ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆದ ಶ್ರೀಲೀಲಾ; ನಟಿಯ ಆಂತರಿಕ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

Published : Mar 02, 2024, 04:48 PM IST

'ಗುಂಟೂರು ಖಾರಂ' ಖ್ಯಾತಿಯ ನಟಿ ಶ್ರೀಲೀಲಾ ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆದಿದ್ದಾರೆ. ನಟಿಯ ಕಾರ್ಯ ಸಾಕಷ್ಟು ಶ್ಲಾಘನೆಗೆ ಪಾತ್ರವಾಗುತ್ತಿದೆ. 

PREV
18
ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆದ ಶ್ರೀಲೀಲಾ; ನಟಿಯ ಆಂತರಿಕ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

ಮಹೇಶ್ ಬಾಬು ಅವರ ಚಿತ್ರ 'ಗುಂಟೂರು ಖಾರಂ'ನಲ್ಲಿ ಕೊನೆಯದಾಗಿ ಕಾಣಿಸಿಕೊಂಡ ನಟಿ ಶ್ರೀಲೀಲಾ ಮದುವೆಯಾಗದೆ ತಾಯಿಯಾಗಿದ್ದಾರೆ.

28

ಹೌದು, ಶ್ರೀಲೀಲಾ ಅವರ ಈ ಕಾರ್ಯ ಕಂಡು ಅವರೊಳಗಿನ ತಾಯ್ತನಕ್ಕೆ ಅವರ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

38

ನಟಿಯು ಇತ್ತೀಚೆಗೆ ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಭೇಟಿ ನೀಡಿ ಒಬ್ಬ ಗಂಡು, ಒಬ್ಬ ಹೆಣ್ಣು ಸೇರಿ ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆದಿದ್ದಾರೆ.

48

ಗುರು ಮತ್ತು ಶೋಭಿತಾ ಎಂಬ ಇಬ್ಬರು ಮಕ್ಕಳನ್ನು ದತ್ತು ಪಡೆದಿರುವ ಶ್ರೀಲೀಲಾ ಉದಾರ ಮತ್ತು ಚಿಂತನಶೀಲ ಕಾರ್ಯ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ.

58
Sreeleela

ಬೆಂಗಳೂರು ಮೂಲದ 22 ವರ್ಷದ ಯುವ ನಟಿಯು ಸಣ್ಣ ವಯಸ್ಸಿನಲ್ಲೇ ತಮ್ಮ ಕಾರ್ಯದ ಮೂಲಕ ಇತರೆ ನಟಿಯರು ಸೇರಿ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ.

68
Sreeleela

ನಟಿ ಕರ್ನಾಟಕದ ಕಲ್ಯಾಣ ಕೇಂದ್ರವೊಂದಕ್ಕೆ ಭೇಟಿ ನೀಡಿದ್ದು, ಇನ್ನು ಮುಂದೆ ಇಬ್ಬರು ಮಕ್ಕಳನ್ನು ಸಾಕಲು ಆರ್ಥಿಕವಾಗಿ ಬೆಂಬಲ ನೀಡಲಿದ್ದಾರೆ.

78

ಅಷ್ಟೇ ಅಲ್ಲ, ಮಕ್ಕಳಿಗೆ ಶಿಕ್ಷಣವನ್ನೂ ನೀಡಲಿದ್ದಾರೆ ಎಂದು ವರದಿಯಾಗಿದೆ. ಶ್ರೀಲೀಲಾ ಅವರು ವೈಯಕ್ತಿಕ ಕಾರಣಗಳಿಂದ  ಚಿತ್ರಗಳಿಂದ ವಿರಾಮ ತೆಗೆದುಕೊಂಡಿದ್ದಾರೆ ಎಂದೂ ವರದಿಯಾಗಿದೆ.

 

88

ನಟಿ ಹರೀಶ್ ಶಂಕರ್ ನಿರ್ದೇಶನದ 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿ ಪವರ್‌ಸ್ಟಾರ್ ಪವನ್ ಕಲ್ಯಾಣ್  ಜೊತೆ ಶೀಘ್ರದಲ್ಲೇ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ; 150 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಿಸಲಾಗಿದೆ.

Read more Photos on
click me!

Recommended Stories