಲಾಗಿದೆ. ಈ ಸಿನಿಮಾದ ನಿರ್ದೇಶಕರು, ನಿರ್ಮಾಪಕರ ಬಗ್ಗೆ ಇನ್ನಷ್ಟೇ ವಿವರಗಳು ಲಭ್ಯವಾಗಬೇಕಿದೆ.
56
ಶ್ರೀಲೀಲಾ ಮೊದಲು 1.5 ರಿಂದ 2 ಕೋಟಿ ರೂ.ಗಳವರೆಗೆ ಸಂಭಾವನೆ ಪಡೆಯುತ್ತಿದ್ದರು. ಆದರೆ ಈಗ ಅವರ ಸಂಭಾವನೆಯನ್ನು 4 ಕೋಟಿ ರೂ.ಗಳಿಗೆ ಹೆಚ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
66
ಇನ್ನು ಡಾನ್ಸ್‌ನಿಂದಲೇ ಎಲ್ಲರ ಮನಗೆದ್ದಿರುವ ಶ್ರೀಲೀಲಾ ನಾಯಕಿಯಾಗಿ ನಟಿಸಿರುವ ಚಿತ್ರಗಳು ಅಷ್ಟಾಗಿ ಯಶಸ್ಸು ಕಾಣದಿದ್ದರೂ ಸಂಭಾವನೆ ಮಾತ್ರ ದೊಡ್ಡ ಮೊತ್ತಕ್ಕೆ ಏರಿಸಿಕೊಂಡಿರುವ ಬಗ್ಗೆ ಗುಸುಗುಸು ಚರ್ಚೆ ನಡೆದಿದೆ.